ಕರ್ನಾಟಕ

karnataka

ಕುಂದಾ ನಗರಿ‌ಯಲ್ಲಿ ಧಾರಾಕಾರ ಸುರಿದ ಮಳೆ: ಜನರಲ್ಲಿ ಆತಂಕ

By

Published : Mar 19, 2020, 3:58 AM IST

ಬೆಳಗಾವಿಯಲ್ಲಿ ಸುರಿದ ಭಾರೀ ಮಳೆಗೆ ಜನರು ಆತಂಕಗೊಂಡಿದ್ದಾರೆ.

rain
ಮಳೆ

ಬೆಳಗಾವಿ: ಕಳೆದ ಹಲವು ದಿನಗಳಿಂದ ಬಿಸಿಲಿನ ತಾಪಕ್ಕೆ ಬಸವಳಿದಿದ್ದ ಕುಂದಾನಗರಿ‌ ಜನರಿಗೆ‌ ವರುಣ ಇದೀಗ ತಂಪೆರೆದಿದ್ದಾನೆ.

ನಗರದಲ್ಲಿ ಹಲವೆಡೆ ಹಾಗೂ ಖಾನಾಪೂರ, ಜಾಂಬೋಟಿ ಸೇರಿದಂತೆ ಜಿಲ್ಲೆಯ ಸುತ್ತಮುತ್ತ ಸಂಜೆ ಅಬ್ಬರಿಸಿದ ಮಳೆಗೆ ಜಿಲ್ಲೆಯ ಜನತೆ ಬೆಚ್ಚಿ ಬಿದ್ದಿದ್ದಾರೆ. ಭಾರೀ ಮಳೆಗೆ ನಗರದಲ್ಲಿ ತೆಂಗಿನ ಮರಗಳು, ಮನೆಗಳು ಉರುಳಿ ಬಿದ್ದವೆ. ಆದರೆ ಯಾವ ಪ್ರಾಣಹಾನಿ‌ ಆಗಿಲ್ಲ. ಸದ್ಯ ಕೊರೊನಾ‌ ಭೀತಿಯಲ್ಲಿರುವ ಜಿಲ್ಲೆಯ ಜನತೆಗೆ ಈ ಮಳೆ ಆತಂಕಕ್ಕೆ ಕಾರಣವಾಗಿದೆ.

ಕುಂದಾ ನಗರಿ‌ಯಲ್ಲಿ ಮಳೆ.

ಜಿಲ್ಲೆಯಲ್ಲಿ ಸುರಿದ ಧಾರಾಕಾರ ಮಳೆಗೆ ಬೆಳಗಾವಿ ತಾಲೂಕಿನ ಯಳ್ಳೂರ ಗ್ರಾಮದ ಮಾರುತಿ ಗಲ್ಲಿಯ ನಿವಾಸಿ ವಾಮನ್ ಕುಗಜಿ ಎಂಬುವವರ ಮನೆಯ ಮೇಲೆ ತೆಂಗಿನ ಮರ ಬಿದ್ದ ಪರಿಣಾಮ ಸಂಪೂರ್ಣವಾಗಿ ಜಖಂಗೊಂಡಿದೆ. ಒಂದು ಗಂಟೆಗಳ ಕಾಲ ಸುರಿದ ಭಾರೀ ಮಳೆಗೆ ರೈತರು ಬೆಳೆದ ಕಲ್ಲಂಗಡಿ ಸೇರಿದಂತೆ ತರಕಾರಿ ಬೆಳೆಗಳು ಕೂಡ ನಾಶವಾಗಿವೆ.

ಇನ್ನು ಸಿಡಿಲು ಬಡಿದು ಎರಡು ಎಮ್ಮೆಗಳು ಸಾವನ್ನಪ್ಪಿರುವ ಘಟನೆಯೂ ಇಲ್ಲಿನ ಬಾಕ್ಸೇಟ್ ರೋಡ್ ಹಿಂಡಲಗಾ ವ್ಯಾಪ್ತಿಯಲ್ಲಿ ನಡೆದಿದ್ದು, ಪ್ರವೀಣ್ ಭಾತಖಂಡೆ ಎಂಬುವವರಿಗೆ ಸೇರಿದ ಎರಡು ಎಮ್ಮೆಗಳು ಸಿಡಿಲು ಬಡಿದು ಸಾವನ್ನಪ್ಪಿವೆ. ಇದರ ಕುರಿತು ಕಾಕತಿ ಪೊಲೀಸ್ ಠಾಣೆಯಲ್ಲಿ ದೂರು ದಾಖಲಾಗಿದೆ.

ABOUT THE AUTHOR

...view details