ಅಥಣಿ :ಕೃಷ್ಣಾ ನದಿಯ ಉಗಮ ಸ್ಥಳ ಮಹಾರಾಷ್ಟ್ರದ ಮಹಾಬಲೇಶ್ವರದಲ್ಲಿ ಭಾರಿ ಪ್ರಮಾಣದಲ್ಲಿ ಮಳೆಯಾಗುತ್ತಿದೆ. ಹಾಗಾಗಿ ಅಥಣಿ ತಾಲೂಕಿನ ಜನವಾಡ ಗ್ರಾಮವು ನದಿ ತೀರದಿಂದ ಕೆಲವೇ ಕೆಲವು ದೂರದಲ್ಲಿರುವುದರಿಂದ ಆತಂಕ ಶುರುವಾಗಿದೆ. ಮಹಾರಾಷ್ಟ್ರದಿಂದ ಒಂದು ಲಕ್ಷ ಕ್ಯೂಸೆಕ್ಗೂ ಮೇಲ್ಪಟ್ಟ ನೀರು ಹರಿದು ಬಂದ್ರೆ, ಮತ್ತೆ ಈ ಗ್ರಾಮ ಜಲಾವೃತವಾಗುವ ಅಪಾಯ ಎದುರಾಗಿದೆ.
'ಮಹಾ'ಬಲೇಶ್ವರದಲ್ಲಿ ಭಾರಿ ಮಳೆ.. ಕೃಷ್ಣಾ ನದಿ ತಟದ ಗ್ರಾಮಸ್ಥರಿಗೆ ಮತ್ತೆ ನೆರೆಯ ಆತಂಕ - anxiety in athani
ಕಳೆದ ಬಾರಿಯ ಪ್ರವಾಹದ ಕಹಿ ನೆನಪು ಇನ್ನೂ ಮರೆತಿಲ್ಲ. ಈ ಬಾರಿಯೂ ನೀರಿನ ಮಟ್ಟ ಏರಿಕೆಯಾದ್ರೆ ಬೇರೆಡೆ ಹೋಗಲು ರಸ್ತೆ ಮಾರ್ಗವೂ ಇಲ್ಲ. ದಿಢೀರನೆ ನೀರಿನ ಮಟ್ಟ ಹೆಚ್ಚಾದ್ರೆ ಸಾವು-ನೋವುಗಳಾಗುವ ಆತಂಕ..
ಸಾವು-ನೋವು ಖಂಡಿತಾ :ಈ ಕುರಿತು ಈಟಿವಿ ಭಾರತ್ನೊಂದಿಗೆ ಮಾತನಾಡಿದ ಸ್ಥಳೀಯ ರಮೇಶ್ ದಾಮಗೌಡ, ಕಳೆದ ಬಾರಿಯ ಪ್ರವಾಹದ ಕಹಿ ನೆನಪನ್ನು ನಾವು ಇನ್ನೂ ಮರೆತಿಲ್ಲ. ಈ ಬಾರಿಯೂ ನೀರಿನ ಮಟ್ಟ ಏರಿಕೆಯಾದಲ್ಲಿ ಬೇರೆ ಕಡೆ ಹೋಗುವುದಕ್ಕೆ ರಸ್ತೆ ಮಾರ್ಗವೂ ಇಲ್ಲ.ಇರೋರಸ್ತೆಯೂ ಕೊಚ್ಚಿ ಹೋಗಿದೆ. ದಿಢೀರನೆ ನೀರಿನ ಮಟ್ಟ ಹೆಚ್ಚಾದ್ರೆ ಸಾವು ನೋವುಗಳು ಆಗುವ ಆತಂಕವಿದೆ. ಜಿಲ್ಲಾಡಳಿತ ಕಳೆದ ಬಾರಿಯ ಪ್ರವಾಹದ ಪರಿಹಾರವನ್ನೂ ನೀಡಿಲ್ಲ. ತಕ್ಷಣ ಗ್ರಾಮಕ್ಕೆ ಸೇತುವೆ ಹಾಗೂ ಬೋಟ್ ವ್ಯವಸ್ಥೆ ಮಾಡಬೇಕೆಂದು ಒತ್ತಾಯಿಸಿದರು.
ಸಮಸ್ಯೆ ಇನ್ನೂ ಜೀವಂತ ಇದೆ :ಕಳೆದ ಬಾರಿ ಬೆಳೆಗಳು ಕೊಚ್ಚಿ ಹೋಗಿ ಅಪಾರ ಹಾನಿಯಾಗಿತ್ತು. ಶಾಶ್ವತ ಮರು ವಸತಿ ಕಲ್ಪಿಸುವ ಸರ್ಕಾರದ ಭರವಸೆ ಇನ್ನೂ ಈಡೇರಿಲ್ಲ.ಜನವಾಡ ಗ್ರಾಮಕ್ಕೆ ಸಂಪರ್ಕ ಕಲ್ಪಿಸುವ ಸೇತುವೆ ಇನ್ನೂ ನಿರ್ಮಿಸಿಲ್ಲ. ನೆರೆ ಪೀಡಿತ ಪ್ರದೇಶಗಳಲ್ಲಿನ ರಸ್ತೆ, ಸಂತ್ರಸ್ತರಿಗೆ ಮನೆಗಳು ನಿರ್ಮಿಸಿಲ್ಲ. ಸಂತ್ರಸ್ತರು ಎಷ್ಟೇ ಹೋರಾಟ ಮಾಡಿದ್ರೂ ಇನ್ನೂ ಪರಿಹಾರ ದೊರೆತಿಲ್ಲ. ಈಗ ಮತ್ತೆ ಮುಂಗಾರು ಮಳೆ ಶುರುವಾಗಿದ್ರಿಂದ ಮುಂದೇನು ಅನ್ನೋ ಚಿಂತೆಯಲ್ಲಿದ್ದಾರೆ ಗ್ರಾಮದ ಮತ್ತೊಬ್ಬ ಸ್ಥಳೀಯ ಮಹಾದೇವ ಯಲಸೆಟ್ಟಿ.