ಚಿಕ್ಕೋಡಿಯಲ್ಲಿ ಬಸವಜ್ಯೋತಿ ಫೌಂಡೇಷನ್ನಿಂದ ದಿನಸಿ ಕಿಟ್ ವಿತರಣೆ - Basavajyothi Foundation
ಬಸವಜ್ಯೋತಿ ಫೌಂಡೇನ್ ಹಾಗೂ ಜೊಲ್ಲೆ ಉದ್ಯೋಗ ಸಮೂಹದಿಂದ ಚಿಕ್ಕೋಡಿ ತಾಲೂಕಿನ ಯಕ್ಸಂಬಾ ಪಟ್ಟಣದಲ್ಲಿ 5,000 ಬಡ ಕುಟುಂಬಗಳಿಗೆ ದಿನಸಿ ಕಿಟ್ಗಳನ್ನು ವಿತರಿಸಲಾಯಿತು.
ಚಿಕ್ಕೋಡಿ: ಬಸವಜ್ಯೋತಿ ಫೌಂಡೇಷನ್ ಹಾಗೂ ಜೊಲ್ಲೆ ಉದ್ಯೋಗ ಸಮೂಹದ ವತಿಯಿಂದ ಚಿಕ್ಕೋಡಿ ವ್ಯಾಪ್ತಿಯಲ್ಲಿ ಸುಮಾರು 5,000 ಬಡ ಕುಟುಂಬಗಳಿಗೆ ದಿನಸಿ ಕಿಟ್ ವಿತರಣೆ ಮಾಡಲಾಯಿತು.
ಬೆಳಗಾವಿ ಜಿಲ್ಲೆಯ ಚಿಕ್ಕೋಡಿ ತಾಲೂಕಿನ ಯಕ್ಸಂಬಾ ಪಟ್ಟಣದಲ್ಲಿ ಕಿಟ್ ವಿತರಿಸಿ ಮಾತನಾಡಿದ ಫೌಂಡೇಷನ್ ಅಧ್ಯಕ್ಷ ಬಸವಪ್ರಸಾದ ಜೊಲ್ಲೆ, ಈಗಾಗಲೇ ಫೌಂಡೇಷನ್ ವತಿಯಿಂದ ಒಂದು ಲಕ್ಷ ಮಾಸ್ಕ ವಿತರಣೆ ಮಾಡಲಾಗಿದೆ. 25ಕ್ಕೂ ಹೆಚ್ಚು ಸ್ಯಾನಿಟೈಸರ್ ಘಟಕ ಸ್ಥಾಪಿಸಿದ್ದೇವೆ. ಸಂಸದ ಅಣ್ಣಾಸಾಹೇಬ ಜೊಲ್ಲೆ ಅವರ ನೇತೃತ್ವದಲ್ಲಿ ಹಳ್ಳಿಗಳಲ್ಲಿ ದಿನ ಬಳಕೆ ಸಾಮಗ್ರಿ ಕಿಟ್ ವಿತರಣೆ ಮಾಡಲಾಗುತ್ತಿದೆ. ಇದಕ್ಕೆ ಜೊಲ್ಲೆ ಉದ್ಯೋಗ ಸಮೂಹ ಬೆಂಬಲವಾಗಿದೆ ಎಂದರು