ಬೆಳಗಾವಿ: ಸರ್ಕಾರದ ಕೋಟಾದಡಿ ಖಾಸಗಿ ಆಸ್ಪತ್ರೆಗಳಲ್ಲೂ ಕೊರೊನಾ ಸೋಂಕಿತರಿಗೆ ಉಚಿತ ಚಿಕಿತ್ಸೆ ನೀಡಲಾಗುತ್ತಿದೆ ಎಂದು ಜಿಲ್ಲಾಧಿಕಾರಿ ಎಂ ಜಿ ಹಿರೇಮಠ ಹೇಳಿದರು.
ನಗರದಲ್ಲಿ ಮಾಧ್ಯಮದವರೊಂದಿಗೆ ಮಾತನಾಡಿದ ಅವರು, ಸೋಂಕಿತರು ಬಿಮ್ಸ್ ಆಸ್ಪತ್ರೆಗೆ ದಾಖಲಾಗದೇ ಖಾಸಗಿ ಆಸ್ಪತ್ರೆಗಳಲ್ಲೂ ದಾಖಲಾಗಬೇಕು. ಅವರಿಗೆ ಅಲ್ಲಿ ಸರ್ಕಾರಿ ಕೋಟಾದಡಿ ಉಚಿತ ಚಿಕಿತ್ಸೆ ನೀಡಲಾಗುವುದು. ಯಾರೂ ಕೂಡ ಹಣ ತುಂಬಬಾರದು ಎಂದರು.
ಜಿಲ್ಲಾಧಿಕಾರಿ ಮಹಾಂತೇಶ ಹಿರೇಮಠ ಮಾತನಾಡಿದರು ಕೋವಿಡ್ ಸೋಂಕು ಹಳ್ಳಿಗಳಿಗೂ ವ್ಯಾಪಿಸುತ್ತಿರುವ ಹಿನ್ನೆಲೆ ಸುರಕ್ಷತಾ ಕ್ರಮವಾಗಿ ಮೇ 24ರಿಂದ ಎಲ್ಲ ಹಳ್ಳಿಗಳಲ್ಲೂ ಕೋವಿಡ್ ಪರೀಕ್ಷೆ ನಡೆಸಲಾಗುತ್ತಿದೆ. ಈಗಾಗಲೇ 400 ಹಳ್ಳಿಗಳನ್ನು ಕವರ್ ಮಾಡಲಾಗುತ್ತಿದ್ದು, ಪರೀಕ್ಷೆಯಿಂದ ಹಳ್ಳಿಗಳಲ್ಲಿ ಸೋಂಕು ತಡೆಯಲು ಅನುಕೂಲವಾಗಲಿದೆ. ಸೋಂಕಿತರು ಪತ್ತೆಯಾದರೆ ಸಮೀಪದ ಕೋವಿಡ್ ಕೇರ್ ಸೆಂಟರ್ಗೆ ಸೇರಿಸಿ ಚಿಕಿತ್ಸೆ ನೀಡುತ್ತೇವೆ. ಇದರಿಂದ ಸೋಂಕು ಪ್ರಸಾರ ತಡೆಯುವುದು ಸುಲಭವಾಗುತ್ತದೆ. ಜಿಲ್ಲೆಯಲ್ಲಿ 1800ಕ್ಕೂ ಹೆಚ್ಚು ಹಳ್ಳಿಗಳು ಇವೆ. ಎಲ್ಲ ಹಳ್ಳಿಗಳಲ್ಲೂ ಪರೀಕ್ಷೆಗಳು ಆಗಬೇಕು. ಯಾವುದನ್ನೂ ಬಿಡುವುದಿಲ್ಲ. ಎಲ್ಲರಿಗೂ ಟೆಸ್ಟ್ ಮಾಡುತ್ತೇವೆ ಎಂದರು.
ಸೋಂಕು ಈಗ ಹತೋಟಿಗೆ ಬರುತ್ತಿದ್ದು, ತಾಲೂಕು ಆಸ್ಪತ್ರೆಗಳಲ್ಲೂ 30 ಆಕ್ಸಿಜನ್ ಬೆಡ್‍ಗಳಿವೆ. ಚಿಕ್ಕೋಡಿಯಲ್ಲಿ 10, ಬೆಳಗಾವಿಯಲ್ಲಿ 30 ಬೆಡ್ಗಳು ಖಾಲಿ ಇದ್ದು, ಈ ಬಗ್ಗೆ ವಾರ್ ರೂಂಗೆ ಸಂಪರ್ಕಿಸಿ ಮಾಹಿತಿ ಪಡೆದುಕೊಳ್ಳಬಹುದು. ಇತ್ತ ಬಿಮ್ಸ್ನಲ್ಲಿ ಯಾರೂ ಸಂಪರ್ಕಕ್ಕೆ ಸಿಗುತ್ತಿಲ್ಲ ಎಂಬ ದೂರುಗಳು ನನ್ನ ಗಮನಕ್ಕೂ ಬಂದಿದೆ. ಆದ್ರೆ, ಬೀಮ್ಸ್ನಲ್ಲಿ ಹೆಲ್ಪ್ಲೈನ್ ವ್ಯವಸ್ಥೆ ಇದ್ದು, ಸಂಪರ್ಕದಲ್ಲಿ ಯಾವುದೇ ಸಮಸ್ಯೆಗಳಿದ್ದರೆ ಪರಿಶೀಲಿಸಿ ಸರಿಪಡಿಸಲಾಗುವುದು ಎಂದರು.
ಓದಿ:Lockdown: ಐದು ಕಿ.ಮೀ ತಳ್ಳುವ ಗಾಡಿಯಲ್ಲಿ ಪತಿಯನ್ನು ಗದಗ ಜಿಲ್ಲಾಸ್ಪತ್ರೆಗೆ ಕರೆತಂದ ಪತ್ನಿ!