ಚಿಕ್ಕೋಡಿ (ಬೆಳಗಾವಿ) : ಲಾಕ್‌ಡೌನ್ ಪರಿಣಾಮ ಸಾರ್ವಜನಿಕರ ಮೇಲೆ ಅಷ್ಟೇ ಅಲ್ಲದೆ ಪ್ರಾಣಿಗಳಿಗೂ ತಟ್ಟಿದೆ. ಮಂಗಗಳಿಗೆ ಪ್ರತಿ ನಿತ್ಯದ ಆಹಾರ ಸಿಗದೆ ಪರದಾಡುತ್ತಿದ್ದು, ಅವುಗಳಿಗೆ ವ್ಯಕ್ತಿಯೊಬ್ಬರು ಪ್ರತಿದಿನ ಆಹಾರ, ನೀರು ನೀಡಿ ಮಾನವೀಯತೆ ಮೆರೆಯುತ್ತಿದ್ದಾರೆ.
ಮಂಗಗಳಿಗೆ ಪ್ರತಿನಿತ್ಯ ಆಹಾರ ನೀಡಿ ಮಾನವೀಯತೆ ಮೆರೆದ ಚಿತ್ರ ಕಲಾವಿದ ಹನುಮಂತ
ಹನುಮಂತ ಅವರ ಈ ಕೆಲಸಕ್ಕೆ ಗ್ರಾಮಸ್ಥರ ಕೂಡ ಮೆಚ್ಚುಗೆ ವ್ಯಕ್ತಪಡಿಸಿದ್ದು, ತಮ್ಮ ಕೈಲಾದ ಆಹಾರ ನೀಡಿ ಸಹಾಯ ಮಾಡುತ್ತಿದ್ದಾರೆ.