ಕರ್ನಾಟಕ

karnataka

ETV Bharat / state

ಮಹದಾಯಿ ಯೋಜನೆಗಿಂತ ನಮಗೆ ಪ್ರಚಾರ ಮುಖ್ಯ ಎಂದಿದ್ದರು ಶೆಟ್ಟರ್: ಹೆಚ್‌ಡಿಕೆ

ಮಹದಾಯಿ ಯೋಜನೆ ಕುರಿತು ತ್ರಿಬಲ್​ ಇಂಜಿನ್​ ಸರ್ಕಾರವನ್ನು ಹೆಚ್​.ಡಿ. ಕುಮಾರಸ್ವಾಮಿ ಪ್ರಶ್ನಿಸಿದ್ದಾರೆ.

H D Kumaraswamy
ಹೆಚ್​.ಡಿ. ಕುಮಾರಸ್ವಾಮಿ

By

Published : Feb 10, 2023, 5:59 PM IST

ಮಹದಾಯಿ ಯೋಜನೆ ಕುರಿತು ತ್ರಿಬಲ್​ ಇಂಜಿನ್​ ಸರ್ಕಾರವನ್ನು ಪ್ರಶ್ನಿಸಿದ ಹೆಚ್.ಡಿ.ಕುಮಾರಸ್ವಾಮಿ

ಬೆಳಗಾವಿ: ಮಹದಾಯಿ ವಿಚಾರದಲ್ಲಿ ಕರ್ನಾಟಕ ಸರ್ಕಾರ ಮಹಾ ಸಾಧನೆ ಮಾಡಿರುವ ರೀತಿಯಲ್ಲಿ ಸಿಹಿ ಹಂಚಿದ್ದರು. ಹಾಗಾದರೆ ಇನ್ನೂ ಯಾಕೆ ಕೆಲಸ ಪ್ರಾರಂಭವಾಗಿಲ್ಲ. ತ್ರಿಬಲ್ ಇಂಜಿನ್ ಸರ್ಕಾರಗಳಿದ್ದರೂ ಇನ್ನೂ ಸಮಸ್ಯೆಯನ್ನು ಏಕೆ ಕೇಂದ್ರ ಬಗೆಹರಿಸಿಲ್ಲ ಎಂದು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರಿಗೆ ಮಾಜಿ ಸಿಎಂ ಕುಮಾರಸ್ವಾಮಿ ಪ್ರಶ್ನೆ ಮಾಡಿದ್ದಾರೆ.

ಬೆಳಗಾವಿ ಜಿಲ್ಲೆಯ ಖಾನಾಪುರ ವಿಧಾನಸಭಾ ಕ್ಷೇತ್ರದಲ್ಲಿ ಪಂಚರತ್ನ ಯಾತ್ರೆ ಪ್ರಾರಂಭಕ್ಕೂ ಮೊದಲು ಮಾಧ್ಯಮಗಳ ಜೊತೆ ಮಾತನಾಡಿ, ಕಳೆದ ಹದಿಮೂರು ವರ್ಷಗಳಿಂದ ಮಹದಾಯಿ ಯೋಜನೆ ನೆನೆಗುದಿಗೆ ಬಿದ್ದಿತ್ತು. ಆದರೆ ಕಳೆದ ನಾಲ್ಕು ವರ್ಷದಿಂದ ತ್ರಿಬಲ್ ಇಂಜಿನ್ ಸರ್ಕಾರ ಇರುವಾಗ ಈ ಯೋಜನೆ ವಿಳಂಬ ಮಾಡುತ್ತಿದ್ದಾರೆ. ಗೋವಾ ಸರ್ಕಾರ ಪದೇ ಪದೇ ತಕರಾರು ಮಾಡಿದ್ದರೆ ಪ್ರಧಾನಿ ನರೇಂದ್ರ ಮೋದಿ ಅವರು ಸೌಹಾರ್ದಯುತ ಮಾತುಕತೆ ನಡೆಸಿ ಗೊಂದಲಕ್ಕೆ ತೆರೆ ಎಳೆದು ಏಕೆ ಸರಿಪಡಿಸುತ್ತಿಲ್ಲ ಎಂದು ಕೇಳಿದರು.

ಗೋವಾ ಮಾಜಿ ಸಿಎಂ ಮನೋಹರ್ ಪರಿಕ್ಕರ್ ದಿವಂಗತ ಅಟಲ್ ಬಿಹಾರಿ ವಾಜಪೇಯಿ ಅವರ ಕಾಲದಿಂದಲೂ ಯೋಜನೆಗೆ ವಿರೋಧ ವ್ಯಕ್ತಪಡಿಸಿದ್ದಾರೆ. ಅಲ್ಲಿಂದ ಇಲ್ಲಿವರೆಗೆ ಯೋಜನೆ ಅರ್ಧಕ್ಕೆ ನಿಂತಿದೆ. ನ್ಯಾಯಾಲಯದ ಆದೇಶ, ಟ್ರಿಬುನಲ್ ರಚನೆಯಿಂದ ತಡೆಯಲಾಗಿದೆ. ನಮಗೆ ಬರಬೇಕಾದ ನೀರನ್ನು ಬಳಸುವುದಕ್ಕೆ ಯಾಕೆ ಈ ಮೀನಮೇಷ ಎಂದು ಪ್ರಶ್ನಿಸಿದರು.

