ಚಿಕ್ಕೋಡಿ: ಬ್ಯಾಂಕ್ ನೌಕರನೊಬ್ಬ ಆಯತಪ್ಪಿ ಮನೆ ಮೇಲಿಂದ ಬಿದ್ದು ಸಾವನಪ್ಪಿದ ಘಟನೆ ದಾವಣಗೆರೆಯ ವಿವೇಕಾನಂದ ನಗರದಲ್ಲಿ ನಡೆದಿದೆ. ಗೋಕಾಕ ಮಾಜಿ ಶಾಸಕ ಎಂ.ಎಲ್.ಮುತ್ತೆಣ್ಣವರ ಪುತ್ರ ಮೃತಪಟ್ಟವನಾಗಿದ್ದಾನೆ.
ಮನೆ ಮೇಲಿಂದ ಬಿದ್ದು ಮಾಜಿ ಶಾಸಕರ ಪುತ್ರ ಸಾವು - ಗೋಕಾಕ ಮಾಜಿ ಶಾಸಕ
ಬೆಳಗಾವಿ ಜಿಲ್ಲೆಯ ಗೋಕಾಕ ಮಾಜಿ ಶಾಸಕ ಎಂ.ಎಲ್.ಮುತ್ತೆಣ್ಣವರ ಪುತ್ರ ಮನೆ ಮೇಲಿಂದ ಆಯತಪ್ಪಿ ಬಿದ್ದು ಮೃತಪಟ್ಟ ಘಟನೆ ದಾವಣಗೆರೆಯಲ್ಲಿ ನಡೆದಿದೆ.
ಶಾಸಕರ ಪುತ್ರ ಸಾವು
ಬೆಳಗಾವಿ ಜಿಲ್ಲೆಯ ಗೋಕಾಕ ಮಾಜಿ ಶಾಸಕ ಎಂ.ಎಲ್.ಮುತ್ತೆಣ್ಣವರ ಪುತ್ರ ಸತ್ಯಾನಂದ ಮುತ್ತೆಣ್ಣವರ (35) ಮೃತ ವ್ಯಕ್ತಿ. ದಾವಣಗೆರೆ ನಗರದಲ್ಲಿ ಕೆನರಾ ಬ್ಯಾಂಕ್ ಮ್ಯಾನೇಜರ್ ಆಗಿ ಅವರು ಕೆಲಸ ನಿರ್ವಹಿಸುತ್ತಿದ್ದ. ಮನೆಯ ಮಹಡಿಯ ನೀರಿನ ವಾಲ್ ಆನ್ ಮಾಡಲು ಹೋಗಿ ಆಯ ತಪ್ಪಿ ಕೆಳಗೆ ಬಿದ್ದು ಗಂಭೀರ ಗಾಯಗೊಂಡಿದ್ದ. ಜಿಲ್ಲಾಸ್ಪತ್ರೆಗೆ ಸಾಗಿಸುವಾಗ ಮಾರ್ಗ ಮಧ್ಯದಲ್ಲಿ ಸಾವನಪ್ಪಿದ್ದಾನೆ ಎಂದು ತಿಳಿದುಬಂದಿದೆ.
ಮೃತನ ಅಂತ್ಯಕ್ರಿಯೆ ಗೋಕಾಕ ತಾಲೂಕಿನ ಸ್ವಗ್ರಾಮ ಈರನಹಟ್ಟಿ ಗ್ರಾಮದಲ್ಲಿ ನಡೆಯಲಿದೆ.