ಕರ್ನಾಟಕ

karnataka

ETV Bharat / state

ಬೆಳಗಾವಿ: ಭೀಕರ ರಸ್ತೆ ಅಪಘಾತದಲ್ಲಿ ನಾಲ್ವರು ಸಾವು - ಟ್ರಕ್ ಹಾಗೂ ಕಾರು ನಡುವೆ ಭೀಕರ ರಸ್ತೆ ಅಪಘಾತ

ಭೀಕರ ರಸ್ತೆ ಅಪಘಾತದಲ್ಲಿ ನಾಲ್ವರು ಸ್ಥಳದಲ್ಲೇ ಮೃತಪಟ್ಟ ಘಟನೆ ನಡೆದಿದೆ.

Four killed in a road accident
ಭೀಕರ ರಸ್ತೆ ಅಪಘಾತ

By

Published : May 27, 2022, 12:28 PM IST

ಚಿಕ್ಕೋಡಿ (ಬೆಳಗಾವಿ): ಟ್ರಕ್ ಹಾಗೂ ಕಾರಿನ ನಡುವೆ ಭೀಕರ ರಸ್ತೆ ಅಪಘಾತ ಸಂಭವಿಸಿದ್ದು ಕಾರಿನಲ್ಲಿದ್ದ ನಾಲ್ವರು ಸ್ಥಳದಲ್ಲೇ ಮೃತಪಟ್ಟ ಘಟನೆ ನಿಪ್ಪಾಣಿ ಹೊರವಲಯದಲ್ಲಿ ನಡೆದಿದೆ. ಅಪಘಾತದ ರಭಸಕ್ಕೆ ಕಾರು ಸಂಪೂರ್ಣ ನಜ್ಜುಗುಜ್ಜಾಗಿದೆ.


ಅದಗೋಂಡಾ ಬಾಬು ಪಾಟೀಲ್ (60), ಪತ್ನಿ ಛಾಯಾ ಅದಗೊಂಡ ಪಾಟೀಲ್ (55) ಚಂಪಾತಾಯಿ ಮಗದುಮ್ (80), ಮಹೇಶ್ ದೇವಗೊಂಡ ಪಾಟೀಲ್ (23) ಮೃತರು. ಪೂನಾ-ಬೆಂಗಳೂರು ರಾಷ್ಟ್ರೀಯ ಹೆದ್ದಾರಿಯ ನಾಲ್ಕರಲ್ಲಿ ದುರಂತ ಸಂಭವಿಸಿದೆ. ಮೃತರು ಸಂಚರಿಸುತ್ತಿದ್ದ ಕಾರು ಕೊಲ್ಲಾಪುರದಿಂದ ಬೆಳಗಾವಿ ಕಡೆಗೆ ಹೊರಟಿತ್ತು.


ಸ್ಥಳಕ್ಕೆ ನಿಪ್ಪಾಣಿ ಪೊಲೀಸರು ಭೇಟಿ ನೀಡಿದ್ದು ಕಾರಿನಲ್ಲಿದ್ದ ಶವಗಳನ್ನು ಹೊರತೆಗೆದಿದ್ದಾರೆ.

ABOUT THE AUTHOR

...view details