ಹೊರಟ್ಟಿ ಸತ್ಯ ಹೇಳಬೇಕು:ನಾನು ಮುಖ್ಯಮಂತ್ರಿ ಸ್ಥಾನದಲ್ಲಿದ್ದ ಸಂದರ್ಭದಲ್ಲಿ ಮಹದಾಯಿ ಯೋಜನೆಗೆ ಒಂದು ನೂರು ಕೋಟಿ ರೂಪಾಯಿ ಇಟ್ಟಿದ್ದೆ. ಪ್ರಾರಂಭಕ್ಕೆ ಕೆಲವು ಕಾನೂನಾತ್ಮಕ ತೊಡಕುಗಳನ್ನು ಸರಿಪಡಿಸಿಕೊಂಡು ಈ ಕಾರ್ಯ ಪ್ರಾರಂಭಿಸೋಣ ಎಂದಿದ್ದಕ್ಕೆ ಸಚಿವ ಸಂಪುಟದಲ್ಲಿ ಜಗದೀಶ್ ಶೆಟ್ಟರ್ ಅವರು ಕೆಲಸ ಆಗುತ್ತೋ ಬಿಡುತ್ತೋ ಗೊತ್ತಿಲ್ಲ, ನಮಗೆ ಪ್ರಚಾರ ಬೇಕು ಎಂದು ಹೇಳಿದ್ದರು. ಈಗ ಬಸವರಾಜ ಹೊರಟ್ಟಿ ಅವರು ಬಿಜೆಪಿ ಪಕ್ಷದಲ್ಲಿ ಇದ್ದಾರೆ, ಸತ್ಯವನ್ನು ಹೇಳಬೇಕು ಎಂದು ಆಗ್ರಹಿಸಿದರು.

ಇವರಿಗೆ ಮಹದಾಯಿ ವಿಚಾರದಲ್ಲೂ ಜನರಿಗೆ ಅನುಕೂಲವಾಗುವ ನಿಟ್ಟಿನಲ್ಲಿ ಕಾರ್ಯ ಮಾಡುವ ಬದ್ಧತೆ ಇದ್ದಿದ್ದರೆ ಮೂರು ರಾಜ್ಯದ ಮುಖ್ಯಮಂತ್ರಿಯನ್ನು ಕರೆಸಿ ಮಾತನಾಡಬೇಕಿತ್ತು. ರಾಷ್ಟ್ರೀಯ ಪಕ್ಷಗಳಿಗೆ ಜನಸಾಮಾನ್ಯರ ಕಾರ್ಯಕ್ಕಿಂತಲೂ ತಮ್ಮ ಪಕ್ಷದ ಹಿತದೃಷ್ಟಿ ಮುಖ್ಯ. ಈಗಾಗಲೇ ಟ್ರಿಬುನಲ್ ನೀರು ಹಂಚಿಕೆಯನ್ನು ಕಳೆದ ನಾಲ್ಕು ವರ್ಷದ ಹಿಂದೆ ಮಾಡಿದೆ. ಆ ನೀರು ಹಂಚಿಕೆಯಲ್ಲೂ ನಮಗೆ ಅನ್ಯಾಯವಾಗಿದೆ. ಯಾಕೆ ಇವರು ಇನ್ನೂ ಈ ನೀರನ್ನು ಬಳಸುತ್ತಿಲ್ಲ ಎಂದು ರಾಜ್ಯ ಸರ್ಕಾರಕ್ಕೆ ಪ್ರಶ್ನೆ ಸುರಿಮಳೆ ಸುರಿಸಿದಳು.

ಸಿಡಿ ಫ್ಯಾಕ್ಟರಿ ವಿಚಾರ ಮಾತನಾಡುವಷ್ಟು ನನಗೆ ಸಮಯವಿಲ್ಲ, ನನಗೆ ಸಿಡಿ ಕಾರ್ಖಾನೆ ಬಗ್ಗೆ ಮಾತಾಡುವ ಅವಶ್ಯಕತೆ ಇಲ್ಲ. ಸಿಡಿ ಮಾಡುವುದು ಇತ್ತೀಚಿಗೆ ಸರ್ವೇ ಸಾಮಾನ್ಯವಾಗಿದೆ. ಮೊಬೈಲ್ ಬಂದಾಗಿನಿಂದ ಸಿಡಿ ಕಾಮನ್ ಆಗಿದೆ‌. ಸಿಡಿ ಕೇಸ್ ಸಿಬಿಐಗೆ ನೀಡಿ ಏನ್ ಮಾಡುತ್ತಾರೆ. ಸಿಡಿ ಕೇಸ್ ಸಿಬಿಐಗೆ ವಹಿಸಿದರೆ ಏನೂ ಉಪಯೋಗ ಇಲ್ಲ, ಸಿಡಿ ಇಟ್ಟುಕೊಂಡು ಜನರ ಬಳಿ ಚುನಾವಣೆಯಲ್ಲಿ ಗೆಲ್ಲುವುದಕ್ಕೆ ಆಗುತ್ತಾ? ಎಂದರು.

ಇದನ್ನೂ ಓದಿ:ಪ್ರೀತಂ ಗೌಡ ವಿರುದ್ಧ ತೊಡೆ ತಟ್ಟಿದ ಹೆಚ್.ಡಿ.ರೇವಣ್ಣ ಹಾಸನದಿಂದ ಸ್ಪರ್ಧಿಸ್ತಾರಾ?

ABOUT THE AUTHOR

...view details