ಅಥಣಿ: ಬೆಳಗಾವಿ ಜಿಲ್ಲೆಯ ಅಥಣಿ ತಾಲೂಕಿನ ಘಟನಟ್ಟಿ ಗ್ರಾಮದ ಮನೆಯೊಂದು ಪವಾಡ ಹಾಗೂ ದೈವ ಪುರುಷ ಬಬಲಾದಿ ಚಂದ್ರಯ್ಯ ಸ್ವಾಮೀಜಿಗಳು ನೆಲೆಯಾಗಿದಾರಂತೆ. ಗ್ರಾಮಸ್ಥರು ಈ ಸಿದ್ದಿ ದೇವನಿಗೆ ಶರಣಾಗಿದ್ದಾರಂತೆ. ಪ್ರತಿ ದಿನವೂ ಗ್ರಾಮಸ್ಥರು ಭಕ್ತಿ ಭಾವದಿಂದ ಈ ದೇವರಿಗೆ ನಮಸ್ಕರಿಸಿ ಮುಂದಿನ ಕೆಲಸ ಮಾಡುತ್ತಾರಂತೆ.
ಪವಾಡ ಮಠವೆಂದೇ ಪ್ರಸಿದ್ಧಿ ಘಟನಟ್ಟಿ ಮಠ ವಿಜಯಪುರ ಜಿಲ್ಲೆಯ ಬಬಲೇಶ್ವರ ತಾಲೂಕಿನ ಹೊಳೆ ಬಬಲಾದಿ ಚಕ್ರವರ್ತಿ ಸದಾಶಿವ ಅವರ ಕಾಲಜ್ಞಾನಕ್ಕೆ ಹೆಸರು ವಾಸಿಯಾಗಿರುವ ಪರಂಪರೆಯಂತೆ, ಇಲ್ಲಿ ಬಬಲಾದಿ ಚಂದ್ರಯ್ಯ ಸ್ವಾಮೀಜಿ ಹೆಸರುವಾಸಿಯಾಗಿದ್ದಾರೆ. ಸಕಲ ಭಕ್ತರ ಕಷ್ಟಗಳನ್ನು ಪವಾಡ ರೀತಿಯಲ್ಲಿ ಪರಿಹರಿಸುತ್ತಿರುವ ದೈವ ಪುರುಷ, ನಮ್ಮ ಗ್ರಾಮವನ್ನು ಮಹಾಮಾರಿ ರೋಗದಿಂದ ಕಾಪಾಡಿದರು ಅಂತಿದಾರೆ ಊರಿನ ಜನರು.
ಮಹಾರಾಷ್ಟ್ರ ಗಡಿ ಹೊಂದಿರುವ ಅಥಣಿ ತಾಲೂಕಿನಲ್ಲಿ ಕೊರೊನಾ ಎರಡನೇ ಅಲೆಯ ಅಬ್ಬರದ ವೇಳೆ ಕೆಲ ಗ್ರಾಮದ ಜನರು ತತ್ತರಿಸಿದ್ದರು. ಆದ್ರೆ, ಇಲ್ಲಿ ಅಂತಹ ಸಮಸ್ಯೆ ಕಂಡು ಬಂದಿಲ್ಲ. ಭಕ್ತರು ಅಂಬಲಿ ಜೊತೆಗೆ ತೆಂಗಿನಕಾಯಿ ಅರ್ಪಣೆ ಮಾಡುತ್ತಾರಂತೆ. ಘಟನಟ್ಟಿ ಗ್ರಾಮದ ಜನರಿಗೆ ಯಾವುದೇ ಅನಾಹುತ ಸಂಭವಿಸಿದಂತೆ ಸ್ವಾಮೀಜಿಗಳು ಕಾಪಾಡುತ್ತಿದ್ದಾರೆ ಎನ್ನುವ ನಂಬಿಕೆ ಭಕ್ತರದಾಗಿದೆ. ಹಲವು ಜನರಿಗೆ ಬೇಕಾದ ವರಗಳನ್ನು ದಯಪಾಲಿಸುವ ಈ ದೇವರಿಗೆ ನಿತ್ಯವೂ ಸ್ಥಳೀಯರ ಜತೆಗೆ ಅಂತಾರಾಜ್ಯ ಜನರು ಬಂದು ದೇವರ ದರ್ಶನ ಮಾಡುತ್ತಾರೆ.
ಇದನ್ನೂ ಓದಿ:ಬ್ಯಾಂಕಿಂಗ್ ಪರೀಕ್ಷೆ ಕನ್ನಡದಲ್ಲಿ ನಡೆಸದೇ ಕೇಂದ್ರ ಸರ್ಕಾರದಿಂದ ಕನ್ನಡಿಗರಿಗೆ ದ್ರೋಹ: ಸಿದ್ದರಾಮಯ್ಯ
ಶತಮಾನದ ಹಿಂದೆ ಮಹಾ ಸಿದ್ದಿ ಪುರುಷ ಚಂದ್ರಯ್ಯ ಸ್ವಾಮೀಜಿಗಳಿಗೆ ಗ್ರಾಮದ ಓರ್ವ ರೈತ ಕುಟುಂಬ ನೀವು ಇಲ್ಲೇ ನೆಲೆಸಿರೆಂದು ಮನೆ ಬಿಟ್ಟು ಕೊಟ್ಟಿದ್ದು, ಸದ್ಯ ಮಠವಾಗಿ ಮಾರ್ಪಾಡಾಗಿದೆ. ಗ್ರಾಮದ ಜನರು ಯಾವುದೇ ಜಾತಿ, ಧರ್ಮ ಎನ್ನದೇ ನಿತ್ಯ ಪೂಜಾ ಕೈಂಕರ್ಯಗಳು ನಡೆಸುತ್ತಾ, ತಮ್ಮ ತಮ್ಮ ದಿನನಿತ್ಯದ ಕಾರ್ಯಗಳಲ್ಲಿ ಭಾಗವಹಿಸುವುದು ವಾಡಿಕೆ ಆಗಿದೆ. ಜೊತೆಗೆ ಪವಾಡ ಮಠವೆಂದು ಘಟನಟ್ಟಿ ಮಠ ಪ್ರಸಿದ್ಧಿ ಪಡೆದಿದೆ.