ಬೆಳಗಾವಿ:ಜಿಲ್ಲೆಯ ಹಲವೆಡೆ ಕಳೆದ ರಾತ್ರಿಯಿಂದಲೂ ಸುರಿಯುತ್ತಿರುವ ತುಂತುರು ಮಳೆಯಿಂದಾಗಿ ಜನರ ಜೀವನ ಅಸ್ತವ್ಯಸ್ಥಗೊಂಡಿದ್ದು, ವ್ಯಾಪಾರ ವಹಿವಾಟು ಕುಂಠಿತಗೊಂಡಿದೆ.
ಬೆಳಗಾವಿ: ರಾತ್ರಿಯಿಂದಲೂ ಬಿಟ್ಟೂ ಬಿಡದೇ ಸುರಿಯುತ್ತಿದೆ ಜಿಟಿಜಿಟಿ ಮಳೆ - ಬೆಳಗಾವಿಯಲ್ಲಿ ಧಾರಾಕಾರ ಮಳೆ
ಕುಂದಾನಗರಿ ಬೆಳಗಾವಿಯಲ್ಲಿ ಬಿಟ್ಟೂ ಬಿಡದೇ ಜಿಟಿಜಿಟಿ ಮಳೆಯಿಂದಾಗಿ ಜನಜೀವನ ಅಸ್ತವ್ಯಸ್ತಗೊಂಡಿದೆ. ನಗರದ ಕೆಲವೆಡೆ ಸ್ಮಾರ್ಟ್ ಸಿಟಿ ಕಾಮಗಾರಿಗಳು ಪೂರ್ಣವಾಗದ ಕಾರಣ, ರಸ್ತೆಗಳಲ್ಲಿ ವಾಹನ ಸವಾರರು ಹರ ಸಾಹಸ ಪಡುವಂತಾಗಿದೆ.
![ಬೆಳಗಾವಿ: ರಾತ್ರಿಯಿಂದಲೂ ಬಿಟ್ಟೂ ಬಿಡದೇ ಸುರಿಯುತ್ತಿದೆ ಜಿಟಿಜಿಟಿ ಮಳೆ heavy rain fall in belagavi](https://etvbharatimages.akamaized.net/etvbharat/prod-images/768-512-8045786-103-8045786-1594880854065.jpg)
ಬೆಳಗಾವಿಯಲ್ಲಿ ಧಾರಾಕಾರ ಮಳೆ
ಬೆಳಗಾವಿ, ಬೈಲಹೊಂಗಲ, ಸವದತ್ತಿ ಹಾಗೂ ಖಾನಾಪೂರ ತಾಲೂಕಿನಲ್ಲಿ ಕಳೆದ 24 ಗಂಟೆಗಳಿಂದ ಧಾರಾಕಾರ ಮಳೆ ಹಾಗೂ ಕೆಲವು ತಾಲೂಕುಗಳಲ್ಲಿ ಜಿಟಿಜಿಟಿ ಮಳೆಯಾಗುತ್ತಿದೆ. ನಗರದ ಕೆಲವೆಡೆ ಸ್ಮಾರ್ಟ್ ಸಿಟಿ ಕಾಮಗಾರಿಗಳು ಪೂರ್ಣಾವಾಗದ ಕಾರಣ, ರಸ್ತೆಗಳಲ್ಲಿ ವಾಹನ ಸವಾರರು ಹರ ಸಾಹಸಪಡುವಂತಾಗಿದೆ.
ಹೀಗಾಗಿ, ಮಲಪ್ರಭಾ ನದಿಯ ಒಳಹರಿವು ಮತ್ತಷ್ಟು ಹೆಚ್ಚಾಗುವ ಭೀತಿ ಈ ಭಾಗದ ಮತ್ತು ಅದರ ತಟದಲ್ಲಿರುವ ಜನರಿಗಿದೆ. ಕೊರೊನಾ ವೈರಸ್ ಹೆಚ್ಚಳದ ನಡುವೆ ಶೀತ ಗಾಳಿ, ಜಿಟಿಜಿಟಿ ಮಳೆಯ ವಾತಾವರಣದಿಂದಾಗಿ ಜಿಲ್ಲೆಯ ಜನರು ಮತ್ತಷ್ಟು ಆಂತಕ್ಕಕ್ಕೀಡಾಗಿದ್ದಾರೆ.