ಕರ್ನಾಟಕ

karnataka

ETV Bharat / state

ಕೊರೊನಾ ವದಂತಿ​:  ಚಿಕ್ಕೋಡಿ ಪಟ್ಟಣದಲ್ಲಿ ಉಚಿತವಾಗಿ ಕೋಳಿ ವಿತರಣೆ - ಚಿಕ್ಕೋಡಿ ಪಟ್ಟಣದಲ್ಲಿ ಉಚಿತವಾಗಿ ಕೋಳಿ ವಿತರಣೆ

ಚಿಕನ್ ತಿಂದರೆ ಕೊರೊನಾ ಬರುತ್ತದೆ ಎನ್ನುವ ವದಂತಿ ಹಬ್ಬಿದ ಹಿನ್ನೆಲೆಯಲ್ಲಿ ಕೋಳಿ ಮಾರಾಟದಲ್ಲಿ ಭಾರೀ ಇಳಿಕೆಯಾಗಿದೆ. ಈ ಹಿನ್ನೆಲೆ ಬೆಳಗಾವಿ ಜಿಲ್ಲೆಯ ಚಿಕ್ಕೋಡಿ ಪಟ್ಟಣದ ವಿವಿಧ ಬಡವಾಣೆಗಳಲ್ಲಿ ಉಚಿತವಾಗಿ ಕೋಳಿಗಳನ್ನು ನೀಡುವ ದೃಶ್ಯ ಕಂಡು ಬಂತು.

Free chicken distribution
ಉಚಿತವಾಗಿ ಕೋಳಿ ವಿತರಣೆ

By

Published : Mar 15, 2020, 4:03 AM IST

ಚಿಕ್ಕೋಡಿ: ಕೊರೊನಾ ಎಫೆಕ್ಟನಿಂದ ಕೋಳಿ ಮಾರುಕಟ್ಟೆ ವ್ಯಾಪಾರ ವಹಿವಾಟು ಕುಸಿದ ಹಿನ್ನೆಲೆ ಉಚಿತವಾಗಿ ಕೋಳಿ ವಿಚರಣೆ ಮಾಡಲಾಯಿತು.

ಚಿಕನ್ ತಿಂದರೆ ಕೊರೊನಾ ಬರುತ್ತದೆ ಎನ್ನುವ ವದಂತಿ ಹಬ್ಬಿದ ಹಿನ್ನೆಲೆಯಲ್ಲಿ ಭಾರೀ ಪ್ರಮಾಣದಲ್ಲಿ ಕೋಳಿ‌ ಮಾರಾಟದಲ್ಲಿ ಇಳಿಕೆಯಾಗಿದೆ. ಹೀಗಾಗಿ ಬೆಳಗಾವಿ ಜಿಲ್ಲೆಯ ಚಿಕ್ಕೋಡಿ ಪಟ್ಟಣದ ವಿವಿಧ ಬಡವಾಣೆಗಳಾದ ಪ್ರಭುವಾಡಿ, ರಾಮನಗರ, ಝಾರಿಗಲ್ಲಿಗಳಲ್ಲಿ 5 ಈಚರ್​ ವಾಹನದಲ್ಲಿ 5 ಸಾವಿರಕ್ಕೂ ಅಧಿಕ ಕೋಳಿಗಳನ್ನು ಚಿಕ್ಕೋಡಿ ಪಟ್ಟಣದ ಸುತ್ತಮುತ್ತಲಿನ ಕೋಳಿ ವ್ಯಾಪಾರಸ್ಥರು ಉಚಿತವಾಗಿ ನೀಡಿದ್ರು.

ಉಚಿತವಾಗಿ ಕೋಳಿ ವಿತರಣೆ

ಇತ್ತೀಚೆಗಷ್ಟೆ ಬೆಳಗಾವಿ ಜಿಲ್ಲೆಯ ಗೋಕಾಕನಲ್ಲಿ 5 ಸಾವಿರಕ್ಕಿಂತ ಹೆಚ್ಚು ಕೋಳಿಗಳನ್ನು ಜೀವಂತ ಸಮಾಧಿ ಮಾಡಿರುವ ಘಟನೆ ನಡೆದಿತ್ತು. ಒಟ್ಟಾರೆಯಾಗಿ ಹಕ್ಕಿ ಜ್ವರ ಹಾಗೂ ಕೊರೊನಾ ವೈರಸ್ ವದಂತಿ ಹಿನ್ನೆಲೆಯಲ್ಲಿ ಕೋಳಿ ವ್ಯಾಪಾರಸ್ಥರು ಕೋಳಿಗಳನ್ನು ಉಚಿತವಾಗಿ ಮಾರಾಟ ಮಾಡಲು ಮುಂದಾಗಿದ್ದು, ಇದರಿಂದ ಕೋಳಿ ಉದ್ಯಮಿದಾರರು ಅಕ್ಷರಶಃ ಬೀದಿಗೆ ಬಂದಂತಾಗಿದೆ.

ABOUT THE AUTHOR

...view details