ಕರ್ನಾಟಕ

karnataka

By

Published : May 31, 2023, 1:42 PM IST

ETV Bharat / state

ಹಾವು ಕಡಿತದಿಂದ ಪವಾಡ ರೀತಿಯಲ್ಲಿ ಪಾರಾದ ಬಾಲಕಿ!: ವಿಡಿಯೋ ನೋಡಿ

ಮನೆ ಹೊಸ್ತಿಲ ಬಳಿ ಇದ್ದ ಹಾವಿನಿಂದ ಬಾಲಕಿಯೋರ್ವಳು ಕ್ಷಣಾರ್ಧದಲ್ಲಿ ಬಚಾವ್​ ಆಗಿರುವ ಘಟನೆ ಬೆಳಗಾವಿಯಲ್ಲಿ ನಡೆದಿದೆ.

ಹಾವು ಕಡಿತದಿಂದ ಬಾಲಕಿ ಬಚಾವ್
ಹಾವು ಕಡಿತದಿಂದ ಬಾಲಕಿ ಬಚಾವ್

ಹಾವು ಕಡಿತದಿಂದ ಬಾಲಕಿ ಬಚಾವ್!

ಬೆಳಗಾವಿ: ಬಾಲಕಿಯೋರ್ವಳು ಹಾವು ಕಡಿತದಿಂದ ಪವಾಡ ರೀತಿಯಲ್ಲಿ ಪಾರಾಗಿರುವ ಘಟನೆ ಬೆಳಗಾವಿ ತಾಲೂಕಿನ ಹಲಗಾ ಗ್ರಾಮದಲ್ಲಿ ನಡೆದಿದೆ. ಮನೆ ಬಾಗಿಲಿನ ಸಮೀಪವೇ ಇದ್ದ ಹಾವು ಗಮನಿಸದೇ ಮನೆಯೊಳಗೆ ಪ್ರವೇಶಿಸಲು ಬಾಲಕಿ ಮುಂದಾಗಿದ್ದಾಳೆ. ಇನ್ನೇನು ಬಾಲಕಿ ಹೊಸ್ತಿಲ ಬಳಿ ಬರುತ್ತಿದ್ದಂತೆ ಹಾವು ಹೆಡೆ ಎತ್ತಿದೆ.

ಇದನ್ನು ಗಮನಿಸಿದ ಮನೆ ಸದಸ್ಯರು ಬಾಲಕಿಗೆ ಹೊಸ್ತಿಲ ಬಳಿ ಹಾವು ಇರುವ ವಿಷಯ ತಿಳಿಸಿದ್ದಾರೆ. ಕೂಡಲೇ ಎಚ್ಚೆತ್ತ ಬಾಲಕಿ ಹಾವು ನೋಡಿ ಹೆದರಿ ಮನೆಯೊಳಗೆ ಓಡಿ ಹೋಗಿದ್ದಾಳೆ. ಈ ಮೂಲಕ ಕ್ಷಣಾರ್ಧದಲ್ಲೇ ಹಾವು ಕಡಿತದಿಂದ ಪಾರಾಗಿದ್ದಾಳೆ. ಸೋಮವಾರ ಸಂಜೆ ನಡೆದ ಘಟನೆಯ ದೃಶ್ಯಗಳು ಸಿಸಿ ಕ್ಯಾಮರಾದಲ್ಲಿ ಸೆರೆಯಾಗಿವೆ. ಹಲಗಾ ನಿವಾಸಿ ಸುಹಾಸ್ ಸೈಬಣ್ಣವರ್ ಎಂಬವರ ಮನೆಯಲ್ಲಿ ಘಟನೆ ನಡೆದಿದೆ. ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ವೈರಲ್​ ಆಗಿದೆ.

ಇತ್ತೀಚಿನ ಘಟನೆಗಳು..: ಚಿಕ್ಕಮಗಳೂರಿನಲ್ಲಿ ಮೇ 25 ರಂದು ಅಡುಗೆ ಕೋಣೆಯಲ್ಲಿ ನಾಗರ ಹಾವೊಂದು ಹೆಡೆ ಬಿಚ್ಚಿ ನಿಂತು ಆತಂಕ ಸೃಷ್ಟಿಸಿತ್ತು. ಮೂಡಿಗೆರೆಯ ಕೃಷ್ಣಾಪುರದ ನಿವಾಸಿ ಸುಶೀಲ ಎಂಬವರ ಮನೆಯಲ್ಲಿ ಹಾವು ಪತ್ತೆಯಾಗಿತ್ತು. ಅಡುಗೆ ಮಾಡಲು ಹೋಗಿದ್ದ ವೇಳೆ ಹಾವು ಹೆಡೆ ಬಿಚ್ಚಿ ಕುಳಿತಿದ್ದು ಕಂಡು ಬಂದಿತ್ತು. ಕೂಡಲೇ ಉರಗ ತಜ್ಞ ಆರಿಫ್​ ಅವರಿಗೆ ಮಾಹಿತಿ ನೀಡಲಾಯಿತು. ಸ್ಥಳಕ್ಕಾಗಮಿಸಿದ ಉರಗ ತಜ್ಞ ಕಾರ್ಯಾಚರಣೆ ನಡೆಸಿ ಹಾವg ರಕ್ಷಣೆ ಮಾಡಿದ್ದರು. ಸೆರೆಹಿಡಿದ ನಾಗರನನ್ನು ಸುರಕ್ಷಿತವಾಗಿ ಚಾರ್ಮಾಡಿ ಘಾಟ್ ಅರಣ್ಯ ಪ್ರದೇಶಕ್ಕೆ ಅರಣ್ಯ ಇಲಾಖೆ ಸಿಬ್ಬಂದಿಯ ಸಮ್ಮುಖದಲ್ಲಿ ಬಿಡಲಾಗಿತ್ತು.

