ಬೆಳಗಾವಿ: ಜಿಲ್ಲೆಯಲ್ಲಿ ಗ್ರಾ.ಪಂ. ಚುನಾವಣಾ ಕಣ ರಂಗೇರುತ್ತಿದ್ದು, ಮೊದಲ ಹಂತದ ಏಳು ತಾಲೂಕುಗಳಲ್ಲಿ ನಡೆಯಲಿರುವ ಚುನಾವಣೆಗೆ ನಾಮಪತ್ರ ಸಲ್ಲಿಕೆ ಕಾರ್ಯ ಪೂರ್ಣಗೊಂಡಿದೆ. 14 ತಾಲೂಕುಗಳನ್ನು ಹೊಂದಿರುವ ಗಡಿಜಿಲ್ಲೆ ಬೆಳಗಾವಿಯಲ್ಲಿ ಎರಡು ಹಂತಗಳಲ್ಲಿ ಚುನಾವಣೆ ನಡೆಸಲಾಗುತ್ತಿದೆ. ಮೊದಲನೇ ಹಂತದಲ್ಲಿ ಏಳು ತಾಲೂಕು ಹಾಗೂ ಎರಡನೇ ಹಂತದಲ್ಲಿ ಏಳು ತಾಲೂಕುಗಳಲ್ಲಿ ಗ್ರಾಮ ಪಂಚಾಯತ್ ಚುನಾವಣೆ ನಡೆಯಲಿದೆ. ಮೊದಲನೇ ಹಂತದಲ್ಲಿ ಬೆಳಗಾವಿ, ಖಾನಾಪುರ, ಹುಕ್ಕೇರಿ, ಬೈಲಹೊಂಗಲ, ಕಿತ್ತೂರು, ಗೋಕಾಕ್ ಹಾಗೂ ಮೂಡಲಗಿ ತಾಲೂಕುಗಳಲ್ಲಿ ಚುನಾವಣೆಯನ್ನು ನಡೆಸಲಾಗುತ್ತಿದೆ.
ಎಲ್ಲಿ, ಎಷ್ಟು ನಾಮಪತ್ರ:
- ಬೆಳಗಾವಿ ತಾಲೂಕಿನಲ್ಲಿ 55 ಗ್ರಾ.ಪಂ. ಗಳಿದ್ದು, 1037 ಸ್ಥಾನಗಳಿಗೆ ಚುನಾವಣೆ ನಡೆಯಲಿದೆ. 3864 ನಾಮಪತ್ರ ಸಲ್ಲಿಕೆಯಾಗಿದ್ದು, 44 ನಾಮಪತ್ರ ತಿರಸ್ಕೃತಗೊಂಡಿವೆ. ಕಣದಲ್ಲಿ 3820 ಉಳಿದಿದ್ದಾರೆ.
- ಖಾನಾಪುರದಲ್ಲಿ 51 ಗ್ರಾ.ಪಂ.ಗಳಿದ್ದು, 623 ಸ್ಥಾನಗಳಿಗೆ ಚುನಾವಣೆ ನಡೆಯಲಿದೆ. 2214 ನಾಮಪತ್ರ ಸಲ್ಲಿಕೆಯಾಗಿದ್ದು, 31 ನಾಮಪತ್ರಗಳು ತಿರಸ್ಕೃತವಾಗಿವೆ. 2183 ಅಭ್ಯರ್ಥಿಗಳು ಕಣದಲ್ಲಿದ್ದಾರೆ.
- ಹುಕ್ಕೇರಿ ತಾಲೂಕಿನಲ್ಲಿ 52 ಗ್ರಾ.ಪಂ.ಗಳಿದ್ದು, 880 ಸ್ಥಾನಗಳಿಗೆ ಚುಣಾವಣೆ ನಡೆಯಲಿದೆ. 3423 ನಾಮಪತ್ರ ಸಲ್ಲಿಕೆಯಾಗಿದ್ದು, 86 ನಾಮಪತ್ರ ತಿರಸ್ಕೃತಗೊಂಡಿವೆ. ಕಣದಲ್ಲಿ 3337 ಅಭ್ಯರ್ಥಿಗಳು ಕಣದಲ್ಲಿದ್ದಾರೆ.
- ಬೈಲಹೊಂಗಲ ತಾಲೂಕಿನಲ್ಲಿ 33 ಗ್ರಾ.ಪಂ. ಗಳಿದ್ದು, 518 ಸ್ಥಾನಗಳಿಗೆ ಚುನಾವಣೆ ನಡೆಯಲಿದೆ. 1523 ಅಭ್ಯರ್ಥಿಗಳು ನಾಮಪತ್ರ ಸಲ್ಲಿಸಿದ್ದು, 10 ನಾಮಪತ್ರಗಳು ತಿರಸ್ಕೃತಗೊಂಡಿವೆ. 1513 ಅಭ್ಯರ್ಥಿಗಳು ಕಣದಲ್ಲಿದ್ದಾರೆ.
- ಕಿತ್ತೂರು ತಾಲೂಕಿನಲ್ಲಿ 16 ಗ್ರಾ.ಪಂ.ಗಳಿದ್ದು, 234 ಸ್ಥಾನಗಳಿಗೆ ಚುನಾವಣೆ ನಡೆಯಲಿದೆ. 804 ನಾಮಪತ್ರಗಳು ಸಲ್ಲಿಕೆಯಾಗಿದ್ದು, 29 ನಾಮಪತ್ರ ತಿರಸ್ಕೃತಗೊಂಡಿವೆ. 775 ಅಭ್ಯರ್ಥಿಗಳು ಕಣದಲ್ಲಿದ್ದಾರೆ.
- ಗೋಕಾಕಿನಲ್ಲಿ 32 ಪಂಚಾಯಿತಿಗಳಿದ್ದು, 620 ಸ್ಥಾನಗಳಿಗೆ ಚುಣಾವಣೆ ನಡೆಯಲಿದೆ. 2522 ಅಭ್ಯರ್ಥಿಗಳು ನಾಮಪತ್ರ ಸಲ್ಲಿಸಿದ್ದು, 33 ನಾಮಪತ್ರ ತಿರಸ್ಕೃತಗೊಂಡಿವೆ. 2489 ಅಭ್ಯರ್ಥಿಗಳು ಕಣದಲ್ಲಿದ್ದಾರೆ.
- ಮೂಡಲಗಿ ತಾಲೂಕಿನಲ್ಲಿ 20 ಗ್ರಾಪಂಗಳಿದ್ದು, 347 ಸ್ಥಾನಗಳಿಗೆ ಚುನಾವಣೆ ನಡೆಯಲಿದೆ. 1393 ನಾಮಪತ್ರ ಸ್ವೀಕೃತವಾಗಿದ್ದು, 19 ನಾಮಪತ್ರ ತಿರಸ್ಕೃತಗೊಂಡಿವೆ. 1374 ಅಭ್ಯರ್ಥಿಗಳು ಕಣದಲ್ಲಿದ್ದಾರೆ.