ಚಿಕ್ಕೋಡಿ (ಬೆಳಗಾವಿ): ಹತ್ತು ಎಕರೆ ಜಮೀನಿನಲ್ಲಿ ಗೋವಿನ ಜೋಳ ಬಿತ್ತನೆ ಮಾಡಿ ಅದರಲ್ಲಿ ನಾಲ್ಕೈದು ಎಕರೆ ಕಟಾವು ಮಾಡಿ ರಾಶಿಗೆ ಸಿದ್ಧತೆ ಮಾಡಿಕೊಂಡಿದ್ದ ರೈತನ ಬೆಳೆ ಮಳೆಯಿಂದಾಗಿ ಸಂಫೂರ್ಣ ನಾಶವಾಗಿದೆ.
10 ಎಕರೆ ಗೋವಿನ ಜೋಳ ಮಳೆಗೆ ಆಹುತಿ: ಸಂಕಷ್ಟದಲ್ಲಿ ರೈತ - ಹತ್ತು ಎಕರೆ ಜಮೀನಿನಲ್ಲಿ ಗೋವಿನ ಜೋಳ ಬಿತ್ತನೆ
ಕುಂಭದ್ರೋಣ ಮಳೆಯ ಅಬ್ಬರದಿಂದಾಗಿ ರೈತರು ಸಂಕಷ್ಟ ಎದುರಿಸುತ್ತಿದ್ದು, ಹಲವೆಡೆ ರೈತರು ಬೆಳೆದಿರುವ ಬೆಳೆಗಳಿಗೆ ಹಾನಿಯಾಗಿದೆ. ಇದೀಗ ಚಿಕ್ಕೋಡಿಯ ರೈತ ಬೆಳದಿದ್ದ ಗೋವಿನ ಜೋಳ ಮಳೆಯಿಂದಾಗಿ ಹಾನಿಯಾಗಿದ್ದು, ಬೆವರು ಸುರಿಸಿ ಬೆಳೆದಿದ್ದ ಜೋಳ ನೀರು ಪಾಲಾಗಿದೆ.
10 ಎಕರೆ ಗೋವಿನ ಜೋಳ ಮಳೆಗೆ ಆಹುತಿ: ಸಂಕಷ್ಟದಲ್ಲಿ ರೈತ
ಜಿಲ್ಲೆಯ ರಾಯಬಾಗ ತಾಲೂಕಿನ ಅಲಖನೂರ ಗ್ರಾಮದ ಲಗಮ್ಮಣ್ಣಾ ಒಡಗೋಲೆ ಎಂಬ ರೈತ 10 ಎಕರೆ ಭೂಮಿಯಲ್ಲಿ ಸುಮಾರು ನಾಲ್ಜೈದು ಎಕರೆ ಗೋವಿನ ಜೋಳ ಕಟಾವು ಮಾಡಿ ಇನ್ನೇನು ಎರಡು ದಿನ ತೆನೆಗಳನ್ನು ಒಣಗಿಸಿ ರಾಶಿ ಮಾಡಬೇಕು ಎಂದುಕೊಂಡಿದ್ದರು. ಆದರೆ ಕುಂಭದ್ರೋಣ ಮಳೆಯಿಂದ ಜೋಳಗಳಲ್ಲಿ ಮೊಳಕೆಯೊಡೆದಿದ್ದು, ರೈತ ಸುಮಾರು 2 ಲಕ್ಷ ನಷ್ಟ ಅನುಭವಿಸುವಂತಾಗಿದೆ.
ಬೆಳೆಯಲ್ಲಿ ಮೊಳಗೆ ಒಡೆದು ಸಸಿ ಹೊರಬಂದಿದ್ದು, ಮಾರುಕಟ್ಟೆಯಲ್ಲೂ ಮಾರಲಾಗದೆ, ಹಸುಗಳಿಗೂ ನೀಡಲಾಗದೆ ರೈತ ಸಂಕಷ್ಟಕ್ಕೆ ಸಿಲುಕಿದ್ದಾನೆ.