ಚಿಕ್ಕೋಡಿ: ಕುಮಾರಸ್ವಾಮಿ ಸರ್ಕಾರ ಕ್ಷೇತ್ರದ ಹಾಗೂ ವೈಯಕ್ತಿಕ ಕಾರ್ಯಗಳಿಗೆ ಸ್ಪಂದಿಸುತ್ತಿರಲಿಲ್ಲ. ಇದರಿಂದ ಬೇಸತ್ತು ಈ ನಿರ್ಣಯಕ್ಕೆ ಬರಬೇಕಾಯಿತು ಎಂದು ಕಾಗವಾಡ ಅನರ್ಹ ಶಾಸಕ ಶ್ರೀಮಂತ ಪಾಟೀಲ ಹೇಳಿದರು.
ಬೆಳಗಾವಿ ಜಿಲ್ಲೆಯ ಕಾಗವಾಡ ತಾಲೂಕಿನ ಕೆಂಪವಾಡ ಸಕ್ಕರೆ ಕಾರ್ಖಾನೆಯ ವಿಶ್ರಾಂತಿ ಗೃಹದಲ್ಲಿ ಆಯೋಜಿಸಿದ್ದ ಕಾರ್ಯಕರ್ತರ ಸಭೆಯಲ್ಲಿ ಮಾತನಾಡಿ, ಅನರ್ಹ ಶಾಸಕರು 500 ಕೋಟಿ ರೂ. ವ್ಯಾಪಾರ, 1000 ಕೋಟಿ ವ್ಯಾಪಾರ ಅಂತಿದ್ದಾರೆ, ಆದ್ರೆ ಇಲ್ಲಿ ಯಾವುದೇ ಹಣದ ವ್ಯವಹಾರ ಆಗಿಲ್ಲ, ತಾನಂತೂ ಒಂದೇ ಒಂದು ರೂಪಾಯಿ ಕೂಡ ಆಸೆ ಪಟ್ಟವನಲ್ಲ ಎಂದರು.