ಗೋಕಾಕ್:ತಂದೆಯೋರ್ವ ತನ್ನ ಇಬ್ಬರು ಗಂಡು ಮಕ್ಕಳಿಗೆ ಮನೆಯಲ್ಲಿಯೇ ನೇಣು ಹಾಕಿ ತನ್ನ ಪತ್ನಿ ಜತೆ ತಾನೂ ನೇಣು ಹಾಕಿಕೊಂಡು ಆತ್ಮಹತ್ಯೆ ಮಾಡಿಕೊಂಡ ಹೃದಯವಿದ್ರಾವಕ ಘಟನೆ ತಾಲೂಕಿನ ಹೊಸೂರ (ಕೈತನಾಳ) ಗ್ರಾಮದಲ್ಲಿ ಇಂದು ಸಂಜೆ 7 ಗಂಟೆ ಸುಮಾರಿಗೆ ಜರುಗಿದೆ.
ಮಕ್ಕಳಿಬ್ಬರಿಗೆ ನೇಣು ಹಾಕಿ ಪತಿ-ಪತ್ನಿ ಇಬ್ಬರೂ ನೇಣಿಗೆ ಶರಣು.. ಏನಾಗಿತ್ತೋ ಏನೋ? - our peopels commited sucide in gokak
ಗೋಕಾಕ್ ತಾಲೂಕಿನ ಹೊಸುರ ಗ್ರಾಮದಲ್ಲಿ ತಂದೆಯೊಬ್ಬ ತನ್ನ ಇಬ್ಬರು ಮಕ್ಕಳಿಗೆ ನೇಣು ಹಾಕಿ ತಾನು ತನ್ನ ಪತ್ನಿಯೊಂದಿಗೆ ಆತ್ಮಹತ್ಯೆಗೆ ಶರಣಾಗಿದ್ದಾರೆ.

ನೇಣಿಗೆ ಶರಣು
ಭೀಮಪ್ಪ ಸಿದ್ದಪ್ಪ ಚೂನಪ್ಪಗೋಳ (45) ಎಂಬಾತ ಮೊದಲು ತನ್ನ ಮಕ್ಕಳಾದ ಪ್ರದೀಪ್ (8) ಹಾಗೂ ಮೋಹನ್ (6) ಎಂಬಿಬ್ಬರು ಮಕ್ಕಳಿಗೆ ನೇಣು ಹಾಕಿದಾನೆ. ಅವರಿಬ್ಬರೂ ಪ್ರಾಣಬಿಟ್ಟ ಮೇಲೆ ನಂತರ ಪತ್ನಿ ಮಂಜುಳಾ ಜತೆಗೆ ಒಂದೇ ಖುರ್ಚಿಯಲ್ಲಿ ನಿಂತು ನೇಣು ಹಾಕಿಕೊಂಡು ಆತ್ಮಹತ್ಯೆ ಮಾಡಿಕೊಂಡಿದ್ದಾರೆ. ಆತ್ಮಹತ್ಯೆಗೆ ಕಾರಣವೇನೆಂದು ಇನ್ನೂ ತಿಳಿದು ಬಂದಿಲ್ಲ. ಘಟನಾ ಸ್ಥಳಕ್ಕೆ ಪೊಲೀಸರು ಧಾವಿಸಿ ಪರಿಶೀಲನೆ ನಡೆಸುತ್ತಿದ್ದಾರೆ. ಈ ನಾಲ್ವರ ಆತ್ಮಹತ್ಯೆಯಿಂದ ಇಡೀ ಗ್ರಾಮದವೇ ಬೆಚ್ಚಿಬಿದಿದ್ದಿದೆ. ಊರಲ್ಲೀಗ ಸ್ಮಶಾನ ಮೌನ ಆವರಿಸಿದೆ.
TAGGED:
gokak sucide news