ಕರ್ನಾಟಕ

karnataka

ETV Bharat / state

ಬೆಳಗಾವಿಯಲ್ಲಿ ಬಿರುಗಾಳಿ ಸಹಿತ ವರುಣನ ಅಬ್ಬರ: ಮನೆಗೆ ನುಗ್ಗಿದ ನೀರು - ಬೆಳಗಾವಿ ಮಳೆ ಸುದ್ದಿ

ಬೆಳಗಾವಿಯ ಶಾಹು‌ನಗರದ ಭೇಂಡೆ ಬಜಾರ್, ಖಡೇಬಜಾರ್​, ಪಾಂಗೊಲ್ ಪ್ರದೇಶದ ಅಂಗಡಿ ಮನೆಗಳಿಗೆ ಮಳೆ ನೀರು ನುಗ್ಗಿ ಅವಾತರ ಸೃಷ್ಟಿಸಿದ್ದು, ಸ್ಥಳೀಯರು ಜನಪ್ರತಿನಿಧಿಗಳು ಹಾಗೂ ಪಾಲಿಕೆ ಸದಸ್ಯರ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದ್ದಾರೆ.

heavy rain in belagavi
ಬೆಳಗಾವಿಯಲ್ಲಿ ಭಾರೀ‌ ಮಳೆ..ತಗ್ಗು ಪ್ರದೇಶದ ಮನೆಗಳಿಗೆ ನುಗ್ಗಿದ ನೀರು

By

Published : May 31, 2020, 7:57 PM IST

ಬೆಳಗಾವಿ:ಜಿಲ್ಲೆಯಲ್ಲಿ ಧಾರಾಕಾರ ಮಳೆ ಸುರಿದಿದ್ದರಿಂದ ತಗ್ಗು ಪ್ರದೇಶದ ಮನೆಗಳಿಗೆ ನೀರು ನುಗ್ಗಿ ನಿವಾಸಿಗರು ಪರದಾಡುವಂತಾಗಿದೆ.

ಬೆಳಗಾವಿಯಲ್ಲಿ ಸುರಿದ ಮಳೆ

ಶಾಹು‌ನಗರದ ಭೇಂಡೆ ಬಜಾರ್, ಖಡೇಬಜಾರ್​, ಪಾಂಗೊಲ್ ಪ್ರದೇಶಗಳಲ್ಲಿನ ಅಂಗಡಿ ಹಾಗೂ ಮನೆಗಳಿಗೆ ಮಳೆ ನೀರು ನುಗ್ಗಿ ಅವಾಂತರ ಸೃಷ್ಟಿಸಿದೆ. ತಾಲೂಕಿನ ವಡಗಾವಿಯಲ್ಲಿ ಬಿರುಗಾಳಿ ಸಹಿತ ಬಾರಿ ಮಳೆಗೆ ಐದಕ್ಕೂ ಹೆಚ್ಚು ಮನೆಗಳ ಮೇಲ್ಛಾವಣಿ ಹಾರಿಹೋಗಿದೆ. ನಿರ್ಮಾಣ ಹಂತದ ಮನೆಯ ಗೋಡೆ ಕುಸಿದು, ಓರ್ವನಿಗೆ ಗಾಯಗಳಾಗಿವೆ.

ಲಾಕ್‌ಡೌನ್ ಹಿನ್ನಲೆ ನಗರದ ಪ್ರಮುಖ ಒಳಚರಂಡಿಗಳ ಸ್ವಚ್ಛತೆ ಮಾಡದೆ ಇರುವುದರಿಂದ ಮಳೆ ನೀರು ಹೊರಿದು ಹೋಗದೆ ತಗ್ಗು ಪ್ರದೇಶದ ಮನೆಗಳಿಗೆ ನುಗ್ಗಿದೆ. ಪ್ರತಿ ವರ್ಷ ಮಳೆ ಆದಾಗಲೂ ಹೀಗೆ ಆಗುತ್ತದೆ ಎಂದು ಸ್ಥಳೀಯ ನಿವಾಸಿಗರು ಜನಪ್ರತಿನಿಧಿಗಳು ಹಾಗೂ ಮಹಾನಗರ ಪಾಲಿಕೆ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದ್ದಾರೆ.

ABOUT THE AUTHOR

...view details