ಚಿಕ್ಕೋಡಿ :ತಾಲೂಕಿನಲ್ಲಿ ಗಣೇಶೋತ್ಸವ ಸಂಭ್ರಮ ಜೋರಾಗಿದೆ. ಹೀಗಾಗಿ, ವಿನಾಯಕನ ಮೂರ್ತಿಗಳ ಬೆಲೆ ಗಗನಕ್ಕೇರಿದೆ. ಪ್ರತಿವರ್ಷ ಮಹಾರಾಷ್ಟ್ರದಿಂದ ರಾಜ್ಯಕ್ಕೆ ಸಾವಿರಾರು ಸಂಖ್ಯೆಯಲ್ಲಿ ಗಣೇಶ ಮೂರ್ತಿಗಳು ಬರುತ್ತಿದ್ದವು. ಆದರೆ, ಈ ವರ್ಷ ನಿರಂತರ ಮಳೆಗೆ ನಲುಗಿರುವ ಮಹಾರಾಷ್ಟ್ರದಲ್ಲಿ ಕೋವಿಡ್ ಮೂರನೇ ಅಲೆಯೂ ಉಲ್ಬಣವಾಗಿದೆ. ಹೀಗಾಗಿ, ರಾಜ್ಯಕ್ಕೆ ಸಂಪರ್ಕ ಕಡಿತ ಮಾಡಲಾಗಿದೆ.
ಚಿಕ್ಕೋಡಿ ಉಪವಿಭಾಗದ ನಿಪ್ಪಾಣಿ, ಕಾಗವಾಡ, ಚಿಕ್ಕೋಡಿ, ರಾಯಬಾಗ ತಾಲೂಕಿನ ವಿವಿಧ ಗ್ರಾಮಗಳ ಗಣೇಶ ಮಂಡಳಿ ಹಾಗೂ ಸಣ್ಣಪುಟ್ಟ ಗಣೇಶ ಮೂರ್ತಿಗಳನ್ನು ತೆಗೆದುಕೊಳ್ಳುವ ಜನರು ಮಹಾರಾಷ್ಟ್ರದ ಸಾಂಗಲಿ, ಕೊಲ್ಲಾಪುರ ಜಿಲ್ಲೆಯನ್ನು ಅವಲಂಬಿಸಿದ್ದರು.