ಕರ್ನಾಟಕ

karnataka

ETV Bharat / state

ಕೈ ಕಾಲು ಕಟ್ಟಿ ಬಾಲಕಿ ಕೊಲೆ ಮಾಡಿದ ಪಕ್ಕದ ಮನೆ ಯುವಕ! - ಬಾಲಕಿ ಲಕ್ಷ್ಮೀ ಸಿದ್ದಪ್ಪಾ ಅತಾಲಟ್ಟಿ

ಇದಕ್ಕಿದ್ದಂತೆ ನಾಪತ್ತೆಯಾಗಿದ್ದ ಬಾಲಕಿ ಶವವಾಗಿ ಪತ್ತೆಯಾಗಿದ್ದಾಳೆ. ಬಾಲಕಿಯ ನೆರೆ ಮನೆಯ ಯುವಕ ಭರತೇಶ ಮಿರ್ಜಿ ಆಕೆಯ ಕೈ ಕಾಲು ಕಟ್ಟಿ ಕೊಲೆ ಮಾಡಿದ್ದಾನೆ.

ಕೈ ಕಾಲು ಕಟ್ಟಿ ಬಾಲಕಿ

By

Published : Oct 18, 2019, 5:11 AM IST

Updated : Oct 18, 2019, 7:50 AM IST

ಚಿಕ್ಕೋಡಿ: ಇದ್ದಕ್ಕಿದ್ದಂತೆ ಮಗಳು ಕಾಣೆಯಾಗಿದ್ದಾಳೆ. ಯಾರೋ ಕಿಡ್ನ್ಯಾಪ್ ಮಾಡಿರಬಹುದು ಎಂಬ ಶಂಕೆಯಿಂದ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಿಸಿದ ಪೋಷಕರಿಗೆ ತಮ್ಮ ಮಗಳು ಶವವಾಗಿ ಪತ್ತೆಯಾಗಿದ್ದು ತೀವ್ರ ಆಘಾತ ತರಿಸಿದೆ.

ಅಕ್ಕಪಕ್ಕದ ಊರು ಕೆರೆಗಳಲ್ಲಿ ಹುಡುಕಾಟ ನಡೆಸಿದ್ದ ಪೋಷಕರಿಗೆ ತಮ್ಮ ಮನೆಯ ಹತ್ತಿರದ ಬಾವಿಯಲ್ಲಿ ಮಗಳು ಕೈ ಕಾಲು ಕಟ್ಟಿ ಕೊಲೆ ಮಾಡಿರುವ ರೀತಿಯಲ್ಲಿ ಪತ್ತೆಯಾಗಿದ್ದಾಳೆ.

ಕೈ ಕಾಲು ಕಟ್ಟಿ ಬಾಲಕಿ ಕೊಲೆ

ಬೆಳಗಾವಿ ಜಿಲ್ಲೆಯ ರಾಯಬಾಗ ತಾಲೂಕಿನ ಪರಮಾನಂದವಾಡಿ ಗ್ರಾಮದ ಎಂಟು ವರ್ಷದ ಬಾಲಕಿ ಲಕ್ಷ್ಮೀ ಸಿದ್ದಪ್ಪಾ ಅತಾಲಟ್ಟಿ ಮನೆ ಮುಂದೆ ಎಂದಿನಂತೆ ಆಟವಾಡಿಕೊಂಡಿದ್ದಳು. ಇದ್ದಕ್ಕಿದ್ದಂತೆ ಬಾಲಕಿ ನಾಪತ್ತೆಯಾಗಿರೋದು ಮನೆಯವರ ಅನುಮಾನಕ್ಕೆ ಕಾರಣವಾಗಿತ್ತು. ಯಾರೋ ತಮ್ಮ ಮಗಳನ್ನು ಅಪಹರಣ ಮಾಡಿಕೊಂಡು ಹೋಗಿದ್ದಾರೆ ಎಂಬ ಅನುಮಾನದಿಂದ ಬಾಲಕಿಯ ಪೋಷಕರು ಘಟನೆ ನಡೆದ ದಿನ ಅಕ್ಟೋಬರ್​​​ 15 ರಂದು ಕುಡಚಿ ಪೊಲೀಸ್ ಠಾಣೆಯಲ್ಲಿ ಅಪಹರಣ ಪ್ರಕರಣ ದಾಖಲಿಸಿದ್ದರು.

ಪೊಲೀಸರು ಹಾಗೂ ಕುಟುಂಬಸ್ಥರು ಸೇರಿಕೊಂಡು ಅಕ್ಕಪಕ್ಕದ ಊರು ಕೆರೆಗಳಲ್ಲಿ ಹುಡುಕಾಟ ನಡೆಸಿದ್ದರು. ಕುಟುಂಬಸ್ಥರಿಗೆ ನೆರೆ ಹೊರೆಯ ಜನ ಕೂಡ ಸಾಥ್​​ ನೀಡಿದ್ದರು. ಹೀಗೆ ನೆರವಾದವರ ಪೈಕಿ ಓರ್ವ ವ್ಯಕ್ತಿಯ ಮೇಲೆ ಪೊಲೀಸರಿಗೆ ಅನುಮಾನ ಮೂಡಿತ್ತು. ಆತ ಬೇರೆ ಯಾರೂ ಆಗಿರಲಿಲ್ಲ. ಬಾಲಕಿ ನೆರೆ ಮನೆಯವನೇ ಆಗಿದ್ದ. ಇನ್ನೂ ಪೊಲೀಸರು ನೆರೆ ಮನೆಯ ಭರತೇಶ ಮಿರ್ಜಿ ಎಂಬಾತನನ್ನು ವಿಚಾರಣೆ ಮಾಡಿದಾಗ ತಾನೇ ಆಕೆಯ ಕೊಲೆ ಮಾಡಿ ಕೈ ಕಾಲು ಕಟ್ಟಿ ಬಾವಿಗೆ ಎಸೆದಿರೋದಾಗಿ ಬಾಯಿ ಬಿಟ್ಟಿದ್ದಾನೆ.

ಮನೆಯ ಹತ್ತಿರದ ಬಾವಿಯಲ್ಲಿ ಬಾಲಕಿಯ ಶವ ಪತ್ತೆಯಾಗಿದೆ. ಪೊಲೀಸರು ಸ್ಥಳೀಯರ ಸಹಾಯದೊಂದಿಗೆ ಬಾಲಕಿಯ ಮೃತ ದೇಹ ಹೊರ ತೆಗೆದು ಮರಣೋತ್ತರ ಪರೀಕ್ಷೆಗಾಗಿ ಬೆಳಗಾವಿ ಜಿಲ್ಲಾ ಆಸ್ಪತ್ರೆಗೆ ಕಳುಹಿಸಿದ್ದಾರೆ. ಮರಣೋತ್ತರ ಪರೀಕ್ಷೆ ಬಂದ ಬಳಿಕವೇ ಬಾಲಕಿಯ ಕೊಲೆಗೆ ನಿಖರ ಕಾರಣ ಗೊತ್ತಾಗಲಿದೆ ಎಂದು ಪೊಲೀಸರು ತಿಳಿಸಿದ್ದಾರೆ.

Last Updated : Oct 18, 2019, 7:50 AM IST

ABOUT THE AUTHOR

...view details