ಬೆಳಗಾವಿ:ಈಜಲು ಹೋಗಿದ್ದ ನಾಲ್ವರು ಸ್ನೇಹಿತರು ಘಟಪ್ರಭಾ ನದಿಯಲ್ಲಿ ಮುಳುಗಿ ನೀರು ಪಾಲಾಗಿರುವ ಘಟನೆ ಬೆಳಗಾವಿ ಜಿಲ್ಲೆಯ ಗೋಕಾಕ ತಾಲೂಕಿನ ದೂಪದಾಳ ಗ್ರಾಮದ ಬಳಿ ಇಂದು (ಶುಕ್ರವಾರ) ನಡೆದಿದೆ. ಮೃತರನ್ನು ಸಂತೋಷ ಬಾಬು ಇಟಗಿ(18), ಅಜಯ್ ಬಾಬು ಜೋರೆ(18), ಕೃಷ್ಣಾ ಬಾಬು ಜೋರೆ(22) ಮತ್ತು ಆನಂದ ಕೋಕರೆ(19) ಎಂದು ಗುರುತಿಸಲಾಗಿದೆ.
ಘಟಪ್ರಭಾ ನದಿಯಲ್ಲಿ ಮುಳುಗಿ ನಾಲ್ವರು ಸ್ನೇಹಿತರು ಸಾವು - ಉತ್ತರಕನ್ನಡ ಜಿಲ್ಲೆಯ ಮುಂಡಗೋಡ
ಮೃತರನ್ನು ಉತ್ತರ ಕನ್ನಡ ಜಿಲ್ಲೆಯ ಮುಂಡಗೋಡ ತಾಲೂಕಿನ ಹಿರಿಗೆರೆ ಗ್ರಾಮದವರೆಂದು ಗುರುತಿಸಲಾಗಿದೆ.
ಘಟಪ್ರಭಾ ನದಿ
ಮೃತಪಟ್ಟ ನಾಲ್ವರು ಯುವಕರು ಉತ್ತರ ಕನ್ನಡದ ಮುಂಡಗೋಡ ತಾಲೂಕಿನ ಹಿರಿಗೆರೆ ಗ್ರಾಮದವರು ಎಂಬ ಮಾಹಿತಿ ಲಭ್ಯವಾಗಿದೆ. ಘಟಪ್ರಭಾದ ಬಾರ್‌ವೊಂದರಲ್ಲಿ ಇವರು ಕೆಲಸ ಮಾಡುತ್ತಿದ್ದರು. ಇಂದು ರಜೆ ಇದ್ದುದರಿಂದ ಈಜಲು ಹೋಗಿದ್ದರು ಎಂದು ತಿಳಿದುಬಂದಿದೆ. ಘಟಪ್ರಭಾ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ಘಟನೆ ಜರುಗಿದೆ.
ಇದನ್ನೂಓದಿ:ಮಡಿಕೇರಿಯಲ್ಲಿ ಕಾರು-ಕೆಎಸ್ಆರ್ಟಿಸಿ ಬಸ್ ನಡುವೆ ಅಪಘಾತ: 6 ಜನ ಸಾವು