ಚಿಕ್ಕೋಡಿ (ಬೆಳಗಾವಿ): ಆಶ್ರಯ ಯೋಜನೆಯ ಮನೆಗಳು ದೊಡ್ಡವರ ಪಾಲಾಗುತ್ತಿವೆ. ನಮಗೆ ವಾಸಿಸಲು ಮನೆಗಳಿಲ್ಲ. ಗ್ರಾ.ಪಂ ಸದಸ್ಯರು ಹಣ ತೆಗೆದುಕೊಂಡು ಬೇರೆಯವರಿಗೆ ಮನೆ ನೀಡುತ್ತಿದ್ದಾರೆ. ನಮಗೆ ಮನೆ ನೀಡಿ ಎಂದು ಮಹಿಳೆಯರು ಸಚಿವ ಶ್ರೀಮಂತ ಪಾಟೀಲ್ ಮುಂದೆ ಅಳಲು ತೋಡಿಕೊಂಡಿದ್ದಾರೆ.
‘ನಮಗೊಂದು ಮನೆ ನೀಡಿ’.. ಸಚಿವರೆದುರು ಅಳಲು ತೋಡಿಕೊಂಡ ಮಹಿಳೆಯರು - chikkodi news
ಆಶ್ರಮ ಮನೆ ಹಂಚಿಕೆಯಲ್ಲಿ ವಿಳಂಬವಾಗಿರುವ ಹಿನ್ನೆಲೆಯಲ್ಲಿ ಮಹಿಳೆಯರು ಸಚಿವರೆದುರೇ ಪಂಚಾಯಿತಿ ಅಧಿಕಾರಿಗಳ ವಿರುದ್ಧ ದೂರು ನೀಡಿದ್ದಾರೆ. ಲಂಚಕ್ಕಾಗಿ ಮನೆಗಳನ್ನು ಬೇಕಾದವರಿಗೆ ನೀಡುತ್ತಿದ್ದಾರೆ ಎಂದು ಗಂಭೀರ ಆರೋಪ ಮಾಡಿದ್ದಾರೆ.
ಸಚಿವರೆದುರೇ ಅಳಲು ತೋಡಿಕೊಂಡ ಮಹಿಳೆಯರು
ಕಾಗವಾಡ ತಾಲೂಕಿನ ಶೇಡಬಾಳ ಗ್ರಾಮದ ಮಹಿಳೆಯರು ಆಶ್ರಯ ಯೋಜನೆಯ ಮನೆಗಳನ್ನು ಗ್ರಾಮ ಪಂಚಾಯಿತಿ ಸದಸ್ಯರು ಲಂಚ ಪಡೆದು ತಮಗೆ ಬೇಕಾದವರಿಗೆ ನೀಡುತ್ತಿದ್ದಾರೆ ಎಂದು ಆರೋಪಿಸಿದರು. ಹೀಗಾಗಿ ನಮಗೆ ನೆಲೆಸಲು ಮನೆಗಳಿಲ್ಲ ಎಂದು ಅಸಮಾಧಾನ ಹೊರಹಾಕಿದರು.
ಈ ವೇಳೆ ಮಾತನಾಡಿದ ಸಚಿವ ಶ್ರೀಮಂತ ಪಾಟೀಲ್, ಕೊರೊನಾ ಹಾಗೂ ಪ್ರವಾಹ ಅಡಚಣೆಯಿಂದಾಗಿ ಮನೆಗಳ ವಿತರಣೆಯಲ್ಲಿ ವಿಳಂಬವಾಗಿದೆ. ಗ್ರಾಮದಲ್ಲಿ ಸಭೆ ಮಾಡಿ ಯಾರಿಗೆಲ್ಲ ಮನೆಗಳಿಲ್ಲವೋ ಅಂತವರಿಗೆ ವಿತರಿಸಲು ಕ್ರಮ ಕೈಗೊಳ್ಳಲಾಗುವುದು ಎಂದು ಭರವಸೆ ನೀಡಿದ್ದಾರೆ.