ಗೋಕಾಕ:ಪಕ್ಷೇತರ ಅಭ್ಯರ್ಥಿಯಾಗಿ ಗೋಕಾಕ್ ಕ್ಷೇತ್ರದ ಉಪಚುನಾವಣೆಗೆ ಸ್ಪರ್ಧಿಸಿದ್ದ ಪ್ರಕಾಶ ಭಾಗೋಜಿ ನಾಮಪತ್ರ ಹಿಂದಕ್ಕೆ ಪಡೆಯದೆ ಅಶೋಕ ಪೂಜಾರಿಗೆ ಬೆಂಬಲಿಸುತ್ತೇನೆ ಎಂದು ಘೋಷಿಸಿದರು.
ಪಕ್ಷೇತರ ಅಭ್ಯರ್ಥಿ ಪ್ರಕಾಶ ಭಾಗೋಜಿ ದಿನದಿಂದ ದಿನಕ್ಕೆ ಕುತೂಹಲ ಮೂಡಿಸುವ ಜತೆಗೆ ರಾಜ್ಯದಲ್ಲಿಯೇ ಗಮನ ಸೆಳೆಯುತ್ತಿರುವ ಗೋಕಾಕ್ ಕ್ಷೇತ್ರದಲ್ಲಿ, ಇಂದು ಬಿಜೆಪಿ ಘಟಾನುಘಟಿ ನಾಯಕರು ಅಶೋಕ ಪೂಜಾರಿ ನಾಮಪತ್ರ ಹಿಂಪಡೆಯುವಂತೆ ಮನವೊಲಿಸಲು ಹರಸಾಹಸ ಪಟ್ಟರು, ಯಶಸ್ವಿಯಾಗದೇ ವಾಪಸ್ಸಾಗಿದ್ದಾರೆ.
ನಮ್ಮ ಮುಖಂಡರು ಅಶೋಕ ಪೂಜಾರಿಗೆ ಬೆಂಬಲಿಸುವಂತೆ ಸೂಚಿಸಿದ್ದಾರೆ. ನಾನು ಕಣದಲ್ಲಿ ಇದ್ದರು ನನಗೆ ಮತದಾರರು ಮತ ಚಲಾಯಿಸ ಬೇಡಿ. ಅಶೋಕ ಪೂಜಾರಿಗೆ ಮತ ನೀಡಿ ಮತ್ತು ನಾನು ಅವರ ಪರವಾಗಿ ಪ್ರಚಾರ ಕೂಡ ಮಾಡುತ್ತೇನೆ ಎಂದರು.
ಕಣದಲ್ಲಿ ಇರುವ 11 ಅಭ್ಯರ್ಥಿಗಳು: ಬಿಜೆಪಿ-ರಮೇಶ್ ಜಾರಕಿಹೊಳಿ, ಕಾಂಗ್ರೆಸ್-ಲಖನ ಜಾರಕಿಹೊಳಿ, ಜೆಡಿಎಸ್-ಅಶೋಕ ಪೂಜಾರಿ, ಹಿಂದುಸ್ತಾನ ಜನತಾ ಪಾರ್ಟಿ- ದೀಪಕ ಉರ್ಫ ಶ್ರೀವೆಂಕಟೇಶ್ವರ ಮಹಾಸ್ವಾಮಿ, ಉತ್ತಮ ಪ್ರಜಾಕೀಯ ಪಾರ್ಟಿ-ಸಂತೋಷ ನಂದೂರ, ಪಕ್ಷೇತ-ಅಶೋಕ ಹಂಜಿ, ಗುರುಪುತ್ರ ಕುಳ್ಳೂರ, ಪ್ರಕಾಶ ಭಾಗೋಜಿ, ರಾಮಪ್ಪ ಕುರಬೇಟ, ಸತೀಶ ಪೂಜಾರಿ, ಸಂಜು ಕುರಬೇಟ ಕಣದಲ್ಲಿ ಇದ್ದಾರೆ.