ಚಿಕ್ಕೋಡಿ (ಬೆಳಗಾವಿ): ಮಹಾರಾಷ್ಟ್ರದಲ್ಲಿ ಹಲವು ದಿನಗಳಿಂದ ಸುರಿಯುತ್ತಿರುವ ಮಳೆಯಿಂದಾಗಿ ಕೃಷ್ಣಾ ನದಿ 4 ಅಡಿ ಹಾಗೂ ದೂಧಗಂಗಾ ನದಿ ನೀರಿನ ಮಟ್ಟ 3 ಅಡಿವರೆಗೆ ಏರಿಕೆಯಾಗಿದೆ.
ಕೃಷ್ಣಾ ನದಿಗೆ ಬಿಟ್ಟಿರುವ ನೀರು 1,40,000 ಕ್ಯೂಸೆಕ್‌ಗಿಂತ ಅಧಿಕವಿದೆ ಎಂದು ಚಿಕ್ಕೋಡಿ ತಹಶೀಲ್ದಾರ್ ಸುಭಾಷ್ ಸಂಪಗಾಂವಿ ಈಟಿವಿ ಭಾರತ್ಗೆ ಮಾಹಿತಿ ನೀಡಿದ್ದಾರೆ. ಮಹಾರಾಷ್ಟ್ರದ ರಾಜಾಪುರ ಬ್ಯಾರೇಜ್‌ನಿಂದ 1,20,000 ಕ್ಯೂಸೆಕ್ ನೀರು, ದೂಧಗಂಗಾ ನದಿಯಿಂದ 20,416 ಕ್ಯೂಸೆಕ್ ನೀರು ಸೇರಿ ಒಟ್ಟು 1,40,000 ಕ್ಯೂಸೆಕ್ ನೀರು ಕೃಷ್ಣಾಗೆ ಹರಿದು ಬರುತ್ತಿದೆ.
ಕೃಷ್ಣಾ ನದಿ ನೀರಿನ ಮಟ್ಟ ಹೆಚ್ಚಳ ಮಹಾರಾಷ್ಟ್ರದ ಕೊಯ್ನಾ-130 ಮಿ.ಮೀ., ನವಜಾ-183 ಮಿ.ಮೀ., ಮಹಾಬಲೇಶ್ವರ-198 ಮಿ.ಮೀ., ವಾರಣಾ-88 ಮಿ.ಮೀ., ಕಾಳಮ್ಮವಾಡಿ -103 ಮಿ.ಮೀ., ರಾಧಾನಗರಿ-141 ಮಿ.ಮೀ., ಪಾಟಗಾಂವ -233 ಮಿ.ಮೀ. ಮಳೆಯಾಗಿರುವುದಾಗಿ ವರದಿಯಾಗಿದೆ.
ಚಿಕ್ಕೋಡಿಯಲ್ಲಿ - 27.1 ಮಿ.ಮೀ., ಅಂಕಲಿ -10.6 ಮಿ.ಮೀ., ನಾಗರಮುನ್ನೋಳಿ 14.6 ಮಿ.ಮೀ. ಹಾಗೂ ಸದಲಗಾ - 17.6 ಮಿ.ಮೀ. ಮಳೆಯಾಗಿದೆ.
ಸದ್ಯ ಕೊಯ್ನಾ ಜಲಾಶಯ ಶೇ. 88ರಷ್ಟು, ವಾರಣಾ ಜಲಾಶಯ ಶೇ. 92, ರಾಧಾನಗರಿ ಜಲಾಶಯ ಶೇ. 100, ಕಣೇರ ಜಲಾಶಯ 93, ಧೂಮ ಜಲಾಶಯ ಶೇ. 85, ಪಾಟಗಾಂವ ಶೇ. 100, ಧೂದಗಂಗಾ ಶೇ. 93ರಷ್ಟು ತುಂಬಿವೆ. ಹಿಪ್ಪರಗಿ ಬ್ಯಾರೇಜ್‌ನಿಂದ 1,19,000 ಹಾಗೂ ಆಲಮಟ್ಟಿ ಜಲಾಶಯದಿಂದ 2,50,000 ಕ್ಯೂಸೆಕ್ ನೀರು ಹೊರ ಬಿಡಲಾಗುತ್ತಿದೆ.