ಅಥಣಿ:ಕೃಷ್ಣಾ ನದಿ ಪ್ರವಾಹಕ್ಕೆ ಸಿಲುಕಿರುವ ನೆರೆ ಸಂತ್ರಸ್ತರ ಭೇಟಿ ಮಾಡಿ ಅಹವಾಲು ಸ್ವೀಕಾರಕ್ಕೆ ಅಥಣಿ ತಾಲೂಕಿನ ಗ್ರಾಮಗಳಿಗೆ ಇಂದು ಮಾಜಿ ಮುಖ್ಯಮಂತ್ರಿ ಹೆಚ್ ಡಿ ಕುಮಾರಸ್ವಾಮಿ ಭೇಟಿ ನೀಡುವುದಾಗಿ ಭರವಸೆ ನೀಡಿದ್ರು. ಆದರೆ, ಆ ಗ್ರಾಮಗಳಿಗೆ ಭೇಟಿ ನೀಡದೆ ಇರುವುದು ಅಲ್ಲಿನ ಜನರ ಆಕ್ರೋಶಕ್ಕೆ ಕಾರಣವಾಗಿದೆ.
ಬರ್ತೀನೆಂದು ಬರಲಿಲ್ಲ.. ಅಥಣಿಗೆ ಭೇಟಿ ನೀಡದ ಹೆಚ್ಡಿಕೆ.. ಮಾಜಿ ಸಿಎಂ ವಿರುದ್ಧ ಸಂತ್ರಸ್ತರ ಆಕ್ರೋಶ - ಕೃಷ್ಣಾ ನದಿ ಪ್ರವಾಹಕ್ಕೆ ಸಿಲುಕಿರುವ ನೆರೆ ಸಂತ್ರಸ್ತರು
ನೆರೆ ಸಂತ್ರಸ್ತರ ಭೇಟಿ ಮಾಡಿ ಅಹವಾಲು ಸ್ವೀಕಾರಕ್ಕೆ ಅಥಣಿ ತಾಲೂಕಿನ ಗ್ರಾಮಗಳಿಗೆ ಇಂದು ಮಾಜಿ ಮುಖ್ಯಮಂತ್ರಿ ಹೆಚ್.ಡಿ ಕುಮಾರಸ್ವಾಮಿ ಭೇಟಿ ನೀಡುವುದಾಗಿ ಭರವಸೆ ನೀಡಿದ್ರು. ಆದರೆ, ಗ್ರಾಮಗಳಿಗೆ ಭೇಟಿ ನೀಡದೆ ಇರುವುದು ಅಲ್ಲಿನ ಜನರ ಆಕ್ರೋಶಕ್ಕೆ ಕಾರಣವಾಗಿದೆ.
![ಬರ್ತೀನೆಂದು ಬರಲಿಲ್ಲ.. ಅಥಣಿಗೆ ಭೇಟಿ ನೀಡದ ಹೆಚ್ಡಿಕೆ.. ಮಾಜಿ ಸಿಎಂ ವಿರುದ್ಧ ಸಂತ್ರಸ್ತರ ಆಕ್ರೋಶ](https://etvbharatimages.akamaized.net/etvbharat/prod-images/768-512-4884672-thumbnail-3x2-atn.jpg)
ಅಥಣಿಗೆ ಭೇಟಿ ನೀಡದ ಹೆಚ್ಡಿಕೆ.. ಗ್ರಾಮಸ್ಥರ ಆಕ್ರೋಶ
ಅಥಣಿಗೆ ಭೇಟಿ ನೀಡದ ಹೆಚ್ಡಿಕೆ.. ಗ್ರಾಮಸ್ಥರ ಆಕ್ರೋಶ
ಹುಲಗಬಾಳಿ ಗ್ರಾಮದಲ್ಲಿ ಜನರು ಮಧ್ಯಾಹ್ನದಿಂದ ಕಾಯುತ್ತಾ ಕುಳಿತ್ತಿದ್ದರು. ಸಂಜೆ ವೇಳೆಯಾದರು ಮಾಜಿ ಮುಖ್ಯಮಂತ್ರಿ ಹೆಚ್ ಡಿ ಕುಮಾರಸ್ವಾಮಿ ಆಗಮಿಸದಿರುವುದನ್ನು ತಿಳಿದು ಸಂಜೆ 5 ಗಂಟೆ ವಾಪಾಸ್ಸಾಗಿದ್ದಾರೆ.
ಮನವಿ ಪತ್ರ ಹಿಡಿದುಕೊಂಡು ಕಾಯುತ್ತಾ ನಿಂತ ಜನತೆ, ಅಸಮಾಧಾನ ವ್ಯಕ್ತಪಡಿಸಿದರು. ಕೆಲವರು ದೂರದ ಗ್ರಾಮಳಿಂದ ಕುಮಾರಸ್ವಾಮಿ ಅವರ ಬಳಿ ನೆರೆ ಅವಾಂತರದ ಕಷ್ಟ ಹೇಳಿಕೊಳ್ಳಲು ಬಂದಿದ್ದರು. ಆದರೆ, ಹೆಚ್ಡಿಕೆ ಬಾರದ ಹಿನ್ನೆಲೆ ದಾರಿ ಕಾದು ಕಾದು ವಾಪಸು ಹೋಗುತ್ತಿದ್ದಾರೆ.