ಬೆಳಗಾವಿ: ಇಲ್ಲಿನ ಮಹಾನಗರ ಪಾಲಿಕೆ ಚುನಾವಣೆಗೆ ದಿನಗಣನೆ ಆರಂಭವಾಗಿದ್ದು, ಬಿಜೆಪಿ ಮುಖಂಡರು ಮನೆಮನೆಗೆ ತೆರಳಿ ಪ್ರಚಾರ ನಡೆಸುತ್ತಿದ್ದಾರೆ. ನಗರದ ವಾರ್ಡ್ ನಂಬರ್ 11ರಲ್ಲಿ ಜಿಲ್ಲಾ ಉಸ್ತುವಾರಿ ಸಚಿವ ಗೋವಿಂದ ಕಾರಜೋಳ ಪ್ರಚಾರ ನಡೆಸಿದ್ದು, ಈ ವೇಳೆ ಮಾಜಿ ಡಿಸಿಎಂ ಲಕ್ಷ್ಮಣ ಸವದಿ ಮನೆಗೂ ತೆರಳಿ ಮತ ಕೇಳಿ ಅಚ್ಚರಿ ಮೂಡಿಸಿದರು.
ಬೆಳಗಾವಿ ಪಾಲಿಕೆ ಚುನಾವಣೆ: ಸವದಿ ನಿವಾಸಕ್ಕೂ ತೆರಳಿ ಮತಯಾಚಿಸಿದ ಕಾರಜೋಳ - Belgavi
ಬೆಳಗಾವಿಯ ಸದಾಶಿವ ನಗರದಲ್ಲಿರುವ ಲಕ್ಷ್ಮಣ ಸವದಿ ನಿವಾಸಕ್ಕೆ ಜಿಲ್ಲಾ ಉಸ್ತುವಾರಿ ಸಚಿವ ಗೋವಿಂದ ಕಾರಜೋಳ ಭೇಟಿ ನೀಡಿ ಚುನಾವಣಾ ಪ್ರಚಾರ ನಡೆಸಿದರು.
ಸವದಿ ನಿವಾಸಕ್ಕೂ ತೆರಳಿ ಮತಯಾಚಿಸಿದ ಸಚಿವ ಕಾರಜೋಳ
ಬೆಳಗಾವಿಯ ಸದಾಶಿವ ನಗರದಲ್ಲಿರುವ ಲಕ್ಷ್ಮಣ ಸವದಿ ನಿವಾಸಕ್ಕೆ ಕಾರಜೋಳ ಭೇಟಿ ನೀಡಿ ಸವದಿ ಕಿರಿಯ ಪುತ್ರನಿಗೆ ಪ್ರಣಾಳಿಕೆ ಪತ್ರ ನೀಡಿದರು. ಈ ಸಂದರ್ಭದಲ್ಲಿ, ಎಲ್ಲಾ ಮತಗಳನ್ನು ಬಿಜೆಪಿಗೆ ಹಾಕಿಸುವಂತೆ ಸವದಿ ಸಾಹೇಬರಿಗೆ ಹೇಳಿ ಎಂದು ಕಾರಜೋಳ ನಗೆಚಟಾಕಿ ಹಾರಿಸಿದರು.
ಈ ವೇಳೆ ನಿಮ್ಮ ಮೇಲೆ ಡೌಟ್ ಇದೆ. ಅದಕ್ಕೆ ಮತಯಾಚನೆಗೆ ಬಂದಿದ್ದೇವೆ ಎಂದು ಮಾಜಿ ಶಾಸಕ ಸಂಜಯ್ ಪಾಟೀಲ ಹೇಳಿದ್ದು ಅಲ್ಲಿದ್ದವರನ್ನು ನಗೆಗಡಲಲ್ಲಿ ತೇಲಿಸಿತು.