ಕರ್ನಾಟಕ

karnataka

ETV Bharat / state

ಸವದತ್ತಿಯಲ್ಲಿ ಗೌರಿಹುಣ್ಣಿಮೆ ಸಂಭ್ರಮ : ಮಳೆ ಲೆಕ್ಕಿಸದೇ ರೇಣುಕಾದೇವಿ ದರ್ಶನ ಪಡೆದ ಭಕ್ತರು - ಮಳೆಯಲ್ಲೇ ರೇಣುಕಾದೇವಿ ದರ್ಶನ ಪಡೆದ ಭಕ್ತರು

ರಾಜ್ಯ ಹಾಗೂ ಹೊರ ರಾಜ್ಯದ ನಾನಾ ಭಾಗಗಳಿಂದ ಸಹಸ್ರಾರು ಸಂಖ್ಯೆಯಲ್ಲಿ ಭಕ್ತರು ಸವದತ್ತಿಯ ಶ್ರೀ ರೇಣುಕಾ ದೇವಿ ದರ್ಶನಕ್ಕೆ ಆಗಮಿಸಿದ್ದರು. ಧಾರಾಕಾರ ಮಳೆಯ ಮಧ್ಯೆಯೂ ಸಾಲಿನಲ್ಲಿ ನಿಂತು ಭಕ್ತರು ದರ್ಶನ ಪಡೆದರು..

ಸವದತ್ತಿಯಲ್ಲಿ ಗೌರಿಹುಣ್ಣಿಮೆ ಸಂಭ್ರಮ
ಸವದತ್ತಿಯಲ್ಲಿ ಗೌರಿಹುಣ್ಣಿಮೆ ಸಂಭ್ರಮ

By

Published : Nov 19, 2021, 8:09 PM IST

ಬೆಳಗಾವಿ :ಗಡಿ ಜಿಲ್ಲೆ ಬೆಳಗಾವಿಯಲ್ಲಿ ವಿವಿಧೆಡೆ ಮಳೆಯ ಆರ್ಭಟ ಮುಂದುವರೆದಿದೆ. ಮಳೆಯಿಂದ ಸವದತ್ತಿಯ ಶ್ರೀ ರೇಣುಕಾ ಯಲ್ಲಮ್ಮದೇವಿ ದರ್ಶನಕ್ಕೆ ಬಂದ ಭಕ್ತರು ಪರದಾಡುವ ಸ್ಥಿತಿ ನಿರ್ಮಾಣವಾಗಿತ್ತು.

ಮಳೆ ಲೆಕ್ಕಿಸದೇ ರೇಣುಕಾದೇವಿ ದರ್ಶನ ಪಡೆದ ಭಕ್ತರು..

ಶ್ರೀ ರೇಣುಕಾದೇವಿ ದೇವಸ್ಥಾನದಲ್ಲಿಂದು ಗೌರಿ ಹುಣ್ಣಿಮೆ ಆಚರಿಸಲಾಗುತ್ತಿತ್ತು. ಹೀಗಾಗಿ, ರಾಜ್ಯ ಹಾಗೂ ಹೊರ ರಾಜ್ಯದ ನಾನಾ ಭಾಗಗಳಿಂದ ಸಹಸ್ರಾರು ಸಂಖ್ಯೆಯಲ್ಲಿ ಭಕ್ತರು ದೇವಸ್ಥಾನಕ್ಕೆ ಆಗಮಿಸಿದ್ದರು. ಧಾರಾಕಾರ ಮಳೆಯ ಮಧ್ಯೆಯೂ ಸಾಲಿನಲ್ಲಿ ನಿಂತು ಭಕ್ತರು ದರ್ಶನ ಪಡೆದರು.

ಕೊಡೆ ಹಿಡಿದುಕೊಂಡೇ ಸಾಲಿನಲ್ಲಿ ನಿಂತಿರುವ ಭಕ್ತರು ಶ್ರೀ ಯಲ್ಲಮ್ಮದೇವಿ ದರ್ಶನ ಪಡೆದು ಪುನೀತರಾದರು.

For All Latest Updates

ABOUT THE AUTHOR

...view details