ಬೆಳಗಾವಿ :ಚಾಲಕನ ನಿಯಂತ್ರಣ ತಪ್ಪಿ ಸಕ್ಕರೆ ಚೀಲ ಸಾಗಿಸುತ್ತಿದ್ದ ಸರಕು ವಾಹನ ಪಲ್ಟಿಯಾಗಿದೆ. ಇದರಿಂದಾಗಿ ಲಾರಿಯಲ್ಲಿದ್ದ ಅರ್ಧಕ್ಕಿಂತ ಹೆಚ್ಚಿನ ಸಕ್ಕರೆ ದಾರಿ ಹೋಕರ ಪಾಲಾದ ಘಟನೆ ಬೆಳಗಾವಿ ಜಿಲ್ಲೆಯ ಸುತಗತ್ತಿ ಗ್ರಾಮದ ಸಮೀಪ ತಡರಾತ್ರಿ ನಡೆದಿದೆ.
ಸರಕು ವಾಹನ ಪಲ್ಟಿ ; ದಾರಿಹೋಕರ ಪಾಲಾದ ಲಕ್ಷಾಂತರ ಮೌಲ್ಯದ ಸಕ್ಕರೆ ಚೀಲಗಳು.. - ಸಕ್ಕರೆ ಚೀಲ
ಮಹಾರಾಷ್ಟ್ರದ ಓಲಂ ಸಕ್ಕರೆ ಕಾರ್ಖಾನೆಯಿಂದ 300 ಚೀಲ ಸಕ್ಕರೆಯನ್ನು ಲಾರಿ ಮೂಲಕ ಸಾಗಿಸಲಾಗುತ್ತಿತ್ತು. ಬಿಟ್ಟು ಬಿಡದೇ ಸುರಿಯುತ್ತಿರುವ ಮಳೆಯಿಂದ ಚಾಲಕನ ನಿಯಂತ್ರಣ ತಪ್ಪಿ ಲಾರಿ ಪಲ್ಟಿಯಾಗಿದೆ.
ಮಹಾರಾಷ್ಟ್ರದ ಓಲಂ ಸಕ್ಕರೆ ಕಾರ್ಖಾನೆಯಿಂದ 300 ಚೀಲ ಸಕ್ಕರೆಯನ್ನು ಲಾರಿ ಮೂಲಕ ಸಾಗಿಸಲಾಗುತ್ತಿತ್ತು. ಬಿಟ್ಟು ಬಿಡದೇ ಸುರಿಯುತ್ತಿರುವ ಮಳೆಯಿಂದ ಚಾಲಕನ ನಿಯಂತ್ರಣ ತಪ್ಪಿ ಲಾರಿ ಪಲ್ಟಿಯಾಗಿದೆ. ಅಪಘಾತದಲ್ಲಿ ಗಂಭೀರವಾಗಿ ಗಾಯಗೊಂಡಿದ್ದ ಚಾಲಕನನ್ನು ಲಾರಿಯ ಕ್ಲೀನರ್ ಆಸ್ಪತ್ರೆಗೆ ದಾಖಲಿಸಿದ್ದರು.
ಆಸ್ಪತ್ರೆಯಿಂದ ಕ್ಲೀನರ್ ಮರಳಿ ಲಾರಿ ಇರುವ ಸ್ಥಳಕ್ಕೆ ಬರುವಷ್ಟರಲ್ಲಿ ಲಾರಿಯಲ್ಲಿದ್ದ 190 ಸಕ್ಕರೆ ಚೀಲಗಳನ್ನು ಸ್ಥಳೀಯರು ಹಾಗೂ ದಾರಿಹೋಕರು ಹೊತ್ತೊಯ್ದಿದ್ದಾರೆ. ಕಾಕತಿ ಠಾಣೆಯ ಪಿಐ ಶ್ರಿಶೈಲ ಕೌಜಲಗಿ ಘಟನಾ ಸ್ಥಳಕ್ಕೆ ಭೇಟಿ ನೀಡಿ ಸಕ್ಕರೆ ಮರಳಿಸುವಂತೆ ಸ್ಥಳೀಯರಿಗೆ ವಾರ್ನ್ ಮಾಡಿದ್ದಾರೆ. ಸಕ್ಕರೆ ಚೀಲ ಮರಳಿಸದಿದ್ರೆ ಮನೆ ಮನೆಗೆ ತೆರಳಿ ಶೋಧ ಮಾಡುವ ಎಚ್ಚರಿಕೆ ನೀಡಿದ್ದಾರೆ.