ಬಾಯಿಯಿಂದ ವಿಷ ಹೀರಿ ತಾಯಿಯ ರಕ್ಷಣೆ:ಕೆಲವು ದಿನಗಳ ಹಿಂದೆ ದಕ್ಷಿಣ ಕನ್ನಡ ಜಿಲ್ಲೆಯ ಪುತ್ತೂರಿನಲ್ಲಿ ಮಹಿಳೆಯೋರ್ವರಿಗೆ ವಿಷಪೂರಿತ ಹಾವು ಕಚ್ಚಿದ ಸಂದರ್ಭದಲ್ಲಿ ಮಗಳು ಬಾಯಿಯಿಂದ ವಿಷ ತೆಗೆದು ತಾಯಿಯನ್ನು ರಕ್ಷಿಸಿದ್ದರು. ಅಲ್ಲದೇ ಆಕೆ ಆ ಕ್ಷಣಕ್ಕೆ ಹಾವು ಕಡಿದಾಗ ಮಾಡಬೇಕಾದ ಪ್ರಥಮ ಚಿಕಿತ್ಸೆಯ ಜೊತೆಗೆ, ತುರ್ತಾಗಿ ಆಸ್ಪತ್ರೆಗೂ ಸೇರಿಸಿದ್ದರು.

ಎಟ್ಯಡ್ಕ ನಿವಾಸಿ ಸತೀಶ್ ರೈ ಎಂಬವರ ಪತ್ನಿ ಮಮತಾ ಎಸ್.ರೈ ಅವರಿಗೆ ಕೆಲಸದ ವೇಳೆ ನಾಗರಹಾವು ಕಚ್ಚಿತ್ತು. ಈ ಸಂದರ್ಭದಲ್ಲಿ ಸಮಯಪ್ರಜ್ಞೆ ಮೆರೆದ ಮಗಳು ಶ್ರಮ್ಯ ರೈ ಕೂಡಲೇ ಬಾಯಿಯಿಂದ ವಿಷವನ್ನು ಹೊರ ಹೀರಿದ್ದಾರೆ. ಮಮತಾ ರೈ ಕೆಯ್ಯೂರು ಗ್ರಾ.ಪಂ ಸದಸ್ಯೆಯಾಗಿದ್ದು, ಸಾಮಾಜಿಕ ಚಟುವಟಿಕೆಯಲ್ಲಿ ತೊಡಗಿಸಿಕೊಂಡಿದ್ದಾರೆ. ಪುತ್ರಿ ಶ್ರಮ್ಯ ರೈ ಪುತ್ತೂರು ವಿವೇಕಾನಂದ ಕಾಲೇಜಿನಲ್ಲಿ ಓದುತ್ತಿದ್ದಾರೆ.

ಮುದ್ದೇಬಿಹಾಳದಲ್ಲಿ ನಡೆದ ಮತ್ತೊಂದು ಘಟನೆಯಲ್ಲಿಯುವಕ ತನ್ನನ್ನು ಕಚ್ಚಿದ ಹಾವನ್ನು ಡಬ್ಬಿಯೊಂದರಲ್ಲಿ ಹಿಡಿದು ಆಸ್ಪತ್ರೆಗೆ ಕೊಂಡೊಯ್ದು ಚಿಕಿತ್ಸೆ ಪಡೆದುಕೊಂಡಿದ್ದ. ತಾಲೂಕಿನ ತಂಗಡಗಿ ಗ್ರಾಮದ ಯುವಕ ಭಾಷಾ ಎಂಬುವವರು ಹಾವುಗಳನ್ನು ಹಿಡಿಯುತ್ತಿದ್ದರು. ಬಸವನ ಬಾಗೇವಾಡಿ ತಾಲೂಕಿನ ಕಣಕಾಲ ಗ್ರಾಮದಲ್ಲಿ ಹಾವು ಹಿಡಿಯುವ ವೇಳೆ ನಾಗರಹಾವು ಕೈಗೆ ಕಚ್ಚಿತ್ತು. ಆ ನಾಗರಹಾವನ್ನು ಹಿಡಿದು ಡಬ್ಬಿಯಲ್ಲಿ ಹಾಕಿಕೊಂಡು ಸರ್ಕಾರಿ ಆಸ್ಪತ್ರೆಗೆ ತೆರಳಿ ಚಿಕಿತ್ಸೆ ಪಡೆದುಕೊಂಡಿದ್ದ.

ಇದನ್ನೂ ಓದಿ:ಹಾವು ಕಚ್ಚಿದ ಭಾಗಕ್ಕೆ ಬಾಯಿ ಇಟ್ಟು ರಕ್ತ ತೆಗೆದು ಅಮ್ಮನ ಪ್ರಾಣ ರಕ್ಷಿಸಿದ ಮಗಳು!

ABOUT THE AUTHOR

...view details