ಕರ್ನಾಟಕ

karnataka

ETV Bharat / state

ನಿಮ್ಮ ಮನೆಗೆ ಕಲ್ಲು ಹೊಡೆಯೋಕೆ ಬಂದ್ರೆ ರಿವಾಲ್ವರ್ ಇಟ್ಕೊಂಡು ಪೂಜೆ ಮಾಡ್ತೀರಾ?: ಸುರೇಶ ಅಂಗಡಿ - ಪೌರತ್ವ ಕಾಯ್ದೆ ವಿರುದ್ಧ ಮಂಗಳೂರಿನಲ್ಲಿ ನಡೆದ ಪ್ರತಿಭಟನೆ

ಪೌರತ್ವ ಕಾಯ್ದೆ ವಿಚಾರವಾಗಿ ಎಲ್ಲೆಡೆ ಪ್ರತಿಭಟನೆ ನಡೆಯುತ್ತಿದ್ದು, ಸಾರ್ವಜನಿಕ ಆಸ್ತಿಪಾಸ್ತಿಗೆ ಹಾನಿ ಉಂಟುಮಾಡಿದರೆ ಅಂತವರ ವಿರುದ್ಧ ಆಯಾ ರಾಜ್ಯ ಸರ್ಕಾರಗಳು ಕ್ರಮ ಕೈಗೊಳ್ಳಬೇಕು ಎಂದು ಕೇಂದ್ರ ರೈಲ್ವೆ ಇಲಾಖೆ ರಾಜ್ಯ ಸಚಿವ ಸುರೇಶ್​ ಅಂಗಡಿ ಹೇಳಿದ್ದಾರೆ.

Suresh Angadi
ಕೇಂದ್ರ ಸಚಿವ ಸುರೇಶ ಅಂಗಡಿ ಹೇಳಿಕೆ

By

Published : Dec 20, 2019, 5:17 PM IST

ಬೆಳಗಾವಿ: ಪೌರತ್ವ ಕಾಯ್ದೆ ಜಾರಿ ವಿರೋಧಿಸಿ ಕಾಂಗ್ರೆಸ್ ಹಾಗು ಎಡಪಕ್ಷಗಳು ದೇಶಾದ್ಯಂತ ನಡೆಯುತ್ತಿರುವ ಪ್ರತಿಭಟನೆಗೆ ‌ಪ್ರಚೋದನೆ ನೀಡುತ್ತಿವೆ. ಸಾರ್ವಜನಿಕರ ‌ಆಸ್ತಿ ಹಾನಿ ಮಾಡಿದರೆ ಪೊಲೀಸರು ಸುಮ್ಮನಿರಲು ಸಾಧ್ಯವಿಲ್ಲ. ನಿಮ್ಮ ಮನೆಗೆ ಯಾರಾದ್ರು ಕಲ್ಲು ಹೊಡೆಯೋಕೆ ಬಂದ್ರೆ ನೀವು ರಿವಾಲ್ವರ್ ಇಟ್ಕೊಂಡು ಪೂಜೆ ಮಾಡ್ತೀರಾ? ಎಂದು ಕೇಂದ್ರ ರೈಲ್ವೆ ‌ಇಲಾಖೆ‌ ರಾಜ್ಯ ಸಚಿವ ಸುರೇಶ ಅಂಗಡಿ ಗರಂ ಆಗಿ ಪ್ರತಿಕ್ರಿಯಿಸಿದ್ರು.

ಕೇಂದ್ರ ಸಚಿವ ಸುರೇಶ ಅಂಗಡಿ ಹೇಳಿಕೆ

ಬೆಳಗಾವಿಯಲ್ಲಿ ಸುದ್ದಿಗೋಷ್ಠಿ ನಡೆಸಿ ಮಾತನಾಡಿದ ಅವರು, ಪೌರತ್ವ ಕಾಯ್ದೆ ವಿರುದ್ಧ ಮಂಗಳೂರಿನಲ್ಲಿ ನಡೆದ ಪ್ರತಿಭಟನೆ ವೇಳೆ ಇಬ್ಬರ ಮೇಲೆ ಗೋಲಿಬಾರ್ ಆಗಿದೆ. ಇಬ್ಬರ ಸಾವಿಗೆ ಪ್ರತಿಪಕ್ಷ ನಾಯಕರೇ ಕಾರಣ ಎಂದು‌ ಆರೋಪಿಸಿದರು. ಪೌರತ್ವ ಕಾಯ್ದೆ ಜಾರಿಯಿಂದ ದೇಶದ ನಿವಾಸಿಗಳಿಗೆ ಯಾವುದೇ ಸಮಸ್ಯೆಯಿಲ್ಲ. ಪ್ರಚೋದನೆಗೆ ಒಳಗಾಗಿ ಸರ್ಕಾರದ ಆಸ್ತಿಪಾಸ್ತಿ ಹಾನಿ ಮಾಡುವ ಕೆಲಸಕ್ಕೆ ಯಾರೂ ಮುಂದಾಗಬಾರದು. ಹಾನಿ ಮಾಡಿದರೆ ಆಯಾ ರಾಜ್ಯ ಸರ್ಕಾರ ಕಠಿಣ ಕ್ರಮ ತೆಗೆದುಕೊಳ್ಳಬೇಕು ಎಂದರು.

ABOUT THE AUTHOR

...view details