ಚಿಕ್ಕೋಡಿ: ರಾತ್ರಿಯಿಡೀ ಮಳೆರಾಯನ ಅಬ್ಬರ ಜೋರಾಗಿದ್ದು, ಹಲವು ಮನೆಗಳಿಗೆ ಮಳೆ ನೀರು ನುಗ್ಗಿರುವ ಘಟನೆ ಬೆಳಗಾವಿ ಜಿಲ್ಲೆಯ ಹುಕ್ಕೇರಿ ಪಟ್ಟಣದಲ್ಲಿ ನಡೆದಿದೆ.
ಹುಕ್ಕೇರಿಯಲ್ಲಿ ಮಳೆ ಅಬ್ಬರಕ್ಕೆ ಜನಜೀವನ ತತ್ತರ
ಬೆಳಗಾವಿಯ ವಿವಿಧೆಡೆ ಮಳೆರಾಯ ಆರ್ಭಟಿಸಿದ್ದು, ಮನೆಗಳಿಗೆ ನೀರು ನುಗ್ಗಿದೆ. ಅಪಾರ ಪ್ರಮಾಣದ ಬೆಳೆಗಳು ನಾಶವಾಗಿವೆ.
ಮಳೆ ಅಬ್ಬರಕ್ಕೆ ನಲುಗಿ ಹೋದ ಜನರು
ಹುಕ್ಕೇರಿ ಪಟ್ಟಣದ ಭೋವಿಗಲ್ಲಿ ಹಾಗೂ ಸುಣಗಾರ ಗಲ್ಲಿಯ 15ಕ್ಕೂ ಹೆಚ್ಚು ಮನೆಗಳಿಗೆ ನೀರು ನೀರು ನುಗ್ಗಿದೆ. ಮನೆಗೋಡೆ ಕುಸಿಯುವ ಭೀತಿಯಲ್ಲಿ ಜನರಿದ್ದಾರೆ.
ಚಿಕ್ಕೋಡಿ, ಹುಕ್ಕೇರಿ, ರಾಯಬಾಗ, ಕಾಗವಾಡ ಹಾಗೂ ಅಥಣಿ ತಾಲೂಕುಗಳ ವಿವಿಧೆಡೆ ಶನಿವಾರ ರಾತ್ರಿ ಸುರಿದ ಮಳೆಯಿಂದ ಅಪಾರ ಪ್ರಮಾಣದಲ್ಲಿ ಬೆಳೆಗಳು ಹಾಳಾಗಿವೆ.