ಅಥಣಿ (ಬೆಳಗಾವಿ):ಸ್ವಸ್ಥ ಗ್ರಾಮಕ್ಕಾಗಿ ಹಾಗೂ ಗ್ರಾಮಸ್ಥರನ್ನು ವ್ಯಸನ ಮುಕ್ತರಾಗಿಸಲು ಕಲ್ಯಾಣ ಹಿರೇಮಠ ಗುಣದಾಳ ಡಾ.ವಿವೇಕಾನಂದ ದೇವರು ಸತ್ತಿ ಗ್ರಾಮದಲ್ಲಿ ಜೋಳಿಗೆ ಹಿಡಿದು ಪಾದಯಾತ್ರೆ ನಡೆಸಿದರು. ಅಥಣಿ ತಾಲೂಕಿನ ಸತ್ತಿ ಗ್ರಾಮದ ಬಾಲಕೃಷ್ಣ ಮಹಾರಾಜರ 25ನೇ ಪುಣ್ಯಾರಾಧನೆಯ ರಜತ ಮಹೋತ್ಸವ ಕಾರ್ಯಕ್ರಮ ನಿಮಿತ್ತ ಗ್ರಾಮದಲ್ಲಿ ಪ್ರವಚನ ಕಾರ್ಯಕ್ರಮಕ್ಕೆ ಆಗಮಿಸಿದ ಶ್ರೀಗಳು, ದುಶ್ಚಟಗಳಿಂದ ದೂರ ಇರುವಂತೆ ಗ್ರಾಮಸ್ಥರಿಗೆ ತಿಳುವಳಿಕೆ ನೀಡುತ್ತಿದ್ದಾರೆ. ಇದರ ಜತೆಗೆ, ಜೋಳಿಗೆ ಹಿಡಿದು ಗ್ರಾಮದ ಓಣಿಗಳಲ್ಲಿ ಸಾಗಿ ಪಾದಯಾತ್ರೆ ನಡೆಸಿದರು.
ಗ್ರಾಮಸ್ಥರು ವ್ಯಸನ ಮುಕ್ತರಾಗಲು ಜೋಳಿಗೆ ಹಿಡಿದ ಗುಣದಾಳ ಶ್ರೀ - ETv Bharat kannada news
ಬೆಳಗಾವಿ ಅಥಣಿ ತಾಲೂಕಿನ ಸತ್ತಿ ಗ್ರಾಮದಲ್ಲಿ ಕಲ್ಯಾಣ ಹಿರೇಮಠ ಗುಣದಾಳ ಡಾ.ವಿವೇಕಾನಂದ ದೇವರು, ದುಶ್ಚಟಗಳಿಂದ ದೂರ ಇರುವಂತೆ ಗ್ರಾಮಸ್ಥರಿಗೆ ತಿಳುವಳಿಕೆ ನೀಡಿ ಜೋಳಿಗೆ ಹಿಡಿದು ಗ್ರಾಮದ ಓಣಿಗಳಲ್ಲಿ ಪಾದಯಾತ್ರೆ ನಡೆಸಿದರು.
ಗ್ರಾಮಸ್ಥರು ವ್ಯಸನ ಮುಕ್ತರಾಗಲು ಜೋಳಿಗೆ ಹಿಡಿದ ಕಲ್ಯಾಣ ಹಿರೇಮಠ ಗುಣದಾಳ ಪರಮ ಪೂಜ್ಯ ಡಾ. ವಿವೇಕಾನಂದ ದೇವರು
ದುಶ್ಚಟಗಳ ವ್ಯಸನ ಹೊಂದಿರುವ ಗ್ರಾಮಸ್ಥರು, ತಂಬಾಕು, ಎಲೆ ಅಡಕೆ, ಸಿಗರೇಟು ಮುಂತಾದವುಗಳನ್ನು ಶ್ರೀಗಳ ಜೋಳಿಗೆಗೆ ಹಾಕಿ ಇನ್ನು ಮುಂದೆ ಇಂಥ ಚಟಗಳಿಂದ ದೂರವಿರುವುದಾಗಿ ಮಾತು ನೀಡಿದರು. ಶ್ರೀಗಳು ಮಾತನಾಡಿ, ದೇವರು ನೀಡಿರುವ ಶರೀರಕ್ಕೆ ನಮ್ಮಿಂದ ನಾವೇ ದ್ರೋಹ ಮಾಡಿಕೊಳ್ಳುವುದು ಪರಮ ದ್ರೋಹದ ಕೆಲಸ ಎಂದರು.
ಇದನ್ನೂ ಓದಿ :ಲೋಕಕಲ್ಯಾಣಕ್ಕಾಗಿ ಪಾದಯಾತ್ರೆ, ವೀರಶೈವ ಲಿಂಗಾಯತ ಪ್ರತ್ಯೇಕ ಧರ್ಮ ಅಲ್ಲ: ಶ್ರೀಶೈಲ ಜಗದ್ಗುರು
TAGGED:
ಅಥಣಿ