ಕರ್ನಾಟಕ

karnataka

ETV Bharat / state

ವೀರ ಮದಕರಿ ಜಯಂತಿಗೆ ಸರಕಾರಿ ರಜೆ ನೀಡುವಂತೆ ಆಗ್ರಹ - veera madakari jayanti news

ಅ.13ರಂದು ಆಚರಿಸಲ್ಪಡುವ ವೀರ ಮದಕರಿ ಜಯಂತಿಗೆ ಸರಕಾರಿ ರಜೆ ನೀಡುವಂತೆ ವೀರ ಮದಕರಿ ಘರ್ಜನೆ ಸಂಘ ಆಗ್ರಹಿಸಿದೆ.

Protest
ಬೆಳಗಾವಿ

By

Published : Oct 9, 2020, 6:54 PM IST

ಬೆಳಗಾವಿ:ಅ. 13 ರಂದು ವೀರ ಮದಕರಿ ಜಯಂತಿ ದಿನದಂದು ಸರ್ಕಾರಿ ರಜೆ ಘೋಷಣೆ ಮಾಡಬೇಕು ಎಂದು ಆಗ್ರಹಿಸಿ ನಗರದ ಡಿಸಿ ಕಚೇರಿ ಎದುರಿಗೆ ವೀರ ಮದಕರಿ ಘರ್ಜನೆ ಸಂಘದಿಂದ ಪ್ರತಿಭಟನೆ ನಡೆಸಿದರು.

ವೀರ ಮದಕರಿ ಜಯಂತಿಗೆ ಸರಕಾರಿ ರಜೆ ನೀಡುವಂತೆ ಆಗ್ರಹಿಸಿ ಪ್ರತಿಭಟನೆ

ರಜೆ ಘೋಷಣೆ ಜೊತೆಗೆ ಸರ್ಕಾರದ ಎಲ್ಲ ಸೌಲಭ್ಯಗಳನ್ನು ನೀಡಬೇಕೆಂದು ಜಿಲ್ಲಾಧಿಕಾರಿಗಳಿಗೆ ಮನವಿ ಮಾಡಿಕೊಂಡ ಸಂಘದ ಪದಾಧಿಕಾರಿಗಳು, ವೀರ ಮದಕರಿ ಜಯಂತಿಯಂದು ಸರಕಾರದ ಎಲ್ಲ ಕಚೇರಿಗಳಿಗೆ ರಜೆ ನೀಡಬೇಕು. ಸರಕಾರದ ಎಲ್ಲ ಕಚೇರಿಗಳಲ್ಲಿ ವೀರ ಮದಕರಿ ಭಾವಚಿತ್ರ ಇಡಬೇಕು ಎಂದು ಒತ್ತಾಯಿಸಿದರು.

ಸರಕಾರದ ವತಿಯಿಂದ ಮದಕರಿ ನಾಯಕರ ಜಯಂತಿ ಆಚರಿಸಬೇಕು ಹಾಗೂ ಬೆಳಗಾವಿಯಲ್ಲೂ ಸಹ ವೀರ ಮದಕರಿ ನಾಯಕರ ಪುತ್ಥಳಿ ನಿರ್ಮಿಸಲು ಅವಕಾಶ ಕೊಡಬೇಕು ಎಂದು ಜಿಲ್ಲಾಧಿಕಾರಿಗಳಿಗೆ ಮನವಿ ಸಲ್ಲಿಸಿದರು.

ABOUT THE AUTHOR

...view details