ಕರ್ನಾಟಕ

karnataka

ETV Bharat / state

ಮಳೆಯಿಂದ 5 ಅಡಿ ಆಳಕ್ಕೆ ಕುಸಿದ ಜಲಾಲಪುರ-ದಿಗ್ಗೇವಾಡಿ ರಸ್ತೆ - ನಾಲ್ಕೈದು ಗ್ರಾಮಗಳಿಗೆ ಸಂಪರ್ಕ ಕಲ್ಪಿಸುವ ರಸ್ತೆ

ಚಿಕ್ಕೋಡಿಯ ಗ್ರಾಮವೊಂದರಲ್ಲಿ ಐದು ಅಡಿ ಆಳಕ್ಕೆ ರಸ್ತೆ ಕುಸಿದ ಪರಿಣಾಮ ವಾಹನ‌ ಸವಾರರು ಗಮ್ಯ ಸೇರಲು ಪರದಾಡುವಂತಾಗಿದ್ದು, ಬೃಹತ್​​ ವಾಹನಗಳ ಸಂಚಾರ ನಿಲ್ಲಿಸಲಾಗಿದೆ.

ರಸ್ತೆ

By

Published : Nov 3, 2019, 2:14 PM IST

ಚಿಕ್ಕೋಡಿ:ಐದು ಅಡಿ ಆಳಕ್ಕೆ ರಸ್ತೆ ಕುಸಿದ ಪರಿಣಾಮ ನಾಲ್ಕೈದು ಗ್ರಾಮಗಳಿಗೆ ಸಂಪರ್ಕ ಕಲ್ಪಿಸುವ ರಾಯಬಾಗ ತಾಲೂಕಿನ‌ ಜಲಾಲಪುರ ದಾರಿಯನ್ನು ಬಂದ್​​ ಮಾಡಲಾಗಿದೆ.

5 ಅಡಿ ಆಳಕ್ಕೆ ಕುಸಿದ ಜಲಾಲಪುರ-ಹಳೇದಿಗ್ಗೇವಾಡಿ ರಸ್ತೆ

ಚಿಕ್ಕೋಡಿ ತಾಲೂಕಿನ ಅಂಕಲಿ, ಬಾವನ ಸೌಂದತ್ತಿ, ದಿಗ್ಗೇವಾಡಿ, ಜಲಾಲಪುರ ಸೇರಿ ಚಿಂಚಲಿ ಗ್ರಾಮಗಳನ್ನು ಸಂಪರ್ಕಿಸುವ ಮಾರ್ಗ ಕುಸಿತವಾಗಿದೆ. ಸುಮಾರು ಐದು ಅಡಿ ಆಳ‌ ಕುಸಿದಿರುವ ಹಿನ್ನೆಲೆ ವಾಹನ‌ ಸವಾರರು ಗಮ್ಯ ಸೇರಲು ಪರದಾಡುತ್ತಿದ್ದಾರೆ. ಸದ್ಯ ನಾಲ್ಕು ಚಕ್ರ ವಾಹನಗಳ ಸಂಚಾರ ಸಂಪೂರ್ಣ ಬಂದ್ ಆಗಿದೆ.

ಗ್ರಾಮಸ್ಥರು, ಸಂಬಂಧಪಟ್ಟ ಅಧಿಕಾರಿಗಳು, ಜನಪ್ರತಿನಿಧಿಗಳ ಗಮನಕ್ಕೆ ಈ ವಿಷಯ ತಂದರೂ ಯಾರೂ ಕ್ರಮ‌ ಕೈಗೊಂಡಿಲ್ಲವೆಂದು ಸ್ಥಳೀಯರು ಆಕ್ರೋಶ ವ್ಯಕ್ತಪಡಿಸಿದ್ದಾರೆ. ಈಗಾಗಲೇ ರಸ್ತೆ ಕುಸಿದ ಜಾಗದಲ್ಲಿ ನಾಲ್ಕೈದು ಅಪಘಾತ ಸಂಭವಿಸಿವೆ. ಜಲಾಲಪುರದಿಂದ ಹಳೇ ದಿಗ್ಗೇವಾಡಿ ಗ್ರಾಮಕ್ಕೆ ಸಂಪರ್ಕ ಕಲ್ಪಿಸುವ ಈ ರಸ್ತೆ ಗುತ್ತಿಗೆದಾರರು ಮಾಡಿರುವ ಕಳಪೆ ಕಾಮಗಾರಿಯಿಂದ ಭಾರೀ ಮಳೆಗೆ ಕತ್ತರಿಸಿ ಬಿದ್ದು, ಸಂಚಾರಕ್ಕೆ ಸಂಚಕಾರ ತಂದಿದೆ ಎಂದು ಗ್ರಾಮಸ್ಥರು ಆರೋಪಿಸಿದ್ದಾರೆ.

ABOUT THE AUTHOR

...view details