ಚಿಕ್ಕೋಡಿ:ಹೊಟ್ಟೆ ನೋವು ತಾಳಲಾರದೆ ಯುವತಿಯೋರ್ವಳು ಆತ್ಮಹತ್ಯೆ ಮಾಡಿಕೊಂಡಿರುವ ಘಟನೆ ಬೆಳಗಾವಿ ಜಿಲ್ಲೆಯ ಹುಕ್ಕೇರಿ ಪಟ್ಟಣದಲ್ಲಿ ನಡೆದಿದೆ.
ಚಿಕ್ಕೋಡಿ; ಹೊಟ್ಟೆ ನೋವು ತಾಳಲಾರದೆ ಯುವತಿ ಆತ್ಮಹತ್ಯೆ - Belgavi latest news
ಬೆಳಗಾವಿ ಜಿಲ್ಲೆಯ ಹುಕ್ಕೇರಿ ಪಟ್ಟಣದಲ್ಲಿ ಹೊಟ್ಟೆನೋವು ತಾಳಲಾರದೆ ಯುವತಿ ಆತ್ಮಹತ್ಯೆಗೆ ಶರಣಾಗಿರುವ ಘಟನೆ ನಡೆದಿದೆ.

Police station
ಹುಕ್ಕೇರಿ ಪಟ್ಟಣದ ಪ್ರಿಯಾಂಕಾ ಖಾನಗೌಡರ (18) ಆತ್ಮಹತ್ಯೆ ಮಾಡಿಕೊಂಡ ಯುವತಿ. ಈಕೆ ಹೊಟ್ಟೆನೋವಿನಿಂದ ಬಳಲುತ್ತಿದ್ದು, ಚಿಕಿತ್ಸೆ ಸಹ ಪಡೆದಿದ್ದಳು. ಆದರೆ ವಾಸಿಯಾಗಿರಲಿಲ್ಲ. ಇದರಿಂದ ಜುಗುಪ್ಸೆಗೊಂಡಿದ್ದ ಯುವತಿ ಆತ್ಮಹತ್ಯೆಗೆ ಶರಣಾಗಿದ್ದಾಳೆ ಎನ್ನಲಾಗಿದೆ.
ಈ ಕುರಿತು ಹುಕ್ಕೇರಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.