ಕರ್ನಾಟಕ

karnataka

ETV Bharat / state

ಬೆಳಗಾವಿಯಲ್ಲಿ ಮನೆ ಜಲಾವೃತ.. ಜೈಂಟ್ಸ್ ಗ್ರೂಪ್​ನಿಂದ ಗರ್ಭಿಣಿ ಸ್ಥಳಾಂತರ - ಬೆಳಗಾವಿಯಲ್ಲಿ ಭಾರಿ ಮಳೆ

ಭಾರಿ ಮಳೆಯಿಂದಾಗಿ ಜಲಾವೃತವಾಗಿದ್ದ ಮನೆಯಲ್ಲಿ ಸಿಲುಕಿದ್ದ ಗರ್ಭಿಣಿಯನ್ನು ಜೈಂಟ್ಸ್ ಗ್ರೂಪ್ ಯುವಕರ ತಂಡ ರಕ್ಷಿಸಿದೆ.

ಜೈಂಟ್ಸ್ ಗ್ರೂಪ್​
ಜೈಂಟ್ಸ್ ಗ್ರೂಪ್​

By

Published : Jul 24, 2021, 9:23 AM IST

ಬೆಳಗಾವಿ:ಜಲಾವೃತವಾಗಿದ್ದ ಮನೆಯಲ್ಲಿ ಸಿಲುಕಿಕೊಂಡಿದ್ದ ತುಂಬು ಗರ್ಭಿಣಿಯನ್ನು ಸ್ಥಳೀಯರ ಸಹಾಯದೊಂದಿಗೆ ಜೈಂಟ್ಸ್ ಗ್ರೂಪ್​ ಯುವಕರ ತಂಡ ರಕ್ಷಿಸಿ ಆಸ್ಪತ್ರೆಗೆ ರವಾನಿಸಿ ಮಾನವೀಯತೆ ಮೆರೆದಿದ್ದಾರೆ.

ಜೈಂಟ್ಸ್ ಗ್ರೂಪ್​ನಿಂದ ಗರ್ಭಿಣಿ ಸ್ಥಳಾಂತರ

ಕಳೆದ ಒಂದು ವಾರದಿಂದ ಸುರಿಯುತ್ತಿರುವ ಭಾರಿ ಮಳೆಗೆ ಇಲ್ಲಿನ ಇಂದ್ರಪ್ರಸ್ಥ ನಗರದ ಸಾಕಷ್ಟು ಮನೆಗಳು ಜಲಾವೃತವಾಗಿದ್ದವು. ಅದೇ ಏರಿಯಾದಲ್ಲಿ ತುಂಬು ಗರ್ಭಿಣಿಯೊಬ್ಬರು ಮನೆಯಲ್ಲಿ ಸಿಲುಕಿಕೊಂಡಿದ್ದರು. ಈ ವೇಳೆ ಸ್ಥಳೀಯರ ಮಾಹಿತಿ ಮೇರೆಗೆ ಸ್ಥಳಕ್ಕಾಗಮಿಸಿದ ಜೈಂಟ್ಸ್ ಗ್ರೂಪ್ ತಂಡದ ಮದನ್ ಬಾಮ್ನೆ, ಸುನಿಲ್ ಮುತಗೇಕರ್, ಪ್ರತೀಕ್ ಗುರವ್ ಸೇರಿದಂತೆ ಯುವಕರ ತಂಡ ಗರ್ಭಿಣಿಯನ್ನು ರಕ್ಷಿಸಿ ಆ್ಯಂಬುಲೆನ್ಸ್ ಮೂಲಕ ಆಸ್ಪತ್ರೆಗೆ ರವಾನಿಸಿದ್ದಾರೆ.

ಇದನ್ನೂ ಓದಿ: ಹೊನ್ನಾವರದಲ್ಲಿ ಗಾಳಿ ಸಹಿತ ಭಾರಿ ಮಳೆ: ದೋಣಿ ಮಗುಚಿ ಪತ್ನಿ ಸಾವು, ಪತಿ ಪಾರು

ಯುವಕರ ಕಾರ್ಯಕ್ಕೆ ಅಲ್ಲಿನ ಸಾರ್ವಜನಿಕರು ಮೆಚ್ಚುಗೆ ವ್ಯಕ್ತಪಡಿಸಿದರು. ಈ ಜೈಂಟ್ಸ್ ಯುವಕರ ತಂಡ ಮಳೆಗಾಲದ ಸಮಯದಲ್ಲಿ ಸಂಕಷ್ಟಕ್ಕೆ ಸಿಲುಕಿರುವ ಹಲವಾರು ಜನರನ್ನು ಸ್ಥಳಾಂತರಿಸಿದೆ.

ABOUT THE AUTHOR

...view details