ಕರ್ನಾಟಕ

karnataka

ETV Bharat / state

ಮತ್ತೆ ಸುರಿದ ಧಾರಾಕಾರ ಮಳೆಗೆ ತಬ್ಬಿಬ್ಬಾದ ಗಡಿ‌ಭಾಗದ ರೈತರು!

ಚಿಕ್ಕೋಡಿ ತಾಲೂಕಿನಲ್ಲಿ ಪ್ರಸಕ್ತ ಸಾಲಿನ ಪ್ರವಾಹ ಮತ್ತು ಸುರಿದ ಮಳೆಯ ಅಬ್ಬರದಿಂದಾಗಿ ಕೃಷ್ಣಾ, ದೂಧಗಂಗಾ, ವೇದಗಂಗಾ, ಪಂಚಗಂಗಾ‌ ಮತ್ತು ಚಿಕೋತ್ರಾ ನದಿ ತೀರದ 30 ಕ್ಕೂ ಹೆಚ್ಚು ಗ್ರಾಮಗಳಲ್ಲಿ 31 ಸಾವಿರ ಹೆಕ್ಟೆರ್​ಗಿಂತ ಹೆಚ್ಚು ಬೆಳೆ ಹಾನಿಯಾಗಿದೆ.

ಮತ್ತೆ ಸುರಿದ ಧಾರಾಕಾರ ಮಳೆಗೆ ತಬ್ಬಿಬ್ಬಾದ ಗಡಿ‌ಭಾಗದ ರೈತರು

By

Published : Oct 14, 2019, 6:11 AM IST

ಚಿಕ್ಕೋಡಿ:ಪ್ರಸಕ್ತ ಸಾಲಿನಲ್ಲಿನ ಮುಂಗಾರು ಮಳೆಯ ಅಬ್ಬರದಿಂದ ಬಂದೆರಗಿದ ಪ್ರವಾಹದಿಂದಾಗಿ ರೈತರು ಕುಗ್ಗಿಹೋಗಿದ್ದಾರೆ. ಇನ್ನೇನು ಚೇತರಿಸಿಕೊಳ್ಳುವಷ್ಟರಲ್ಲೇ ಮತ್ತೆ ಕಳೆದ ನಾಲ್ಕೈದು ದಿನದಿಂದ ನಿರಂತರ ಸುರಿದ ಧಾರಾಕಾರ ಮಳೆಯಿಂದಾಗಿ ಬೆಳೆದ ಪೈರುಗಳು ನಾಶವಾಗಿದ್ದು, ರೈತರು ಇನ್ನಷ್ಟು ಆತಂಕಕ್ಕೊಳಗಾಗಿದ್ದಾರೆ.

ಮತ್ತೆ ಸುರಿದ ಧಾರಾಕಾರ ಮಳೆಗೆ ತಬ್ಬಿಬ್ಬಾದ ಗಡಿ‌ಭಾಗದ ರೈತರು

ನಿರಂತರ ಸುರಿಯುತ್ತಿರುವ ಮಳೆಯಿಂದಾಗಿ ಶೇಂಗಾ, ಮೆಣಸಿನಕಾಯಿ, ಸೌತೆಕಾಯಿ, ಟೊಮೆಟೊ, ಚೆಂಡು ಹೂಗಳು, ತಂಬಾಕು, ಬೆಳೆದು ನಿಂತ ಮೆಕ್ಕೆಜೋಳ ಮತ್ತು 15 ದಿನಗಳ ಹಿಂದೆಯಷ್ಟೆ ನಾಟಿ ಮಾಡಿದ್ದ ಕಬ್ಬು ಹೀಗೆ ವಿವಿಧ ಬೆಳೆಗಳಿಗೆ ಹಾನಿ ಉಂಟಾಗಿದೆ. ಇದರಿಂದಾಗಿ ರೈತರ ಕೈಗೆ ಬಂದ ತುತ್ತು ಬಾಯಿಗೆ ಬರದಂತಾಗಿದೆ.

ಚಿಕ್ಕೋಡಿ ತಾಲೂಕಿನಲ್ಲಿ ಪ್ರಸಕ್ತ ಸಾಲಿನ ಪ್ರವಾಹ ಮತ್ತು ಸುರಿದ ಮಳೆಯ ಅಬ್ಬರದಿಂದಾಗಿ ಕೃಷ್ಣಾ, ದೂಧಗಂಗಾ, ವೇದಗಂಗಾ, ಪಂಚಗಂಗಾ‌ ಮತ್ತು ಚಿಕೋತ್ರಾ ನದಿ ತೀರದ 30 ಕ್ಕೂ ಹೆಚ್ಚು ಗ್ರಾಮಗಳಲ್ಲಿ 31 ಸಾವಿರ ಹೆಕ್ಟೆರ್​ಗಿಂತ ಹೆಚ್ಚು ಬೆಳೆ ಹಾನಿಯಾಗಿದೆ ಎಂದು ಅಂದಾಜಿಸಲಾಗಿದೆ.

ರೈತರ ಬದುಕು ಹಸನಾಗಲು ಸರ್ಕಾರ, ಸ್ಥಳೀಯ ಜನಪ್ರತಿನಿಧಿಗಳು ಮತ್ತು‌ ಅಧಿಕಾರಿಗಳು ಪ್ರಾಮಾಣಿಕ ಪ್ರಯತ್ನ ಮಾಡಿ ಶೀಘ್ರವೆ ಪರಿಹಾರ ಒದಗಿಸಿಕೊಡಲು ಪ್ರಯತ್ನಿಸಬೇಕೆಂಬುವುದು ರೈತರ ಒತ್ತಾಸೆಯಾಗಿದೆ.

ABOUT THE AUTHOR

...view details