ಅಥಣಿ: ಸೇವೆಯಿಂದ ನಿವೃತ್ತಿ ಹೊಂದಿದ ಜಿಲ್ಲಾಧಿಕಾರಿ ಎಸ್. ಬಿ.ಬೊಮ್ಮನಹಳ್ಳಿ ಅವರನ್ನು ಗಚ್ಚಿನ ಮಠದ ಶ್ರೀ ಶಿವಬಸವ ಮಹಾಸ್ವಾಮಿಗಳು ಸನ್ಮಾನಸಿ ಸತ್ಕರಿಸಿದರು.
ಈ ವೇಳೆ ಮಾತನಾಡಿದ ಸ್ವಾಮೀಜಿ, ಬೆಳಗಾವಿ ಜಿಲ್ಲೆಯಲ್ಲಿ ದಕ್ಷತೆ ಮತ್ತು ಪ್ರಾಮಾಣಿಕತೆಯಿಂದ ಸೇವೆ ಸಲ್ಲಿಸಿದ ಜಿಲ್ಲಾಧಿಕಾರಿ ನಿವೃತ್ತಿ ಹೊಂದಿದ್ದಾರೆ. ಜಿಲ್ಲೆಗೆ ನೆರೆ ಬಂದ ಸಮಯದಲ್ಲಿ ಅವರ ಜನಪರ ಕಾಳಜಿ ಮತ್ತು ಕೆಲಸ ನಿರ್ವಹಿಸಿದ ರೀತಿ ಹಾಗೂ ಜನರಿಗೆ ಅಧಿಕಾರಿಯಾಗಿ ಸ್ಪಂದಿಸಿದ ಅವರ ಕಾರ್ಯ ಜಿಲ್ಲೆಯ ಜನರ ಮನಸ್ಸಿನಲ್ಲಿ ಅಚ್ಚಳಿಯದೆ ಉಳಿಯುತ್ತವೆ ಎಂದರು.
ನಿವೃತ್ತ ಜಿಲ್ಲಾಧಿಕಾರಿ ಎಸ್ ಬಿ ಬೊಮ್ಮನಹಳ್ಳಿಯನ್ನು ಸನ್ಮಾನಿಸಿದ ಗಚ್ಚಿನ ಮಠದ ಸ್ವಾಮೀಜಿ
ನಿವೃತ್ತ ಜಿಲ್ಲಾಧಿಕಾರಿ ಎಸ್. ಬಿ.ಬೊಮ್ಮನಹಳ್ಳಿ ಅವರನ್ನು ಗಚ್ಚಿನ ಮಠದ ಶ್ರೀ ಶಿವಬಸವ ಮಹಾಸ್ವಾಮೀಗಳು ಸನ್ಮಾನಸಿದರು.
Athani
ಮಾಹಾಮಾರಿ ಕೊರೊನಾ ಜಿಲ್ಲೆಯ ಹಲವೆಡೆ ಕಾಣಿಸಿಕೊಂಡಾಗ ಅಧೀನ ಅಧಿಕಾರಿಗಳ ಜೊತೆಗೆ ಬೊಮ್ಮನಹಳ್ಳಿ ಅವರು ದಿನದ ಇಪ್ಪತ್ನಾಲ್ಕು ಘಂಟೆಯೂ ಅವಿರತವಾಗಿ ಕರ್ತವ್ಯ ಪಾಲನೆ ಮಾಡಿದ್ದಾರೆ. ಲಾಕ್ ಡೌನ್ ಜನರಿಗೆ ತೊಂದರೆ ಆಗದಂತೆ ಸಹಕರಿಸಿದ್ದು, ಅವರಲ್ಲಿನ ಜೀವಪರ ಮತ್ತು ಜನಪರ ಕಾಳಜಿಗೆ ಹಿಡಿದ ಕನ್ನಡಿಯಾಗಿದೆ. ನಿವೃತ್ತಿ ನಂತರದ ಅವರ ಜೀವನವು ಸುಖ ಶಾಂತಿಯಿಂದ ಕೂಡಿರಲಿ, ಅವರಲ್ಲಿ ಇನ್ನಷ್ಟು ಉತ್ಸಾಹ ಹಾಗೂ ಚೈತನ್ಯವನ್ನು ದೇವರು ಕರುಣಿಸಲಿ ಎಂದು ಆಶಿರ್ವದಿಸಿದರು.
ಈ ವೇಳೆ ತೆಲಸಂಗದ ಹಿರೇಮಠದ ವೀರೇಶ ದೇವರು ಮತ್ತು ನೀಲಾಂಬಿಕಾ ಬೊಮ್ಮನಹಳ್ಳಿ ಅವರು ಉಪಸ್ಥಿತರಿದ್ದರು.