ಬೆಳಗಾವಿ: ಶತಮಾನದ ಮಹಾಮಳೆ ತನ್ನ ರೌದ್ರ ನರ್ತನ ಮುಂದುವರೆಸಿದ್ದು, ಜಿಲ್ಲೆಯ ಜನರ ಜನಜೀವನ ಅಸ್ತವ್ಯಸ್ತಗೊಂಡಿದೆ. ರೈಲು ಹಳಿಯಲ್ಲಿ ನೀರು ನಿಂತು ಸಂಚಾರ ಸ್ಥಗಿತಗೊಂಡಿದೆ.
ನಗರದ ಹೊರ ವಲಯದ ಟೀಳಕವಾಡಿ ಬಳಿ ರೈಲ್ವೇ ಹಳಿ ಮೇಲೆ ರಭಸದಿಂದ ನೀರು ಹರಿಯುತ್ತಿದೆ. ಪರಿಣಾಮ ಗೋವಾ ಮಹಾರಾಷ್ಟ್ರ ಸಂಪರ್ಕ ಕಲ್ಪಿಸುವ ರೈಲು ಮುಂದೆ ಚಲಿಸಲಾಗದೆ ಐದು ಗಂಟೆಗೆಳಿಂದ ಅರ್ಧ ದಾರಿಯಲ್ಲಿ ನಿಂತುಕೊಂಡಿದೆ. ರೈಲಿನಲ್ಲಿ ನೂರಾರು ಪ್ರಯಾಣಿಕರಿದ್ದು, ಸುತ್ತ ನೀರು ತುಂಬಿರುವುದರಿಂದ ಕೆಳಗೆ ಇಳಿಯಲು ಆಗದೆ ಪರದಾಡುವಂತಾಗಿದೆ.