ಬೆಳಗಾವಿ: ಕೋವಿಡ್ ಎಂಬುದು ರಾಷ್ಟ್ರದ ಸಮಸ್ಯೆ. ಈಗಾಗಲೇ ಕೇಂದ್ರ ಸರ್ಕಾರ ನಿಯಮಗಳನ್ನು ಬಿಡುಗಡೆ ಮಾಡಿದೆ. ರಾಜ್ಯ ಸರ್ಕಾರ ಕೂಡ ನಿಯಮಗಳನ್ನು ಜಾರಿಗೆ ತಂದಿದ್ದು, ಯಾರು ಭಯ ಪಡುವ ಅಗತ್ಯವಿಲ್ಲ ಎಚ್ಚರಿಕೆಯಿಂದ ಇರಬೇಕು ಎಂದು ಮಾಜಿ ಡಿಸಿಎಂ ಜಿ ಪರಮೇಶ್ವರ್ ಹೇಳಿದರು.
ಬೆಳಗಾವಿ ನಗರದಲ್ಲಿ ಮಾಧ್ಯಮಗಳ ಜೊತೆ ಮಾತನಾಡಿದ ಅವರು, ಅವಧಿ ಪೂರ್ಣ ಚುನಾವಣೆ ಬರುತ್ತದೆ ಎಂದು ಅನ್ನಿಸುವುದಿಲ್ಲ. ಮುಂದಿನ ಮೂರು ತಿಂಗಳಲ್ಲಿ ಚುನಾವಣೆ ಬರುತ್ತದೆ. ಹಲವು ಇಲಾಖೆಗಳು ಚುನಾವಣೆಗೆ ತಯಾರಾಗಬೇಕು. ಮತದಾರರ ಪಟ್ಟಿಯಲ್ಲಿ ಹಲವು ಗೊಂದಲಗಳು ಕಾಣಿಸಿಕೊಂಡಿರುವುದರಿಂದ ಅವಧಿ ಮುಂಚೆಯೇ ಚುನಾವಣೆ ಬರುತ್ತದೆ ಎಂದು ಅನ್ನಿಸುವುದಿಲ್ಲ ಎಂದರು.
ಕಾಂಗ್ರೆಸ್ನಲ್ಲಿ ತಮ್ಮನ್ನು ಕಡೆಗಣಿಸುತ್ತಿರುವ ವಿಚಾರದ ಕುರಿತು ಮಾತನಾಡಿ, ನಮ್ಮಲ್ಲಿ ಯಾರನ್ನು ಕಡೆಗಣಿಸಲಾಗಿಲ್ಲ. ಒಬ್ಬೊಬ್ಬರಿಗೆ ಒಂದೊಂದು ರೀತಿಯ ನಾಯಕತ್ವ ಇದೆ. ಎಲ್ಲ ನಾಯಕರು ಜೊತೆಯಾಗಿ ಜಿಲ್ಲೆಗಳ ಪ್ರವಾಸ ಮಾಡುತ್ತೇವೆ. ಒಟ್ಟಿಗೆ ಹೋಗುವ ನಿರ್ಧಾರ ಮಾಡ್ತಿವಿ ಎಂದು ಹೇಳಿದರು. ಸದಾಶಿವ ಆಯೋಗ ವರದಿ ಜಾರಿ ಕುರಿತು, ಹಿಂದೆ ಆಗಿರೋದನ್ನ ಬಿಟ್ಟು ಬಿಡೋಣ. ಮುಂದಿನ ದಿನಗಳಲ್ಲಿ ಅವರಿಗೆ ನ್ಯಾಯ ಒದಗಿಸೋದ್ರಲ್ಲಿ ಅನುಮಾನವಿಲ್ಲ.