ಕರ್ನಾಟಕ

karnataka

ETV Bharat / state

ಭಾರೀ ಮಳೆ ಹಿನ್ನೆಲೆ.. ಹಿಡಕಲ್ ಜಲಾಶಯದ 8 ಗೇಟ್​ ಓಪನ್​..

ಜಿಲ್ಲೆಯ ಹುಕ್ಕೇರಿ ತಾಲೂಕಿನ ಹಿಡಕಲ್ ಬಳಿ ಘಟಪ್ರಭಾ ನದಿಗೆ ಅಡ್ಡಲಾಗಿ ಹಿಡಕಲ್ ಜಲಾಶಯ ನಿರ್ಮಿಸಲಾಗಿದ್ದು, ಭಾರೀ ಮಳೆಯಾಗುತ್ತಿರುವ ಹಿನ್ನೆಲೆಯಲ್ಲಿ ಜಲಾಶಯ ಭರ್ತಿಯಾಗುವ ಹಂತ ತಲುಪಿದೆ. ಈ ಸಂಬಂಧ ಇಂದು ಡ್ಯಾಂನ ಎಂಟು ಗೇಟ್ ಓಪನ್ ಮಾಡಿ ಸುಮಾರು 25 ಸಾವಿರ‌ ಕ್ಯೂಸೆಕ್‌ನಷ್ಟು ಪ್ರಮಾಣದ ನೀರನ್ನ ಬಿಡುಗಡೆ ಮಾಡಲಾಯಿತು.

Hidakkal Reservoir,ಹಿಡಕಲ್ ಜಲಾಶಯ

By

Published : Aug 5, 2019, 4:35 PM IST

ಬೆಳಗಾವಿ:ಪಶ್ಚಿಮಘಟ್ಟ ಹಾಗೂ ಮಹಾರಾಷ್ಟ್ರದಲ್ಲಿ ಸುರಿಯುತ್ತಿರುವ ಭಾರೀ ಮಳೆಯಿಂದ ಹಿಡಕಲ್ ಜಲಾಶಯ ಭರ್ತಿಯಾಗುವ ಹಂತಕ್ಕೆ ತಲುಪಿದ್ದು, ಇಂದು ಡ್ಯಾಂನ ಎಂಟು ಗೇಟ್ ಓಪನ್ ಮಾಡಿ ಸುಮಾರು 25 ಸಾವಿರ‌ ಕ್ಯೂಸೆಕ್ ನೀರು ಬಿಡುಗಡೆ ಮಾಡ್ಲಾಯಿತು.

ಹಿಡಕಲ್​ ಜಲಾಶಯದ ಎಂಟು ಗೇಟ್​ಗಳನ್ನು ಓಪನ್​ ಮಾಡಿರುವುದು..

ಜಿಲ್ಲೆಯ ಹುಕ್ಕೇರಿ ತಾಲೂಕಿನ ಹಿಡಕಲ್ ಬಳಿ ಘಟಪ್ರಭಾ ನದಿಗೆ ಅಡ್ಡಲಾಗಿ ಜಲಾಶಯ ನಿರ್ಮಿಸಲಾಗಿದ್ದು, ಭಾರೀ ಮಳೆಯಿಂದ ಒಳಹರಿವು ಹೆಚ್ಚಾಗಿದೆ. ಜಲಾಶಯ ಅವಧಿಗೆ ಮುಂಚೆಯೇ ಭರ್ತಿಯಾಗುವ ಮುಸ್ಸೂಚನೆ ಹಿನ್ನೆಲೆಯಲ್ಲಿ ಜಲಾಶಯದ ಎಂಟು ಗೇಟ್​ಗಳನ್ನು ಓಪನ್​ ಮಾಡಿ 25 ಸಾವಿರ ಕ್ಯೂಸೆಕ್​ ನೀರನ್ನು ಬಿಡುಗಡೆ ಮಾಡಲಾಗಿದೆ.

ಹಿಡಕಲ್ ಜಲಾಶಯದ ಒಳಹರಿವು 47 ಸಾವಿರ ಕ್ಯೂಸೆಕ್ ಇದ್ದು, ಈ ಹಿನ್ನೆಲೆಯಲ್ಲಿ ಇಂದು ಡ್ಯಾಂನಿಂದ ನೀರು ಹೊರಕ್ಕೆ ಬಿಡಲಾಯಿತು. 51 ಟಿಎಂಸಿ‌ ನೀರು ಸಂಗ್ರಹ ಸಾಮರ್ಥ್ಯ ಹೊಂದಿರುವ ಹಿಡಕಲ್ ಡ್ಯಾಂಗೆ 45 ಟಿಎಂಸಿ ನೀರು ಶೇಖರಣೆಯಾಗಿದೆ.

ABOUT THE AUTHOR

...view details