ಕರ್ನಾಟಕ

karnataka

ETV Bharat / state

ನೆರೆ ಸಂತ್ರಸ್ತರಿಗೆ ಈಗಾಗಲೇ ಸರ್ಕಾರ ಪರಿಹಾರ ನೀಡಿದೆ: ಡಿಸಿಎಂ ಕಾರಜೋಳ - ಚಿಕ್ಕೋಡಿ ಗೋವಿಂದ ಕಾರಜೋಳ ಸುದ್ದಿ

ನೂರಕ್ಕೆ ಶೇ. 99%ರಷ್ಟು ನೆರೆ ಸಂತ್ರಸ್ತರಿಗೆ ಅವರ ಖಾತೆಗಳಿಗೆ ಪರಿಹಾರ ರೂಪದಲ್ಲಿ ಹಣ ಜಮಾ ಮಾಡಿದ್ದೇವೆ. ತಾಂತ್ರಿಕ ದೋಷದಿಂದ ಒಂದೆರಡು ಪ್ರತಿಷತ ಉಳದಿರಬಹುದು. ಉಳಿದ ಫಲಾನುಭವಗಳಿಗೆ ಪರಿಹಾರ ನೀಡುವಂತೆ ಅಧಿಕಾರಿಗಳಿಗೆ ಸೂಚಿಸಲಾಗಿದೆ. ಪ್ರವಾಹ ಸಂತ್ರಸ್ತರಿಗೆ ಪರಿಹಾರ ಕೊಡುವಲ್ಲಿ ಸರ್ಕಾರ ಬದ್ಧ. ಸರ್ಕಾರದ ಖಜಾನೆಯಲ್ಲಿ ಹಣ ಇಲ್ಲ ಎಂಬ ಆರೋಪ ಸುಳ್ಳು. ಕೇಂದ್ರಕ್ಕಿಂತ ಹೆಚ್ಚುವರಿ ಪರಿಹಾರ ಕೊಡುತ್ತಿದ್ದೇವೆ ಎಂದರು.

govinda-karajola-talking-about-to-flood-relief-fund
ನೆರೆ ಸಂತ್ರಸ್ಥರಿಗೆ ಈಗಗಲೇ ಕರ್ನಾಟಕ ಸರ್ಕಾರ ಪರಿಹಾರ ಹಣ ನೀಡಿದೆ : ಕಾರಜೋಳ

By

Published : Jan 24, 2020, 9:28 PM IST

ಚಿಕ್ಕೋಡಿ: ಎನ್​​ಡಿಆರ್​ಎಫ್ ವರದಿ ಪ್ರಕಾರ ₹95 ಸಾವಿರ ಮಾತ್ರ ಪೂರ್ಣ ಬಿದ್ದ ಮನೆಗೆ ನೀಡಬೇಕು ಎಂದು ಹೇಳಿದೆ. ಆದರೆ, ರಾಜ್ಯ ಸರ್ಕಾರ 5 ಲಕ್ಷ ರೂ. ಪರಿಹಾರ ನೀಡುತ್ತಿದೆ ಎಂದು ಡಿಸಿಎಂ ಗೋವಿಂದ ಕಾರಜೋಳ ಹೇಳಿದರು.

ನಗರದಲ್ಲಿ ಮಾಧ್ಯಮದವರಿಗೆ ಪ್ರತಿಕ್ರಿಯಿಸಿದ ಅವರು, ಬೆಳೆ ಪರಿಹಾರಕ್ಕಾಗಿ ಒಣಬೇಸಾಯದ ಬೆಳೆಗೆ ₹6,800, ನೀರಾವರಿ ₹13,000 ಪರಿಹಾರ ನೀಡಲಾಗುತ್ತಿದೆ. ಹಣ್ಣು ಬೆಳೆಗಳಿಗೆ ಹೆಕ್ಟೇರ್​ಗೆ ₹18,000 ಪರಿಹಾರ ನೀಡಲಾಗುತ್ತಿದೆ. ಆದರೀಗ ಎಲ್ಲಾ ಬೆಳೆಗಳಿಗೆ ಅಧಿಕವಾಗಿ ₹10,000 ಅಧಿಕ ನೀಡಲಾಗುತ್ತಿದೆ ಎಂದರು.

ನೆರೆ ಸಂತ್ರಸ್ತರಿಗೆ ಈಗಾಗಲೇ ರಾಜ್ಯ ಸರ್ಕಾರ ಪರಿಹಾರ ನೀಡಿದೆ.. ಡಿಸಿಎಂ ಕಾರಜೋಳ ಸ್ಪಷ್ಟನೆ

ನೂರಕ್ಕೆ ಶೇ.99%ರಷ್ಟು ನೆರೆ ಸಂತ್ರಸ್ತರಿಗೆ ಅವರ ಖಾತೆಗಳಿಗೆ ಪರಿಹಾರ ರೂಪದಲ್ಲಿ ಹಣ ಜಮಾ ಮಾಡಿದ್ದೇವೆ. ತಾಂತ್ರಿಕ ದೋಷದಿಂದ ಒಂದೆರಡು ಪ್ರತಿಷತ ಉಳದಿರಬಹುದು. ಉಳಿದ ಫಲಾನುಭವಗಳಿಗೆ ಪರಿಹಾರ ನೀಡುವಂತೆ ಅಧಿಕಾರಿಗಳಿಗೆ ಸೂಚಿಸಲಾಗಿದೆ. ಪ್ರವಾಹ ಸಂತ್ರಸ್ತರಿಗೆ ಪರಿಹಾರ ಕೊಡುವಲ್ಲಿ ಸರ್ಕಾರ ಬದ್ಧ. ಸರ್ಕಾರದ ಖಜಾನೆಯಲ್ಲಿ ಹಣ ಇಲ್ಲ ಎಂಬ ಆರೋಪ ಸುಳ್ಳು. ಕೇಂದ್ರಕ್ಕಿಂತ ಹೆಚ್ಚುವರಿ ಪರಿಹಾರ ಕೊಡುತ್ತಿದ್ದೇವೆ ಎಂದರು.

ಮಂಗಳೂರ ಬಾಂಬ್ ಪ್ರಕರಣ ಕುರಿತು ಪ್ರತಿಕ್ರಿಯಿಸಿದ ಡಿಸಿಎಂ, ವಿಧ್ವಂಶಕ ಕೃತ್ಯವನ್ನ ಯಾರು ಮಾಡಿದರೂ ಅದು ತಪ್ಪು. ಯಾವುದೇ ಧರ್ಮ ಎನ್ನುವುದಕ್ಕಿಂತ ನಾವು ಭಾರತೀಯರು. ತಪ್ಪು ಮಾಡಿದವರಿಗೆ ಶಿಕ್ಷೆ ಆಗಲಿದೆ ಅಂತಾ ಹೇಳಿದರು.

ABOUT THE AUTHOR

...view details