ಕರ್ನಾಟಕ

karnataka

ETV Bharat / state

ಸಾಹುಕಾರ್‌ ಕೊರಳಿಗೆ ಬೃಹತ್‌ ಸೇಬು ಹಣ್ಣಿನ ಮಾಲೆ.. ರಮೇಶ್‌ ಜಾರಕಿಹೊಳಿಗೆ ಭರ್ಜರಿ ಸ್ವಾಗತ.. - Ramesh Zarakiholi arrives in Belgaum

ಬಿಜೆಪಿ ಸೇರಿದ ಬಳಿಕ ಅನರ್ಹ ಶಾಸಕ ರಮೇಶ್​ ಜಾರಕಿಹೊಳಿ ಇಂದು ಬೆಳಗಾವಿಗೆ ಆಗಮಿಸಿದರು. ಬಿಜೆಪಿ ಕಾರ್ಯಕರ್ತರು ಬೃಹದಾಕಾರದ ಸೇಬು ಹಣ್ಣಿನ ಹಾರ ಹಾಕಿ ಅದ್ಧೂರಿಯಾಗಿ ಸ್ವಾಗತಿಸಿದ್ರು.

ಬೆಳಗಾವಿಗೆ ಆಗಮಿಸಿದ ರಮೇಶ್​ ಜಾರಕಿಹೊಳಿಗೆ ಅದ್ದೂರಿ ಸ್ವಾಗತ

By

Published : Nov 15, 2019, 4:39 PM IST


ಬೆಳಗಾವಿ/ಗೋಕಾಕ್​:ಬಿಜೆಪಿ ಸೇರಿದ ಬಳಿಕ ಅನರ್ಹ ಶಾಸಕ ರಮೇಶ್​ ಜಾರಕಿಹೊಳಿ ಇಂದು ಬೆಳಗಾವಿ​ಗೆ ಆಗಮಿಸಿದರು. ಬಿಜೆಪಿ ಕಾರ್ಯಕರ್ತರ ಸಂಭ್ರಮವಂತೂ ಜೋರಾಗಿತ್ತು. ರಮೇಶ್‌ ಜಾರಕಿಹೊಳಿ ಅವರಿಗೆ ಬೃಹದಾಕಾರದ ಸೇಬು ಹಣ್ಣಿನ ಹಾರ ಹಾಕಿ ಅದ್ಧೂರಿಯಾಗಿ ಸ್ವಾಗತಿಸಿದ್ರು.

ಬೆಳಗಾವಿಯಲ್ಲಿ ರಮೇಶ್​ ಜಾರಕಿಹೊಳಿಗೆ ಅದ್ದೂರಿ ಸ್ವಾಗತ..

ಸಾಂಬ್ರಾ ವಿಮಾನ ನಿಲ್ದಾಣದಿಂದ ರಮೇಶ್​ ಜಾರಕಿಹೊಳಿ ಆಗಮಿಸುತ್ತಿದಂತೆ ನೂರಾರು ಸಂಖ್ಯೆಯಲ್ಲಿ ಸೇರಿದ್ದ ಬಿಜೆಪಿ ಕಾರ್ಯಕರ್ತರು ಮತ್ತು ಅಭಿಮಾನಿಗಳು ಅವರ ಪರ ಘೋಷಣೆ ಕೂಗಿದರು. ಬಳಿಕ ಅಲ್ಲಿಂದ ತೆರೆದ ವಾಹನದಲ್ಲಿ ಬೈಕ್ ಜಾಥಾದ ಮೂಲಕ ನಗರದ ಪ್ರಮುಖ ಬೀದಿಗಳಾದ ಭೂತಿ ಕೂಟ, ಹೊಸಪೇಠ ಗಲ್ಲಿ, ಬಸವೇಶ್ವರ ವೃತ್ತದ ಮೂಲಕ ಸಂಚರಿಸಿ ಲಕ್ಷ್ಮಿದೇವಿ ದೇವಸ್ಥಾನಕ್ಕೆ ಬಂದು ಪೂಜೆ ಸಲ್ಲಿಸಿದರು.

ನಗರದಲ್ಲಿ ಬಿಜೆಪಿ ಸಮಾವೇಶ ಕಾರ್ಯಕ್ರಮ ಇದ್ದ ಹಿನ್ನೆಲೆಯಲ್ಲಿ ಸುಮಾರು 5 ಸಾವಿರಕ್ಕೂ ಹೆಚ್ಚಿನ ಸಂಖ್ಯೆಯಲ್ಲಿ ಕಾರ್ಯಕರ್ತರು ಸೇರಿದ್ದಾರೆ.

ABOUT THE AUTHOR

...view details