ಕರ್ನಾಟಕ

karnataka

ETV Bharat / state

ಗ್ರಾಪಂ ಚುನಾವಣೆಯಲ್ಲಿ ಕಾಂಗ್ರೆಸ್ ಬೆಂಬಲಿತ ಅಭ್ಯರ್ಥಿಗಳ ಗೆಲುವು : ಗಜಾನನ ಮಂಗಸೂಳಿ ಹರ್ಷ - gajanana mangasuli happy about athani village panchayath election results

ಈ ಬಾರಿ 12 ಪಂಚಾಯತ್‌ಗಳಲ್ಲಿ ಕಾಂಗ್ರೆಸ್ ಅಧಿಕಾರದ ಚುಕ್ಕಾಣಿ ಹಿಡಿಯಲಿದೆ. ಚುನಾಯಿತ ಅಭ್ಯರ್ಥಿಗಳು ಗ್ರಾಮದ ಅಭಿವೃದ್ಧಿಗಾಗಿ ಶ್ರಮಿಸಲಿ, ಪಕ್ಷದ ಹಿತದ ಜೊತೆ ಗ್ರಾಮದ ಅಭಿವೃದ್ಧಿಗೆ ಮಹತ್ವ ನೀಡುವುದು ಅಗತ್ಯವಾಗಿದೆ..

gajanana mangasuli reaction about gp election
ಗಜಾನನ ಮಂಗಸೂಳಿ ಹರ್ಷ

By

Published : Jan 1, 2021, 6:50 PM IST

ಅಥಣಿ: ತಾಲೂಕಿನ 41 ಗ್ರಾಮ ಪಂಚಾಯತ್​ಗಳ​ಲ್ಲಿ ಅತಿ ಹೆಚ್ಚು ಕಾಂಗ್ರೆಸ್ ಬೆಂಬಲಿತ ಅಭ್ಯರ್ಥಿಗಳು ಗೆಲುವನ್ನ ಕಂಡಿರುವ ಹಿನ್ನೆಲೆಯಲ್ಲಿ ಕಾಂಗ್ರೆಸ್ ಮುಖಂಡ ಗಜಾನನ ಮಂಗಸೂಳಿ ಸಂತಸ ವ್ಯಕ್ತಪಡಿಸಿದರು.

ಗಜಾನನ ಮಂಗಸೂಳಿ ಹರ್ಷ
ನಗರದಲ್ಲಿ ಈಟಿವಿ ಭಾರತ್ ಜೊತೆ ಮಾತನಾಡಿದ ಅವರು, ಅಥಣಿ ತಾಲೂಕಿನಲ್ಲಿ ಗ್ರಾಪಂ ಸಾರ್ವತ್ರಿಕ ಚುನಾವಣೆಯಲ್ಲಿ ಕಳೆದ ವರ್ಷಗಳಲ್ಲಿ ನಡೆದ ಚುನಾವಣೆಗಿಂತಲೂ ಈ ಬಾರಿ ಹೆಚ್ಚು ಕಾಂಗ್ರೆಸ್ ಬೆಂಬಲಿತ ಅಭ್ಯರ್ಥಿಗಳು ವಿಜಯ ಸಾಧಿಸಿದ್ದಾರೆ ಎಂದು ಮಾಹಿತಿ ನೀಡಿದರು. ‌ತಾಲೂಕಿನಲ್ಲಿ 200 ಜನ ಕಾಂಗ್ರೆಸ್ ಬೆಂಬಲಿತ ಅಭ್ಯರ್ಥಿಗಳು ವಿಜಯ ಸಾಧಿಸಿದ್ದಾರೆ. ಚುನಾವಣೆಯಲ್ಲಿ ಮತದಾನ ಮಾಡಿದ ಮತದಾರ ಪ್ರಭುವಿಗೆ ಕೃತಜ್ಞತೆ ಸಲ್ಲಿಸುತ್ತೇನೆ.
ವಿಜೇತ ಅಭ್ಯರ್ಥಿಗಳು ವೈಷಮ್ಯ ಸಾಧಿಸಬೇಡಿ, ಅಭಿವೃದ್ಧಿಗೆ ಹೆಚ್ಚಿನ ಆದ್ಯತೆ ನೀಡಿ ಎಂದು ನೂತನ ಸದಸ್ಯರಿಗೆ ಕಾಂಗ್ರೆಸ್​ ಮುಖಂಡ ಗಜಾನನ ಮಂಗಸೂಳಿ ಸಲಹೆ ನೀಡಿದರು. ಕಳೆದ ಚುನಾವಣೆಯಲ್ಲಿ ಕೇವಲ ನಾಲ್ಕು ಪಂಚಾಯತ್‌ಗಳಲ್ಲಿ ಕಾಂಗ್ರೆಸ್ ಬೆಂಬಲಿತರು ಅಧ್ಯಕ್ಷತೆ ಹೊಂದಿದ್ದರು.
ಈ ಬಾರಿ 12 ಪಂಚಾಯತ್‌ಗಳಲ್ಲಿ ಕಾಂಗ್ರೆಸ್ ಅಧಿಕಾರದ ಚುಕ್ಕಾಣಿ ಹಿಡಿಯಲಿದೆ. ಚುನಾಯಿತ ಅಭ್ಯರ್ಥಿಗಳು ಗ್ರಾಮದ ಅಭಿವೃದ್ಧಿಗಾಗಿ ಶ್ರಮಿಸಲಿ, ಪಕ್ಷದ ಹಿತದ ಜೊತೆ ಗ್ರಾಮದ ಅಭಿವೃದ್ಧಿಗೆ ಮಹತ್ವ ನೀಡುವುದು ಅಗತ್ಯವಾಗಿದೆ. ಪ್ರತಿಯೊಬ್ಬ ಸದಸ್ಯರು ಅಭಿವೃದ್ಧಿ ಗುರಿಯನ್ನಿಟ್ಟುಕೊಂಡು ಶ್ರಮಿಸಿ ಎಂದು ಹೇಳಿದ್ರು.

ABOUT THE AUTHOR

...view details