ಚಿಕ್ಕೋಡಿ (ಬೆಳಗಾವಿ):ನಾನು ಅಥಣಿ ಕಾಂಗ್ರೆಸ್ ಟಿಕೆಟ್ ಆಕಾಂಕ್ಷಿ ಆಗಿದ್ದೆ, ನನಗೆ ಟಿಕೆಟ್ ಸಿಗುತ್ತೆ ಎಂಬ ವಿಶ್ವಾಸ ಇತ್ತು. ನನಗೆ ಟಿಕೆಟ್ ಕೈ ತಪ್ಪಿದ್ದಕ್ಕೆ ಒಂದು ಕಡೆ ನೋವು ಇದೆ. ಮತ್ತೊಂದು ಕಡೆ ಖುಷಿಯಾಗಿದೆ. ಲಕ್ಷ್ಮಣ್ ಸವದಿ ಅವರು ಆಗಮಿಸಿ ಕಾಂಗ್ರೆಸ್ ಪಕ್ಷಕ್ಕೆ ಶಕ್ತಿ ತುಂಬಿದ್ದಾರೆ ಎಂದು ಅಥಣಿ ಕಾಂಗ್ರೆಸ್ ಟಿಕೆಟ್ ಆಕಾಂಕ್ಷಿ ಗಜಾನನ್ ಮಂಗಸೂಳಿ ಹೇಳಿದರು.
ಇದನ್ನೂ ಓದಿ:ರಮೇಶ್ ಜಾರಕಿಹೊಳಿಯಿಂದಲೇ ನಾನು ಬಿಜೆಪಿಯನ್ನು ಬಿಟ್ಟೆ: ಲಕ್ಷ್ಮಣ್ ಸವದಿ ಆರೋಪ
ಇಲ್ಲಿನ ತಮ್ಮ ನಿವಾಸದಲ್ಲಿ ಮಾಧ್ಯಮಗಳ ಜೊತೆಗೆ ಮಾತನಾಡಿದ ಅವರು, ನಾನು ಪಕ್ಷದಲ್ಲಿ ಪ್ರಾಮಾಣಿಕನಾಗಿ ಕೆಲಸ ಮಾಡಿದ್ದೇನೆ. ಮುಂದೆ ಪಕ್ಷ ನಮ್ಮನ್ನು ಗುರುತಿಸುತ್ತೆ ಎಂದು ಭಾವಿಸಿದ್ದೇನೆ. ಲಕ್ಷ್ಮಣ್ ಸವದಿ ಅವರ ಆಗಮನದಿಂದ ಮೂಲ ಕಾಂಗ್ರೆಸ್ಸಿಗರನ್ನು ಬಿಟ್ಟು ಸವದಿ ಅವರು ಮತ್ತೊಂದು ಟೀಂ ಮಾಡಬಹುದೆಂದು ನಮಲ್ಲಿ ಒಂದು ಅಳುಕಿತ್ತು. ಈಗ ಸವದಿ ಅವರ ಜೊತೆಗೆ ಮಾತುಕತೆ ಮಾಡಲಾಗಿದೆ. ಅವರು ಭರವಸೆ ನೀಡಿದ್ದು, ಎಲ್ಲರೂ ಜೊತೆಯಾಗಿ ಪಕ್ಷವನ್ನು ಕಟ್ಟೋಣ ಎಂದು ಹೇಳಿದ್ದಾರೆ. ನಮ್ಮಲ್ಲಿ ಯಾವುದೇ ಬಂಡಾಯ ಏಳುವ ಪ್ರಶ್ನೆಯೇ ಇಲ್ಲ. ಪಕ್ಷವನ್ನು ಗೆಲ್ಲಿಸಲು ನಾವು ಪ್ರಾಮಾಣಿಕವಾಗಿ ಪ್ರಯತ್ನ ಮಾಡುತ್ತೇವೆ ಎಂದು ಅವರು ಹೇಳಿದರು.
ಇದನ್ನೂ ಓದಿ:ಸೋಮಣ್ಣ ಬಲಿಯಾಗಲು ವರುಣಾಗೆ ಬಂದಿಲ್ಲ, ಬಲಿ ತೆಗೆದುಕೊಳ್ಳಲು ಬಂದಿದ್ದಾರೆ: ಪ್ರತಾಪ್ ಸಿಂಹ
ಕಾಂಗ್ರೆಸ್ ಮೂರನೇ ಅಭ್ಯರ್ಥಿಗಳ ಪಟ್ಟಿ:ವಿಧಾನಸಭೆ ಚುನಾವಣೆ ಹಿನ್ನೆಲೆ ಕಾಂಗ್ರೆಸ್ ಮೂರನೇ ಪಟ್ಟಿಯನ್ನು ಬಿಡುಗಡೆಗೊಳಿಸಿದೆ. 43 ಅಭ್ಯರ್ಥಿಗಳ ಹೆಸರನ್ನು ಪ್ರಕಟಿಸಲಾಗಿದೆ. 15 ಕ್ಷೇತ್ರಗಳಿಗೆ ಅಭ್ಯರ್ಥಿಗಳ ಘೋಷಣೆ ಬಾಕಿ ಉಳಿಸಲಾಗಿದೆ. ವರುಣಾ ಕ್ಷೇತ್ರದ ಜೊತೆ ಕೋಲಾರದಿಂದ ಸ್ಪರ್ಧೆ ಬಯಸಿದ್ದ ಸಿದ್ದರಾಮಯ್ಯ ಅವರಿಗೆ ಟಿಕೆಟ್ ನೀಡಿಲ್ಲ. ಕೋಲಾರ ಕ್ಷೇತ್ರಕ್ಕೆ ಕೊತ್ತೂರು ಜಿ.ಮಂಜುನಾಥ್ ಅವರಿಗೆ ಟಿಕೆಟ್ ಕೊಡಲಾಗಿದೆ.