ಕರ್ನಾಟಕ

karnataka

ETV Bharat / state

ಕೊರೊನಾಗೆ ಇಂದು ಬೆಳಗಾವಿಯಲ್ಲಿ ನಾಲ್ವರು ಬಲಿ: 293 ಜನರಿಗೆ ಸೋಂಕು

ಬೆಳಗಾವಿಯಲ್ಲಿಂದು ಕಿಲ್ಲರ್​ ಕೊರೊನಾಗೆ ನಾಲ್ವರು ಬಲಿಯಾಗಿದ್ದು, ಸೋಂಕಿಗೆ ಬಲಿಯಾದವರ ಸಂಖ್ಯೆ 90ಕ್ಕೆ ಏರಿಕೆಯಾಗಿದೆ. 293 ಜನರಲ್ಲಿ ಸೋಂಕು ಪತ್ತೆಯಾಗಿದೆ.

ಜಿಲ್ಲಾಸ್ಪತ್ರೆ ಬೆಳಗಾವಿ
ಜಿಲ್ಲಾಸ್ಪತ್ರೆ ಬೆಳಗಾವಿ

By

Published : Aug 5, 2020, 8:48 PM IST

ಬೆಳಗಾವಿ:ಜಿಲ್ಲೆಯಲ್ಲಿ ಇಂದು 293 ಜನರಲ್ಲಿ ಸೋಂಕು ಪತ್ತೆಯಾಗಿದ್ದು, ಕೊರೊನಾ ಸೋಂಕಿತರ ಸಂಖ್ಯೆ 4237ಕ್ಕೆ ಏರಿಕೆಯಾಗಿದೆ.

ಇಂದು ಒಂದೇ ದಿನ ಜಿಲ್ಲೆಯಲ್ಲಿ ನಾಲ್ವರು ಕೊರೊನಾದಿಂದ ಮೃತಪಟ್ಟಿದ್ದಾರೆ. ಬೆಳಗಾವಿಯಲ್ಲಿ ಕೊರೊನಾ ಸೋಂಕಿಗೆ ಬಲಿಯಾದವರ ಸಂಖ್ಯೆ 90ಕ್ಕೆ ಏರಿಕೆಯಾಗಿದೆ.

ಇಂದು 52 ಸೋಂಕಿತರು ಗುಣಮುಖರಾಗಿ ಬಿಡುಗಡೆಯಾಗಿದ್ದಾರೆ. 3013 ಸಕ್ರಿಯ ಪ್ರಕರಣಗಳಿದ್ದು, ಜಿಲ್ಲಾಸ್ಪತ್ರೆಯ ಕೋವಿಡ್ ವಾರ್ಡ್ ಹಾಗೂ ಕೋವಿಡ್ ಕೇರ್ ಸೆಂಟರ್​ನಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ.

ABOUT THE AUTHOR

...view details