ಬೆಳಗಾವಿ: ಪಶ್ಚಿಮಘಟ್ಟ ಪ್ರದೇಶದಲ್ಲಿ ಧಾರಾಕಾರ ಮಳೆ ಸುರಿಯುತ್ತಿರುವ ಹಿನ್ನೆಲೆ ಜಿಲ್ಲೆಯಿಂದ 70 ಕಿಮೀ ದೂರದಲ್ಲಿರುವ ಗೋಕಾಕ್ ಫಾಲ್ಸ್ನ ಘಟಪ್ರಭಾ ನದಿ ಮೈದುಂಬಿ ಹರಿಯುತ್ತಿದೆ. ಭಾರತದ ನಯಾಗರ ಜಲಪಾತ ಎಂದೇ ಹೆಸರುವಾಸಿಯಾಗಿರುವ ಗೋಕಾಕ್ ಫಾಲ್ಸ್ನ ನಯನ ಮನೋಹರ ದೃಶ್ಯವನ್ನು ನೋಡಲು ಬರುವವರ ಸಂಖ್ಯೆ ಹೆಚ್ಚಳವಾಗುತ್ತಿದ್ದು, ಮೈ ಜುಮ್ಮೆನ್ನುವಷ್ಟರ ಮಟ್ಟಿಗೆ ಜಲಪಾತದ ಭೋರ್ಗರೆತ ಹಾಲಿನ ನೊರೆಯಂತೆ ಧುಮ್ಮಿಕ್ಕುತ್ತಿದೆ.
ನಯನ ಮನೋಹರ ಗೋಕಾಕ ಫಾಲ್ಸ್ ! - Gokak Falls
ಗೋಕಾಕ್ ಫಾಲ್ಸ್ನ ನಯನ ಮನೋಹರ ದೃಶ್ಯ ನೋಡಲು ಬರುವವರ ಸಂಖ್ಯೆ ಹೆಚ್ಚಳವಾಗುತ್ತಿದೆ. ಇನ್ನು ಜಲಪಾತದ ತುತ್ತ ತುದಿಗೆ ಹೋಗಿ ಯುವಕರ ಗುಂಪು ಮೋಜು-ಮಸ್ತಿ ಮಾಡುತ್ತಿದ್ದು ಸ್ಥಳೀಯ ಪೊಲೀಸರು ಮಾತ್ರ ಕಣ್ಮುಚ್ಚಿ ಕುಳಿತಿದ್ದಾರೆ ಎಂಬ ಆರೋಪ ಕೇಳಿ ಬಂದಿದೆ.
ಆದರೆ ಗೋಕಾಕ್ ಜಲಪಾತದ ತುತ್ತ ತುದಿಗೆ ಹೋಗಿ ಯುವಕರ ಗುಂಪು ಮೋಜು-ಮಸ್ತಿ ಮಾಡುತ್ತಿದ್ದರೂ ಸ್ಥಳೀಯ ಪೊಲೀಸರು ಮಾತ್ರ ಕಣ್ಮುಚ್ಚಿ ಕುಳಿತಿದ್ದಾರೆ ಎಂಬ ಆರೋಪ ಕೇಳಿ ಬಂದಿದೆ.
ಸ್ಥಳದಲ್ಲಿ ಆದ್ರೆ, ಪೊಲೀಸರಿಲ್ಲದ ಕಾರಣ ಜಲಪಾತ ಸಮೀಪವೇ ಯುವಕರು ಸೇರಿದಂತೆ ಪೋಷಕರು, ಮಕ್ಕಳು ಸೆಲ್ಪಿಗಳಿಗೆ ಪೋಸು ಕೊಡುತ್ತಿದ್ದಾರೆ. ಜಿಲ್ಲೆಯಲ್ಲಿ ಹೆಚ್ಚುತ್ತಿರುವ ಮಳೆಯಿಂದಾಗಿ ಗೋಕಾಕ್ ಫಾಲ್ಸ್ನ ಸಮೀಪಕ್ಕೆ ಪ್ರವಾಸಿಗರು ತೆರಳದಂತೆ ಮುನ್ನೆಚ್ಚರಿಕೆ ವಹಿಸದಿದ್ದರೆ ಅಪಾಯ ಉಂಟಾಗುವ ಸಾಧ್ಯತೆಗಳಿವೆ. ಹೀಗಾಗಿ ತಾಲೂಕಾಡಳಿತ ಸೂಕ್ತ ಕ್ರಮ ಕೈಗೊಳ್ಳಬೇಕಿದೆ ಎಂಬುದು ಪ್ರಜ್ಞಾವಂತರ ಆಗ್ರಹವಾಗಿದೆ.