ಕರ್ನಾಟಕ

karnataka

ETV Bharat / state

ಅಪಾಯಕ್ಕೆ ಆಹ್ವಾನ ನೀಡುತ್ತಿದೆ ಹಲ್ಯಾಳ ದರೂರ ಸೇತುವೆ

ಕೃಷ್ಣಾ ನದಿ ಪ್ರವಾಹದಿಂದಾಗಿ ಹಲ್ಯಾಳ ದರೂರ ಸೇತುವೆ ತೆಡೆಗೋಡೆ ಮುರಿದಿದ್ದು, ಅಪಾಯದ ಮುನ್ಸೂಚನೆ ನೀಡುತ್ತಿದೆ. ಭಾರಿ ಗಾತ್ರದ ವಾಹನ ಸೇರಿದಂತೆ ಚಿಕ್ಕ ಮಕ್ಕಳು ಹಾಗೂ ವಯೋವೃದ್ಧರು ಸಂಜೆ ವೇಳೆ ವಾಯು ವಿಹಾರ ಮಾಡುತ್ತಾರೆ. ಸ್ವಲ್ಪ ಆಯ ತಪ್ಪಿದರು ನದಿ ಪಾಲಾಗುತ್ತಾರೆ.

ಹಲ್ಯಾಳ ದರೂರ ಸೇತುವೆ

By

Published : Sep 29, 2019, 9:03 PM IST

ಅಥಣಿ:ಮಹಾರಾಷ್ಟ್ರದಲ್ಲಿ ಸುರಿದ ಭಾರಿ ಮಳೆಯಿಂದಾಗಿ ಉಂಟಾದ ಪ್ರವಾಹಕ್ಕೆ ತಾಲೂಕಿನ ಹಲ್ಯಾಳದಲ್ಲಿ ಕೃಷ್ಣಾ ನದಿಗೆ ಅಡ್ಡಲಾಗಿ ಕಟ್ಟಲಾಗಿರುವ ದರೂರ ಸೇತುವೆಯ ತಡೆಗೋಡೆ(ಗ್ರಿಲ್​) ಮುರಿದಿದ್ದು, ಅಪಾಯಕ್ಕೆ ಆಹ್ವಾನ ನೀಡುತ್ತಿದೆ.

ಕೃಷ್ಣಾ ನದಿ ಪ್ರವಾಹದಿಂದಾಗಿ ಹಲ್ಯಾಳ ದರೂರ ಸೇತುವೆ ತೆಡೆಗೋಡೆ ಮುರಿದಿದ್ದು ಅಪಾಯದ ಮುನ್ಸೂಚನೆ ನೀಡುತ್ತಿದೆ. ಭಾರಿ ಗಾತ್ರದ ವಾಹನ ಸೇರಿದಂತೆ ಚಿಕ್ಕ ಮಕ್ಕಳು ಹಾಗೂ ವಯೋವೃದ್ಧರು ಸಂಜೆ ವೇಳೆ ವಾಯು ವಿಹಾರ ಮಾಡುತ್ತಾರೆ. ಸ್ವಲ್ಪ ಆಯ ತಪ್ಪಿದರು ನದಿ ಪಾಲಾಗುತ್ತಾರೆ. ನದಿ ತುಂಬಿ ಹರಿಯುತ್ತಿರುವ ಈ ಸಂದರ್ಭದಲ್ಲಿ ರಕ್ಷಣಾತ್ಮಕವಾಗಿ ಎರಡು ಬದಿ ತಡೆಗೋಡೆ (ಗ್ರಿಲ್​​ಗಳನ್ನು) ಅಳವಡಿಸುವುದು ಅತ್ಯವಶ್ಯಕವಾಗಿದೆ.

ಅಪಾಯಕ್ಕೆ ಆಹ್ವಾನ ನೀಡುತ್ತಿದೆ ಹಲ್ಯಾಳ ದರೂರ ಸೇತುವೆ

ಕೃಷ್ಣಾ ನದಿ ಪ್ರವಾಹ ಕಡಿಮೆಯಾಗಿ ಸರಿ ಸುಮಾರು ಎರಡು ತಿಂಗಳು ಗತಿಸಿದರೂ ಯಾವೊಬ್ಬ ಅಧಿಕಾರಿ ಇತ್ತ ಗಮನ ನೀಡುತ್ತಿಲ್ಲ ಮತ್ತು ಬೇಜವಾಬ್ದಾರಿ ತೋರುತ್ತಿದ್ದಾರೆ. ಇನ್ನಾದರೂ ತಾಲೂಕ ಆಡಳಿತ ಎಚ್ಚೆತ್ತುಕೊಂಡು ಸೇತುವೆ ರಿಪೇರಿ ಮಾಡದಿದ್ದರೆ ಉಗ್ರವಾದ ಹೋರಾಟ ಮಾಡುತ್ತೇವೆ ಎಂದು ಗ್ರಾಮಸ್ಥರು ಹಾಗೂ ಭಾರತಿ ಕಿಸಾನ್ ಘಟಕದ ತಾಲೂಕು ಕಾರ್ಯದರ್ಶಿ ಭರಮು ಕಲ್ಲಪ್ಪ ನಾಯಕ್ ಆಗ್ರಹಿಸಿದರು.

ABOUT THE AUTHOR

...view details