ಕರ್ನಾಟಕ

karnataka

ETV Bharat / state

ಒಂದೇ ಕೋಣೆಯಲ್ಲಿ ಮೂವರು ಕ್ವಾರಂಟೈನ್​... ಬೆಳಗಾವಿ ಜಿಲ್ಲಾಡಳಿತ ಯಡವಟ್ಟು

ಕೊರೊನಾ ಹಾಟ್​ಸ್ಪಾಟ್​ ಬೆಳಗಾವಿ ಜಿಲ್ಲೆಯಲ್ಲಿ ಆರೋಗ್ಯಾಧಿಕಾರಿಗಳ ಯಡವಟ್ಟಿನಿಂದ ಸೋಂಕಿತರ ಸಂಖ್ಯೆ ಹೆಚ್ಚಾಗುವ ಸಾಧ್ಯತೆ ಇದೆ.

sdd
ಕೊರೊನಾ ಹಾಟ್​ಸ್ಪಾಟ್​ ಬೆಳಗಾವಿಯಲ್ಲಿ ಆರೋಗ್ಯಾಧಿಕಾರಿಗಳ ಎಡವಟ್ಟು

By

Published : Apr 19, 2020, 11:53 AM IST

ಬೆಳಗಾವಿ/ಚಿಕ್ಕೋಡಿ‌: ಕೊರೊನಾ ಸೋಂಕಿತನ ಜೊತೆ ಪ್ರಾಥಮಿಕ‌ ಸಂಪರ್ಕ ಹೊಂದಿದ್ದ ಜನರನ್ನು ಕ್ವಾರಂಟೈನ್ ಮಾಡಲು ಒಂದೇ ವಾಹನದಲ್ಲಿ‌ ಕರೆ ತಂದು ಜಿಲ್ಲಾಡಳಿತ ಯಡವಟ್ಟು ಮಾಡಿದೆ.

ಕೊರೊನಾ ಹಾಟ್​ಸ್ಪಾಟ್​ ಬೆಳಗಾವಿಯಲ್ಲಿ ಆರೋಗ್ಯಾಧಿಕಾರಿಗಳ ಎಡವಟ್ಟು

ರೋಗಿ ನಂ.293 ಜೊತೆ ಪ್ರಾಥಮಿಕ ಸಂಪರ್ಕ ಹೊಂದಿದ್ದ ಜನರ ಕ್ವಾರಂಟೈನ್ ಮಾಡುವ ವೇಳೆ ಈ ಯಡವಟ್ಟು ಮಾಡಲಾಗಿದೆ. ಜಿಲ್ಲೆಯ ಹುಕ್ಕೇರಿ ತಾಲೂಕಿನ ‌ಸಂಕೇಶ್ವರ ಪಟ್ಟಣದ ಲಾಡ್ಜ್​​ನಲ್ಲಿ ಇವರನ್ನು ಕ್ವಾರಂಟೈನ್​ ಮಾಡಬೇಕಾಗಿತ್ತು.

ಒಂದೇ ಕೋಣೆಯಲ್ಲಿ ಮೂವರನ್ನ ಜಿಲ್ಲಾಡಳಿತ ಕ್ವಾರಂಟೈನ್‌ಗೆ ಒಳಪಡಿಸಿದೆ. ಈ ಯಡವಟ್ಟಿನಿಂದ ಕೊರೊನಾ ಇಲ್ಲದಿರುವವರಿಗೆ ಸೋಂಕು ತಗುಲುವ ಸಾಧ್ಯತೆ ಇದೆ. ತಾಲೂಕು ಆರೋಗ್ಯ ಅಧಿಕಾರಿಯ ನಿರ್ಲಕ್ಷ್ಯ ಇದಕ್ಕೆ ಕಾರಣ ಎಂಬ ಆರೋಪ ಕೇಳಿ ಬರುತ್ತಿದೆ.

ABOUT THE AUTHOR

...view details