ಬೆಳಗಾವಿ: ಕೊರೊನಾ ವೈರಸ್ ತಡೆಯಲು ರಾಜ್ಯಾದ್ಯಂತ ಸಂಡೇ ಲಾಕ್‌ಡೌನ್ ಜಾರಿ ಮಾಡಲಾಗಿದೆ. ಈ ಹಿನ್ನೆಲೆ ಕುಂದಾನಗರಿ ಬೆಳಗಾವಿ ಸಹ ಸಂಪೂರ್ಣ ಸ್ತಬ್ಧವಾಗಿದ್ದು, ಅಗತ್ಯ ಸೇವೆಗೆಂದು ಕೆಲವೊಂದು ವಾಹನಗಳು ಮಾತ್ರ ಸಂಚರಿಸುತ್ತಿವೆ.
ಸಂಡೇ ಲಾಕ್‌ಡೌನ್ ಗೆ ಕುಂದಾನಗರಿ ಸಂಪೂರ್ಣ ಸ್ತಬ್ಧ - ಸಂಡೇ ಲಾಕ್‌ಡೌನ್ ಜಾರಿ
ರಾಜ್ಯಾದ್ಯಂತ ಸಂಡೇ ಲಾಕ್‌ಡೌನ್ ಜಾರಿ ಮಾಡಲಾಗಿದೆ. ಈ ಹಿನ್ನೆಲೆ ಕುಂದಾನಗರಿ ಬೆಳಗಾವಿ ಸಹ ಸಂಪೂರ್ಣ ಸ್ತಬ್ಧವಾಗಿದೆ.
![ಸಂಡೇ ಲಾಕ್‌ಡೌನ್ ಗೆ ಕುಂದಾನಗರಿ ಸಂಪೂರ್ಣ ಸ್ತಬ್ಧ ಬೆಳಗಾವಿ](https://etvbharatimages.akamaized.net/etvbharat/prod-images/768-512-09:52:22:1593922942-kn-bgm-1-05-suande-lockdown-vsl-01-ka10029-05072020091645-0507f-00173-633.jpg)
ಬೆಳಗಾವಿ
ನಗರದ ಚೆನ್ನಮ್ಮ ವೃತ್ತ, ಕೇಂದ್ರ ಬಸ್ ನಿಲ್ದಾಣ, ಎಪಿಎಂಸಿ ಹೋಲ್‌ಸೇಲ್, ತರಕಾರಿ ಮಾರುಕಟ್ಟೆ ಸೇರಿದಂತೆ ನಗರದಲ್ಲಿ ಜನ ಸಂಚಾರ ವಿರಳವಾಗಿದೆ. ಸಂಡೇ ಲಾಕ್‌ಡೌನ್ ಗೆ ಕುಂದಾನಗರಿ ಜನರು ಬೆಂಬಲ ವ್ಯಕ್ತಪಡಿಸಿದ್ದಾರೆ.
ನಾಳೆ ಬೆಳಗ್ಗೆ 5 ಗಂಟೆಯವರೆಗೂ ಜಿಲ್ಲಾಧಿಕಾರಿ ನಿಷೇಧಾಜ್ಞೆ ಜಾರಿಗೊಳಿಸಿ ಆದೇಶ ಹೊರಡಿಸಿದ್ದರಿಂದ ಅಗತ್ಯ ವಸ್ತುಗಳಾದ ಹಾಲು ದಿನಸಿ, ಔಷಧಿ ಅಂಗಡಿಗಳನ್ನು ತೆರೆಯಲು ಮಾತ್ರ ಅವಕಾಶ ನೀಡಲಾಗಿದೆ. ಇನ್ನುಳಿದಂತೆ ನಗರದಲ್ಲಿನ ಉಳಿದೆಲ್ಲಾ ಅಂಗಡಿಗಳು ಸಂಪೂರ್ಣ ಬಂದ್ ಆಗಿವೆ. ಜೊತೆಗೆ ಪೂರ್ವಾನುಮತಿ ಪಡೆದ ಮದುವೆ ಸಮಾರಂಭಗಳಿಗೆ ಅವಕಾಶ ನೀಡಲಾಗಿದೆ.