ಬೆಳಗಾವಿ: ಸವದತ್ತಿ ತಾಲೂಕಿನಾದ್ಯಂತ ನಿನ್ನೆ ಸುರಿದ ಭಾರೀ ಮಳೆಗೆ ಸೊಗಲದಲ್ಲಿರುವ ಸೋಮೇಶ್ವರ ದೇವಸ್ಥಾನ ಜಲದಿಗ್ಬಂಧನಕ್ಕೆ ಒಳಗಾಗಿದೆ.
ಬೆಳಗಾವಿಯಲ್ಲಿ ಭಾರೀ ಮಳೆ: ಸೊಗಲ ಸೋಮೇಶ್ವರನಿಗೂ ಜಲ ದಿಗ್ಬಂಧನ - someshwar temple drowing
ಬೆಳಗಾವಿ ಜಿಲ್ಲೆಯ ಸವದತ್ತಿ ತಾಲೂಕಿನ ಸೊಗಲ ಕ್ಷೇತ್ರದಲ್ಲಿ ಮಳೆ ಅವಾಂತರ ಸೃಷ್ಟಿಸಿದೆ. ಭಾರೀ ಮಳೆಯಿಂದ ಅಪಾರ ಪ್ರಮಾಣದ ನೀರು ಸೋಮೇಶ್ವರ ದೇವಸ್ಥಾನದ ಗರ್ಭಗುಡಿಯೊಳಗೆ ನುಗ್ಗಿದೆ.
![ಬೆಳಗಾವಿಯಲ್ಲಿ ಭಾರೀ ಮಳೆ: ಸೊಗಲ ಸೋಮೇಶ್ವರನಿಗೂ ಜಲ ದಿಗ್ಬಂಧನ someshwar temple drowing](https://etvbharatimages.akamaized.net/etvbharat/prod-images/768-512-9179943-215-9179943-1602735019897.jpg)
ಭಾರೀ ಮಳೆ: ಸೊಗಲ ಸೋಮೇಶ್ವರನಿಗೂ ಜಲ ದಿಗ್ಬಂಧನ..
ಭಾರೀ ಮಳೆ: ಸೊಗಲ ಸೋಮೇಶ್ವರನಿಗೂ ಜಲ ದಿಗ್ಬಂಧನ
ಬೆಳಗಾವಿ ಜಿಲ್ಲೆಯ ಸವದತ್ತಿ ತಾಲೂಕಿನ ಸೊಗಲ ಕ್ಷೇತ್ರದಲ್ಲಿ ಮಳೆ ಅವಾಂತರ ಸೃಷ್ಟಿಸಿದೆ. ಭಾರೀ ಮಳೆಯಿಂದ ಅಪಾರ ಪ್ರಮಾಣದ ನೀರು ಶ್ರೀಕ್ಷೇತ್ರ ಸೋಮೇಶ್ವರ ದೇವಸ್ಥಾನದ ಗರ್ಭಗುಡಿಯೊಳಗೆ ನುಗ್ಗಿದೆ. ಅಲ್ಲದೆ ಸೋಮೇಶ್ವರನ ಮೂರ್ತಿ ಕೂಡ ಭಾಗಶಃ ಜಲಾವೃತಗೊಂಡಿದೆ. ದೇವಸ್ಥಾನದ ಹೊರ ಭಾಗದಲ್ಲಿ ಕೂಡ ಅಪಾಯದ ಮಟ್ಟದಲ್ಲಿ ನೀರು ಹರಿಯುತ್ತಿದೆ.
ದೇವಸ್ಥಾನಕ್ಕೆ ನೀರು ನುಗ್ಗಿದ ದೃಶ್ಯವನ್ನು ಸ್ಥಳೀಯರು ಮೊಬೈಲ್ನಲ್ಲಿ ಸೆರೆ ಹಿಡಿದಿದ್ದಾರೆ. ಹೀಗಾಗಿ ಮಳೆ ನಿಯಂತ್ರಣಕ್ಕೆ ಬರುವ ತನಕ ಭಕ್ತರ ಪ್ರವೇಶಕ್ಕೆ ನಿರ್ಬಂಧ ಹೇರಲಾಗಿದೆ. ಗರ್ಭಗುಡಿಯಲ್ಲಿ ಸೇರಿರುವ ನೀರನ್ನು ಸ್ಥಳೀಯರು ಹೊರ ತೆಗೆಯುತ್ತಿದ್ದಾರೆ.