ಬೆಳಗಾವಿ:ಅಧಿಕಾರಿಗಳು ಅಂದರೆ ಜನ ಸಾಮಾನ್ಯರಿಂದ ಕೊಂಚ ದೂರ ಎಂಬ ಆಪಾದನೆಗಳಿವೆ. ಈ ಮಧ್ಯೆ ಮೆಚ್ಚಿನ ಅಧಿಕಾರಿಯನ್ನು ತೆರೆದ ವಾಹನದಲ್ಲಿ ಮೆರವಣಿಗೆ ಮಾಡಿ ಜನರು ಅಭಿಮಾನ ಮೆರೆದಿರುವ ಅಪರೂಪದ ಘಟನೆ ನಗರದ ಮಂಡಳಿಯಲ್ಲಿ ನಡೆದಿದೆ. ದಂಡು ಮಂಡಳಿಯ ಸಿಇಒ ಆಗಿ ಕಾರ್ಯ ನಿರ್ವಹಿಸುತ್ತಿದ್ದ ದಿವ್ಯಾ ಶಿವರಾಂಗೆ ದೆಹಲಿಯ ಪ್ರಧಾನಿ ಕಚೇರಿಗೆ ವರ್ಗಾವಣೆಯಾಗಿದೆ.
ಪ್ರಧಾನಿ ಕಚೇರಿಗೆ ವರ್ಗ: ನೆಚ್ಚಿನ ಅಧಿಕಾರಿ ದಿವ್ಯಾ ಶಿವರಾಂಗೆ ಮೆರವಣಿಗೆ ಮೂಲಕ ಬೀಳ್ಕೊಟ್ಟ ಜನ - undefined
ಅಧಿಕಾರಿಯೊಬ್ಬರನ್ನ ತರೆದ ವಾಹನದಲ್ಲಿ ಮೆರವಣಿಗೆ ಮಾಡಿ ಬೀಳ್ಕೊಟ್ಟಿರುವ ಅಪರೂಪದ ಘಡನೆಯೊಂದು ಕುಂದಾನಗರಿಯಲ್ಲಿ ನಡೆದಿದೆ.
ಬೀಳ್ಕೊಡುಗೆ
ಈ ಹಿನ್ನೆಲೆಯಲ್ಲಿ ನಿನ್ನೆ ಅವರಿಗೆ ಬೀಳ್ಕೊಡುಗೆ ಸಮಾರಂಭ ಏರ್ಪಡಿಲಾಗಿತ್ತು. ಈ ವೇಳೆ, ನೂರಾರು ಅಭಿಮಾನಿಗಳು, ಕಚೇರಿಯಿಂದ ನಿವಾಸದವರೆಗೆ ತೆರೆದ ವಾಹನದಲ್ಲಿ ದಿವ್ಯ ಶಿವರಾಂ ಅವರನ್ನು ಮೆರವಣಿಗೆ ಮಾಡಿ ಅಭಿಮಾನ ಮೆರೆದಿದ್ದಾರೆ. ಇಷ್ಟೊಂದು ಜನರ ಪ್ರೀತಿಯನ್ನು ಕಂಡ ದಿವ್ಯಾ ಶಿವರಾಂ ಒಂದು ಕ್ಷಣ ಭಾವುಕಾರದರು.
ಅಂದ‘ಹಾಗೆ ದಿವ್ಯಾ ಶಿವರಾಂ ಕಳೆದ ಮೂರು ವರ್ಷಗಳಿಂದ ದಂಡು ಮಂಡಳಿಯಲ್ಲಿ ಸಿಇಓ ಆಗಿ ಕಾರ್ಯ ನಿರ್ವಹಿಸಿದ್ರು. ತಮ್ಮ ಅವಧಿಯಲ್ಲಿ ಅನೇಕ ಜನಪರ ಕೆಲಸ ಮಾಡಿ ಎಲ್ಲರ ವಿಶ್ವಾಸ ಗಳಿಸಿದರು.